Advertisement

ನಮ್ಮ ಪ್ರಥಮ ಆದ್ಯತೆ ಕೊಲೆಗೀಡಾದ ರೌಡಿ ಶೀಟರ್ ಕುರಿತಾಗಿರಬೇಕೋ ಅಥವಾ ದೇಶ ಕಾಯುವ ಸೈನಿಕನ ಸಾವಿನ ಕುರಿತಾಗಿರಬೇಕೋ?

Advertisement

ನಿಜ, ಚರ್ಚೆಯಾಗಲೇ ಬೇಕಾಗಿರುವ ವಿಚಾರವಿದು! ಆ ಕುರಿತು ಅನಾಮಿಕ ಲೇಖಕರ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾಮಾಜಿಕ ಕಳಕಳಿಯ ಆ ಲೇಖನವನ್ನು ಇಲ್ಲಿ ಯಥಾವತ್ ಪ್ರಕಟಿಸಲಾಗಿದೆ. ಕೇವಲ 250 ಕಿಲೋಮೀಟರ್ ಅಂತರ ಅಷ್ಟೆ...! ಎರಡು ಸಾವುಗಳು ಅದು ಕೂಡ ಕೆಲವೇ ದಿನಗಳ ಅಂತರದಲ್ಲಿ.. ಓರ್ವ ಹಿಂದೂ, ಇನ್ನೊರ್ವ ಮುಸ್ಲಿಂ.!! ಓರ್ವನನ್ನು ಹಿಂದೂ ಅನ್ನುವುದಕ್ಕಿಂತ ಸಂಘಪರಿವಾರದ ಕಾರ್ಯಕರ್ತ ಅನ್ನುವುದು ಸೂಕ್ತ. ಹಾಗೆಯೇ ಆತ ರೌಡಿಶೀಟರ್ ಕೂಡ ಹೌದು! ಆದರೆ ಆತನ ಸಾವನ್ನು ಹುತಾತ್ಮರ ಸಾಲಿಗೆ ಸೇರಿಸಲಾಯಿತು. ಸುಮ್ಮನೆ (ಫೇಸ್‌ಬುಕ್‌) ಪುಟಗಳನ್ನು ತಿರುವಿ ಹಾಕಿದರೇ ಆತ ಒರ್ವ ಪಕ್ಕಾ ಮುಸ್ಲಿಂ ದ್ವೇಷಿ , ರಾಷ್ಟ್ರಪಿತನ ಕೊಂದ ಉಗ್ರನನ್ನು ಆರಾಧಿಸಿದವ ಅನ್ನೋದು ಬಿಟ್ಟರೇ ಮತ್ತೊಂದು ಸಾಧನೆ ದುರ್ಭಿನು ಹಾಕಿ ಹುಡುಕಿದರೂ ಗೋಚರಿಸುವುದಿಲ್ಲ!! ಆತನ ಪರವಾಗಿ ಆತನ ಆತ್ಮಶಾಂತಿಗಾಗಿ ಇನ್ನಷ್ಟು ಅಮಾಯಕರನ್ನು ಕಡಿಯುವ, ಬಡಿಯುವ ಮಾತನಾಡಲಾಯಿತು. ದಿನ ಬೆಳಗಾಗುವುದಾರಲ್ಲಿ ಲಕ್ಷಾಂತರ ಹಣ ಸಂಗ್ರಹವಾಯಿತು. ದೂರದ ಉತ್ತರ ಪ್ರದೇಶದಲ್ಲಿ ಆತನ ಪೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸದಾ ಸೈನಿಕರ ಬಗ್ಗೆ ಕರುಳು‌ ಕಿತ್ತುಕೊಂಡು ಬಾಷಣ ಬಿಗಿಯುವವರು ಆತನ ಸಾವಿಗೆ ಓಡೋಡಿ ಬಂದು ಕಣ್ಣಿರಿಟ್ಟರು..!! ಪರಸ್ಪರ ಇಬ್ಬರು ಮತಾಂಧ ಪುಡಿ ರೌಡಿಗಳ ಕಾಳಗ ಕೊಲೆಯಲ್ಲಿ ಅಂತ್ಯವಾದ ಒಂದು ಘಟನೆ ಕೇವಲ ಧಾರ್ಮಿಕ ಕಾರಣಕ್ಕಾಗಿ , ಓಟಿಗಾಗಿ ಅನಗತ್ಯ ಪ್ರಚಾರವನ್ನು ಸಂಘಪರಿವಾರದ ಕೊಟ್ಟು