Advertisement

ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಹೇರುತ್ತಿರುವ ಸ್ವಯಂಘೋಷಿತ ಹಿಂದೂ ಸಂಘಟನೆಗಳ ಮೇಲೆ ಕ್ರಮಕೈಗೊಳ್ಳಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

Advertisement

ಕಾಪು ಮಾರಿಗುಡಿ ಜಾತ್ರೆಯಲ್ಲಿ ಬಿಜೆಪಿ ನೇತೃತ್ವದ ಕೆಲವು ಸ್ವಯಂಘೋಷಿತ ಹಿಂದೂ ಸಂಘಟನೆಗಳ ದುಷ್ಕರ್ಮಿಗಳು, ಪಾರಂಪಾರಿಕವಾಗಿ ಸ್ಟಾಲ್ ಹಾಕಿ ವ್ಯವಹಾರ ಮಾಡಿಕೊಂಡು ಬಂದಿರುವ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯವಹಾರ ಮಾಡುವುದನ್ನು ನಿಷೇಧಿಸುವ ಬೆದರಿಕೆ ಒಡ್ಡಿ ಪತ್ರಿಕಾ ಹೇಳಿಕೆ ನೀಡಿರುವುದು ಮತ್ತು ಆ ಕುರಿತು ಒಂದು ಇಡೀ ಧರ್ಮದ ವಿರುದ್ದವಾಗಿ ನಿಂದಿಸಿ ಬ್ಯಾನರ್ ಗಳನ್ನು ಅಳವಡಿಕೆ ಮಾಡಿರುವುದನ್ನು ಖಂಡಿಸಿ, ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಧಾರ್ಮಿಕ ಸಮಾರಂಭಗಳಲ್ಲಿ ಮುಸ್ಲಿಂ ವರ್ತಕರ ಅಂಗಡಿ-ಮುಂಗಟ್ಟುಗಳಿಗೆ ಅವಕಾಶ ನೀಡದಿರಲು ಕೆಲವು ಹಿಂದೂ ಸಂಘಟನೆಗಳು ಒತ್ತಡ ಹೇರುತ್ತಿರುವುದು ಕಳವಳಕಾರಿ ಬೆಳವಣಿಗೆ. ಇಂತಹವರ ವಿರುದ್ಧ ಕ್ರಮಕೈಗೊಳ್ಳಬೇಕಾಗಿರುವ ಜಿಲ್ಲಾಡಳಿತ ಮೌನವಾಗಿದ್ದು ಪರೋಕ್ಷ ಬೆಂಬಲ ನೀಡುತ್ತಿರುವುದು ಖಂಡನೀಯ ಎಂದವರು ಹೇಳಿದ್ದಾರೆ.

ಸಂವಿಧಾನದ ಆಶಯಗಳನ್ನು ಪಾಲಿಸುವುದು ಪ್ರತಿಯೊಂದು ಸರ್ಕಾರದ ಮೂಲ ಕರ್ತವ್ಯ. ರಾಜ್ಯದಲ್ಲಿ ಸಂವಿಧಾನಕ್ಕೆ ಸವಾಲು ಹಾಕುತ್ತಿರುವ ಸಂವಿಧಾನೇತರ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಲಾಗದ ರಾಜ್ಯ ಸರ್ಕಾರ ಸಂವಿಧಾನದ ಆಶಯಗಳನ್ನು ರಕ್ಷಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದವರು ಹೇಳಿದರು.

( ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಸ್ವಯಂ ಘೋಷಿತ ಹಿಂದೂ ಸಂಘಟನೆಗಳು ಅಳವಡಿಕೆ ಮಾಡಿರುವ ಫ್ಲೆಕ್ಸ್ )

Advertisement
Advertisement
Recent Posts
Advertisement