Advertisement

"ಹಿಂದೂಗಳು 4ಮಕ್ಕಳನ್ನು ಹೆತ್ತು ಇಬ್ಬರನ್ನು ಆರೆಸ್ಸೆಸ್‌ಗೆ ಕೊಡಬೇಕು" ಎಂಬ ಮನುವಾದಿ ಋತಂಭರಾ ಹೇಳಿಕೆ ಆಕಸ್ಮಿಕವಲ್ಲ, ಅದು ಮತ್ತೆ ಗುಲಾಮಗಿರಿ ಆರಂಭಿಸುವ ಪೂರ್ವ ಸೂಚನೆ!

Advertisement
"ದೇಶದ ಪ್ರತೀ ಹಿಂದೂ ದಂಪತಿಗಳು ನಾಲ್ಕು ಮಕ್ಕಳನ್ನು ಹೆತ್ತು, ಅದರಲ್ಲಿ ಎರಡು ಮಕ್ಕಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೀಡುವ ಸಂಕಲ್ಪವನ್ನು ಮಾಡಬೇಕು ಹಾಗೆ ಮಾಡಿದಲ್ಲಿ ಅದು ರಾಷ್ಟ್ರತ್ಯಾಗಕ್ಕೆ ಕೊಡುಗೆ ನೀಡಿದಂತಾಗುತ್ತದೆ" ಎಂದು ಮನುವಾದಿ ನಾಯಕಿ ಋತಂಭರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿ (ಎಪ್ರಿಲ್ ೧೮) ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮನುವಾದಿ ಸಾಧ್ವಿ ಋತಂಬರಾರ ಈ ಹೇಳಿಕೆಯ ಎರಡು ದಿನಗಳ ಹಿಂದೆ, ಮತ್ತೊಬ್ಬ ಮನುವಾದಿ ಅರ್ಚಕ ಯತಿ ನರಸಿಂಹಾನಂದರ ಸಂಘಟನೆಯು ''ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು" ಎಂಬ ವಿವಾದಿತ ಹೇಳಿಕೆ ಕೊಟ್ಟಿತ್ತು.

ಅದೇ ರೀತಿಯಲ್ಲಿ ವಿವಾದಿತ ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಇದೇ ಸಂಘಟನೆಯ ಮುಖಂಡ ನರಸಿಂಹಾನಂದ "ಮುಂದಿನ ದಶಕಗಳಲ್ಲಿ ದೇಶವು ಹಿಂದೂ ಅಲ್ಪಸಂಖ್ಯಾತ ಆಗುವುದನ್ನು ತಡೆಯಲು ಹಿಂದೂ ಪೋಷಕರು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದೇ ನೀಚ ಮನುವಾದಿಗಳ ಶೋಷಣೆಯ ವಿರುದ್ಧವಾಗಿ ಈ ದೇಶದಲ್ಲಿ "ಪ್ರಜಾಪ್ರಭುತ್ವ" ವನ್ನು ಸ್ಥಾಪನೆ ಮಾಡಿದ್ದು ಸ್ವಾತಂತ್ರ್ಯಾ ನಂತರ ಆಡಳಿತಕ್ಕೆ ಬಂದ ಚಾಚಾ ಜವಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಪಕ್ಷ ಎಂಬ ಸತ್ಯವನ್ನು ಮುಚ್ಚಿಟ್ಟು "ಹಿಂದೂಗಳು ಬಹುಸಂಖ್ಯಾತ ರಾಗಿರುವುದರಿಂದ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ ದೇಶದಲ್ಲಿ ಮುಸ್ಲಿಮರ ಸಂಖ್ಯೆಯೂ ವೃದ್ದಿಸುತ್ತಿದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು" ಎಂದು ಮತ್ತೊಬ್ಬ ಮನುವಾದಿ ಅಖಿಲ ಭಾರತೀಯ ಸಂತ ಪರಿಷತ್ತಿನ ಹಿಮಾಚಲ ಪ್ರದೇಶದ ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಹೇಳಿದ್ದರು.

ಹಾಗೆಯೇ ಈ ಹಿಂದೆ ಹಲವು ಸಂಧರ್ಭದಲ್ಲಿ, ಹಲವು ಸಾಧುಗಳ ವೇಷ ತೊಟ್ಟಿರುವ ಮನುವಾದಿಗಳು ಇಂತಹದ್ದೆ ಹೇಳಿಕೆಗಳನ್ನು ನೀಡಿದ್ದರು. ಈ ಕುರಿತು ಖಂಡಿತವಾಗಿಯೂ ನಾವು ಚರ್ಚಿಸಲೇಬೇಕಾಗಿದೆ.