ಬಿಟ್ಟಿತು. ಮೃತ ಹರ್ಷ ಯಾರನ್ನು ದ್ವೇಷಿಸುತ್ತಿದ್ದನೋ ಹಾಗೂ ಯಾರ ದ್ವೇಷಕ್ಕಾಗಿ ಒಂದು ಊರನ್ನು ಹೊತ್ತಿ ಉರಿಸಲಾಯಿತೋ ಅದೇ ಧರ್ಮದ, ಕಳೆದ 19 ವರ್ಷಗಳಿಂದ ಭಾರತೀಯ ಸೇನೆಯ ಎಒಸಿ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಕೊಡುಗೆ ಜಿಲ್ಲೆಯ ವಿರಾಜಪೇಟೆಯ ವೀರ ಯೋಧ ಅಲ್ತಾಪ್ ಅಹಮದ್ (37ವ) ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಒಂದೇ ಸಮನೆ ಸುರಿಯುವ ಹಿಮಪಾತಕ್ಕೆ ದೇಶವನ್ನು ಕಾಯುವಾಗ ಪ್ರಾಣ ಬಿಟ್ಟಿದ್ದ‌ರು. ಆತನ ಸಾವು ಯಾರಿಗೂ ಹುತಾತ್ಮ ಅನಿಸಲೇ ಇಲ್ಲ.. ಕಾರಣ ಆತನ ಸಾವಲ್ಲಿ ಕೇವಲ ದೇಶಭಕ್ತಿ ಮಾತ್ರವೇ ಇತ್ತು. ಮತ್ತಾತ ಮುಸ್ಲಿಮನಾಗಿದ್ದ! ಪರಲೋಕದಲ್ಲಿ ಇವರಿಬ್ಬರೂ ಎದುರು ಬದುರಾದಾಗ ಮೃತ ರೌಡಿಶೀಟರ್ ಯೋಧನನ್ನು ನೋಡಿ ವ್ಯಂಗ್ಯವಾಗಿ ನಕ್ಕಿರಬಹುದು. ಹಾಗೆಯೇ ಆ ಮೃತ ಯೋಧ ದೇಶದ ಈಗಿನ ಸ್ಥಿತಿಗೆ ಮರುಕ ಪಟ್ಟಿರಬಹುದು! ಇಲ್ಲಿ ನಾವು ಮೃತ ಹರ್ಷನನ್ನು ದೂರಿ ಯಾವುದೇ ಪ್ರಯೋಜನವಿಲ್ಲ. ಆತ ಬಾಳಿ ಬದುಕ ಬೇಕಿದ್ದ ಹಾಗೂ ವೃದ್ಧ ತಂದೆ ತಾಯಿಗೆ ಆಸರೆಯಾಗಬೇಕಿದ್ದ ಯುವಕ. ಆತನನ್ನು ಮುಸ್ಲಿಂ ದ್ವೇಷಿಯಾಗಿ ಮಾರ್ಪಾಡಿಸಿದ್ದ ಆತನಲ್ಲಿ 'ಗೋಡ್ಸೆ ಸಿದ್ಧಾಂತ' ವನ್ನು ತುಂಬಿದವರೇ ಇಂದು ಆತನನ್ನು ಹುತಾತ್ಮ ಮಾಡಿದವರು ಆ ಮೂಲಕ ಇನ್ನಷ್ಟು ಪೋಷಕ ರನ್ನು ಬಲಿ ಕೊಡಲು ಕಾದವರು. ವೀರ ಯೋಧನ ಸಾವಿಗಿಂತ ಇವರು ಸೃಷ್ಟಿಸಿದ ವಿಷಜಂತುಗಳೇ ಗ್ರೇಟ್ ಅಂದವರು. ಇಂತಹ ನೀಚರ ಬಗ್ಗೆ ನಾವು ಗಮನ ಹರಿಸಬೇಕಿದೆ. ಹಾಗೆಯೇ, ಹರ್ಷನ ಹತ್ಯೆ ನಡೆಸಿದ ಕೊಲೆಗಟುಕರ ಮನಸ್ಸು ಕೆಡಿಸಿದವರ ಬಗ್ಗೆ ಕೂಡ ದೀರ್ಘವಾಗಿ ಯೋಚಿಸಬೇಕಿದೆ! (ಅನಾಮಿಕ ಲೇಖಕರಿಗೆ ಅನಂತಾನಂತ ಧನ್ಯವಾದಗಳು)

Advertisement
Advertisement
Recent Posts
Advertisement