ಗುಜರಾತ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿ ಕರ್ನಾಟಕದ ಯುವ ಮುಖಂಡ ಬಿ.ಎಂ ಸಂದೀಪ್ ನೇಮಕ

"ಎಐಸಿಸಿ ಕಾರ್ಯದರ್ಶಿಗಳಾದ ಬಿ.ಎಂ ಸಂದೀಪ್ ರವರನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಉಸ್ತುವಾರಿಗಳಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಮೂಲದವರಾದ ಸಂದೀಪ್ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ.

ಹಗಲಿರುಳೆನ್ನದೆ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ, ಅತ್ಯಂತ ನಯವಿನಯದ ಗುಣ ಹೊಂದಿರುವ, ಸದಾ ನಗುಮೊಗದ ಬಿ.ಎಂ ಸಂದೀಪ್ ರವರು ಯುವ ಕಾಂಗ್ರೆಸ್ ನಿಂದ ತನ್ನ ರಾಜಕೀಯ ಬದುಕನ್ನು ಆರಂಭಿಸಿದ್ದರು. ಆ ನಂತರ ಕಾಂಗ್ರೆಸ್ ಪಕ್ಷದ 'ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ' (ಆರ್‌ಜಿಪಿಆರ್‌ಎಸ್)ಯ ಕರ್ನಾಟಕ ರಾಜ್ಯದ ಮುಖ್ಯಸ್ಥರಾಗಿ ಅತ್ಯುತ್ತಮವಾಗಿ ಸಂಘಟಿಸುವ ಮೂಲಕ ರಾಷ್ಟ್ರೀಯ ನಾಯಕರುಗಳ ಗಮನ ಸೆಳೆದಿದ್ದರು ಮತ್ತು ಆ ನಂತರ ಆರ್‌ಜಿಪಿಆರ್‌ಎಸ್ ರಾಷ್ಟ್ರೀಯ ಮುಖ್ಯಸ್ಥರಾಗಿ ಕೂಡ ಕೆಲಸ ಮಾಡಿದ್ದರು.

ಬಿ.ಎಂ ಸಂದೀಪ್ ರವರ ರಾಜಕೀಯ ಬದುಕು ಉಜ್ವಲವಾಗಲಿ ಎಂದು ಕನ್ನಡಮೀಡಿಯಾ ಡಾಟ್ ಕಾಮ್ ಬಳಗ ಶುಭ ಹಾರೈಸುತ್ತದೆ.