ಮೊದಲನೆಯದಾಗಿ, ಮನುವಾದಿ ಸಾಧ್ವಿ ಋತಂಬರಾ ಮೊನ್ನೆಯಷ್ಟೇ ನೀಡಿದ ಹೇಳಿಕೆಯ ಕುರಿತು ಚರ್ಚಿಸುವುದಾದರೆ, ಅವರ ಹೇಳಿಕೆಯ "4ಮಕ್ಕಳನ್ನು ಹೆತ್ತು ಆರೆಸ್ಸೆಸ್ ಗೆ 2 ಮಕ್ಕಳನ್ನು ನೀಡುವುದು" ಎಂದರೆ ಏನರ್ಥ? ಇವರುಗಳ ಪ್ರಕಾರ ನಾಯಿಗಳು ಮರಿಗಳನ್ನು ಹೆತ್ತು ಬೀದಿಯಲ್ಲಿ ಬಿಟ್ಟಂತೆ ಎಂದರ್ಥವೇ? ನಾವ್ಯಾಕೆ ನಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ಅವರಿಗೆ ಕೊಡಬೇಕು? ಅವರುಗಳು ಹೇಳಿದಂತೆ ಕೇಳಲು ನಾವೇನು ಅವರುಗಳ ಗುಲಾಮರೇ? ಇನ್ನೊಬ್ಬರ ಮಕ್ಕಳ ಮೇಲೆ ಹಾಗೆ ಅಧಿಕಾರ ಸ್ಥಾಪಿಸುವ ಅಧಿಕಾರವನ್ನು ಇವರುಗಳಿಗೆ ಕೊಟ್ಟವರಾದರೂ ಯಾರು? ಅದೆಷ್ಟೇ ಬಡತನ ಇದ್ದರೂ ಯಾರಾದರೂ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ಆರೆಸ್ಸೆಸ್ ಗೇ ಇರಲಿ ಅಥವಾ ಮತ್ತೊಂದು ಸಂಘಟನೆಗೇ ಇರಲಿ ಕೊಡಲು ಮುಂದೆ ಬರುವರೇ?

ಅದೂ ಇರಲಿ.. ನಮ್ಮ ಮೂಲ ಪ್ರಶ್ನೆ ಇರುವುದು ಆರೆಸ್ಸೆಸ್ ಆ ಮಕ್ಕಳನ್ನು ಏನು ಮಾಡುತ್ತದೆ ಎಂಬ ಕುರಿತಾಗಿದೆ. ಶತಶತಮಾನಗಳ ಕಾಲ ಮೂಲಭೂತ ಹಕ್ಕು (ವಿದ್ಯೆ, ಭೂಮಿಯ ಹಕ್ಕು, ಅಧಿಕಾರ)ಗಳನ್ನು ನೀಡದೆ ಶೋಷಿಸಿದ ಇದೇ ಮನುವಾದಿಗಳು ಭಾರತದ ಇತಿಹಾಸದಲ್ಲಿ ಅಂತಹ ಮಕ್ಕಳನ್ನು ಸಾಕಿ, ಅವರಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಟ್ಟು ಉತ್ತಮ ಉದ್ಯೋಗ, ಸಮಾಜದಲ್ಲಿ ಗೌರವದ ಸ್ಥಾನ ಮಾನವನ್ನು ಕೊಡಿಸಿದ ಉದಾಹರಣೆಗಳು ಇವೆಯೇ? ಇದು ಗುಲಾಮಗಿರಿಯನ್ನು ಮತ್ತೆ ಪ್ರತಿಷ್ಠಾಪಿಸುವ ಪೂರ್ವ ಸೂಚನೆ ಎಂದೆನಿಸುವುದಿಲ್ಲವೇ? ಅಥವಾ ಪ್ರಜಾಪ್ರಭುತ್ವ ರಾಷ್ಟ್ರದ ಯಾವುದೇ ಒಬ್ಬ ಪ್ರಜೆಗೆ ಇನ್ನೊಬ್ಬರ ಅಂತಹ ಹೊಲಸು ಸಲಹೆಯ ಅಥವಾ ಅಂತಹ ಭಿಕ್ಷೆಯ, ಅಗತ್ಯವಾದರೂ ಇದೆಯೇ? ಕೇವಲ ನಮ್ಮ ಸಾಂವಿಧಾನಿಕ ಹಕ್ಕುಗಳು ದೊರೆತರೆ ಸಾಲದೇ?

ನಿಜ ಗೆಳೆಯರೆ, ಇಂತಹ ಗುಲಾಮಗಿರಿ ಸ್ಥಾಪಿಸಲು ಆ ಮನುವಾದಿಗಳಿಗೆ ಅಡ್ಡ ಬಂದಿರುವದೇ ಈ ನಮ್ಮ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಸಿದ್ದಾಂತದ ಅಂಬೇಡ್ಕರ್ ಸಂವಿಧಾನ: ಆ ಕಾರಣಕ್ಕಾಗಿಯೇ ಅಂಬೇಡ್ಕರ್ ಸಂವಿಧಾನದ ಬದಲಾವಣೆಯ ಕುರಿತು ಮನುವಾದಿ ನಾಯಕರುಗಳು ಮತ್ತು ಮನುವಾದಿ ಮಠಾದೀಶರುಗಳು ಹೇಳಿಕೆ ನೀಡುತ್ತಲೇ ಬಂದಿದ್ದಾರೆ.

*ಅಂತಹ ಹೇಳಿಕೆಯ ಕುರಿತಾದ ಬಿಜೆಪಿ, ಆರೆಸ್ಸೆಸ್ ಮುಂತಾದ ಮನುವಾದಿ ವೈದಿಕ ವರ್ಗದ ಚಿಂತನೆಯ ಹಿಂದಿರುವ ಕುತಂತ್ರವೇನು ಗೊತ್ತೆ?

*1949ರಲ್ಲಿ ಡಾ. ಅಂಬೇಡ್ಕರ್‌ ಸಂವಿಧಾನವನ್ನು ಜಾರಿಗೊಳಿಸುವ ಸಂಧರ್ಭದಲ್ಲಿ ಈ ಮನುವಾದಿ ವೈದಿಕವರ್ಗ ಆ ಸಂವಿಧಾನವನ್ನು ಅದೇಕೆ ವಿರೋದಿಸಿದರು ಗೊತ್ತೆ?

*ಮನುಸ್ಮೃತಿಯ ಆಧಾರದಲ್ಲಿ ಸಂವಿಧಾನ ರಚನೆಯಾಗಬೇಕು ಎಂದು ಅದೇಕೆ ಬೇಡಿಕೆ ಇಟ್ಟರು ಗೊತ್ತೆ?

*ಇಷ್ಟಾಗಿಯೂ ಈ ಮನುಸ್ಮೃತಿ ಸಂವಿಧಾನವನ್ನು ನಾವು ಅದೇಕೆ ವಿರೋದಿಸುತ್ತೇವೆ ಅಥವಾ ವಿರೋಧಿಸಬೇಕು ಗೊತ್ತೇ?

*ಅಂತಹ ಜನವಿರೋಧಿ ವಿಚಾರಗಳು ಅದರಲ್ಲೇನಿವೆ ಗೊತ್ತೆ? ತಿಳಿಯಲು ಮುಂದೆ ಓದಿ:


| ಸಂಸ್ಕೃತ ಭಾಷೆಯಲ್ಲಿರುವ ಮನುಸ್ಮೃತಿ ಸಂವಿಧಾನದ ಕನ್ನಡ ಅವತರಣಿಕೆಯ ಆಯ್ದ ಭಾಗ. ( ಶೂದ್ರ= ಹಿಂದುಳಿದ ವರ್ಗ, ದಲಿತ ವರ್ಗ)

| ಲೋಕೊಧ್ಧಾರಕ್ಕಾಗಿ ಬ್ರಹ್ಮ ತನ್ನ ಮುಖದಿಂದ ಬ್ರಾಹ್ಮಣನನ್ನ, ಭುಜದಿಂದ ಕ್ಷತ್ರೀಯನನ್ನ, ತೊಡೆಯಿಂದ ವೈಶ್ಶನನ್ನ ಮತ್ತು ಪಾದದಿಂದ ಶೂದ್ರನನ್ನ ಸೃಷ್ಟಿಸಿದ್ದಾನೆ.

| ಶೂದ್ರನಿಗೆ ಶಿಕ್ಷಣದ ಹಕ್ಕಿಲ್ಲ. ಅಧಿಕಾರದ ಸ್ಥಾನ ಹೊಂದುವಂತಿಲ್ಲ. ಭೂಮಿಯ ಹಕ್ಕು ಹೊಂದುವಂತಿಲ್ಲ. ಬ್ರಾಹ್ಮಣ ಕ್ಷತ್ರಿಯ ವೈಶ್ಯ ರ ಸೇವೆ ಮಾಡುವುದೆ ಅವನ ಕರ್ತವ್ಯ.

| ಬ್ರಾಹ್ಮಣನು ಭೂಮಿಯ ಒಡೆಯ ಸಕಲ ಜೀವಿಗಳಿಗೂ ಒಡೆಯ.

| ಶೂದ್ರನಿಗೆ ಅಸಹ್ಶಸೂಚಕವಾದ ಹೆಸರಿಡಬೇಕು. ಬ್ರಾಹ್ಮಣ ಶುಭ ಸೂಚಕ, ಕ್ಷತ್ರಿಯ ಶಕ್ತಿ ಸೂಚಕ, ವೈಶ್ಯ ಧನ ಸೂಚಕ ಹೆಸರಿಟ್ಟುಕೊಳ್ಳಬೇಕು.

| ಶೂದ್ರ ಯೂವುದೇ ಹಣ ಹೊಂದುವಂತಿಲ್ಲ ಮತ್ತು ಆಸ್ತಿ ಹೊಂದುವಂತಿಲ್ಲ. ಎಂತಹ ಸಮಯದಲ್ಲಾದರೂ ಬ್ರಾಹ್ಮಣ ಶೂದ್ರನ ಹಣವನ್ನ ಆಸ್ತಿಯನ್ನ ವಶಪಡಿಸಿಕೊಳ್ಳಬಹುದು ಮತ್ತು ಇದು ಬ್ರಾಹ್ಮಣನ ಅಧಿಕಾರ.

| ಕುರಿಸಾಕಾಣಿಕೆ, ಎಮ್ಮೆ ಕೋಣ ಸಾಕಾಣಿಕೆ, ಒಮ್ಮೆ ಮದುವೆ ಆಗಿ ವಿಧವೆ ಆದ ಹೆಣ್ಣನ ಮತ್ತೆ ಮದುವೆ ಮಾಡಿಕೊಂಡವನ ಹೆಣ ಹೊರುವವನ ಭೋಜನಕ್ಕೆ ಆಹ್ವಾನಿಸಬಾರದು.

| ಎಂತಹ ಸಂದರ್ಭದಲ್ಲಾದರು ಸರಿ ಬ್ರಾಹ್ಮಣ ಕ್ಷತ್ರಿಯ ಗಂಡುಗಳು ಶೂದ್ರನ ಹೆಣ್ಣನ್ನು ಪ್ರಥಮ ಹೆಂಡತಿ ಎಂದು ಪರಿಗಣಿಸಬಾರದು.

| ಶೂದ್ರನಿಗೆ ಧರ್ಮೋಪದೇಶಮಾಡಬಾರದು ಅವನು ಪಾಪಿ.ಅವನಿಗೆ ಶಿಕ್ಷಣದ ಹಕ್ಕಿಲ್ಲ.ಅವನು ಸೇವಕ ಮಾತ್ರ.

| ಬ್ರಾಹ್ಮಣರಿಗೆ ಅಪೇಕ್ಷೆ ಉಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ ಪ್ರೋಕ್ಷಿತವಾದ ಮಾಂಸ ಶಾಸ್ತ್ರದಲ್ಲಿ ಹೇಳಿರುವ ಪಕ್ಷಿ ಪ್ರಾಣಿಗಳನ್ನು ತಿನ್ನಬಹುದು ಅದು ಅವನ ಹಕ್ಕು.

| ಶಾಸ್ತ್ರವಿಧಿ ಪ್ರಕಾರ ಶುಧ್ಧಗೊಳಿಸಲಾದ ಪಶು ಮಾಂಸವನ್ನು ಬ್ರಾಹ್ಮಣರು ತಿನ್ನಬಹುದು.

| ಶೂದ್ರನಾದವನು ಬ್ರಾಹ್ಮಣರು ಹೇಳುವ ದೇವರ ಮಂತ್ರ ಗಳನ್ನು ಕೇಳಿಸಿಕೊಂಡರೆ ಅವನಿಗೆ ಕಿವಿಯಲ್ಲಿ ಕಾದ ಎಣ್ಣೆಯನ್ನು ಸುರಿಯಬೇಕು.

| ಮೂವತ್ತು ವಯಸ್ಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಶೆಯನ್ನೆ ಮದುವೆಯಾಗಬೇಕು ಮತ್ತು ಇಪ್ಪತ್ತನಾಲ್ಕುವರ್ಷದವನು ಎಂಟು ವರ್ಷದ ಕನ್ಶೆಯನು ಮದುವೆ ಆಗಬೇಕು (ಬ್ರಾಹ್ಮಣ ಮಾತ್ರ)

| ಬ್ರಾಹ್ಮಣನು ತನಗೆ ಇಷ್ಟ ಬಂದ ಶೂದ್ರ ಹೆಣ್ಣನು ಸಂಭೋಗಿಸಬಹುದು ಮತ್ತು ಇದು ಧರ್ಮಕೂಡ .ಕಾರಣ ಶೂದ್ರ ಹುಟ್ಟಿರುವುದೇ ಬ್ರಾಹ್ಮಣನ ಸೇವೆಗಾಗಿ.

| ಬ್ರಾಹ್ಮಣನಿಂದ ಶೂದ್ರ ಹೆಣ್ಣಲ್ಲಿ ಹುಟ್ಟಿಸಿದ ಗಂಡು ಮಗು ಇದ್ದರೆ ಅದು ಪಾರಶವ ಅಂದರೆ ಅದು ಬದುಕಿದ್ದೂ ಶವ ಇದ್ದಂತೆ.

| ಬ್ರಾಹ್ಮಣನು ಯಾವುದೇ ಹೆಣ್ಣನ್ನು ಮದುವೆ ಆಗಬಹುದು ಮತ್ತು ಸಂಭೋಗಿಸಬಹುದು.ಬಹುಪತ್ನಿತ್ವ ಮಾಡಿಕೊಳ್ಳಬಹುದು.ಆದರೆ ಬ್ರಾಹ್ಮಣ ಜಾತಿಯ ಹೆಂಡತಿಗೆ ಮಾತ್ರ ಅವನ ಆಸ್ತಿಯ ಹಕ್ಕು ಅಷ್ಟೆ.

| ಶೂದ್ರನಿಂದ ಬ್ರಾಹ್ಮಣ ಸ್ತ್ರೀಯಲ್ಲಿ ಹುಟ್ಟಿದವನು ಚಂಡಾಲ ಮತ್ತು ಬ್ರಾಹ್ಮಣ ನಿಂದ ಶೂದ್ರ ಸ್ತ್ರೀಯಲ್ಲಿ ಹುಟ್ಟಿದವನು ಪಾರಶವ. ಈ ಇಬ್ಬರೂ ಒಡಕು ಮಣ್ಣಿನಿಂದ ಮಡಿಕೆ ಪಾತ್ರೆಯಲ್ಲೇ ಉಣ್ಣಬೇಕು ಬಿಕ್ಷೆ ಬೇಡಿ ತಿನ್ನಬೇಕು ಮತ್ತು ಬಟ್ಟೆ ಹಾಕುವಂತಿಲ್ಲ ಹೆಣಕ್ಕೆ ಹೊದಿಸಿದ ಬಟ್ಟೆಯೇ ಇವರು ಉಡಬೇಕು.

| ಶೂದ್ರ ತಾನು ಮದುವೆಯಾದ ಹೆಣ್ಣನ್ನು ಸಂಭೋಗಮಾಡುವಂತಿಲ್ಲ. ಮೂರು ದಿನಗಳ ಕಾಲ ಬ್ರಾಹ್ಮಣನ ಮನೆಯಲ್ಲಿ ಆ ಹೆಣ್ಣಿಗೆ ವಾಸ. ಮತ್ತು ಆ ಹೆಣ್ಣು ಬ್ರಾಹ್ಮಣನಿಗೆ ಅವಳ ದೇಹಸೇವೆ ಕೊಡಬೇಕು ಅದೂ ಬ್ರಾಹ್ಮಣನಿಗೆ ಸಂತೃಪ್ತಿ ಯಾಗುವ ತನಕ. ಒಂದು ವೇಳೆ ಬ್ರಾಹ್ಮಣನಿಗೆ ಮೂರು ದಿನದಲ್ಲಿ ಸಂತೃಪ್ತಿ ಯಾಗದೇ ಇದ್ದರೆ ಬ್ರಾಹ್ಮಣ ಆ ಹೆಣ್ಣನ್ನು ತನಗೆ ತೃಪ್ತಿ ಆಗುವ ತನಕ ಇಟ್ಟುಕೊಳ್ಳಬಹುದು. ಕಾರಣ ಬ್ರಾಹ್ಮಣನಿಂದ ಸಂಭೋಗಿಸಿಕೊಂಡ ಶೂದ್ರನ ಹೆಣ್ಣು ಪಾವನಳಾಗುತ್ತಾಳೆ ಮುಂದಿನ ಜನ್ಮದಲ್ಲಿ ಆ ಶೂದ್ರ ಬ್ರಾಹ್ಮಣರಾಗಿ ಹುಟ್ಟುವರು.

ಇನ್ನೂ ಇದೆ…. ಎಲ್ಲವನ್ನೂ ಬರೆದರೆ ಲೇಖನ ದೀರ್ಘವಾಗುತ್ತಾ ಹೋಗುತ್ತದೆ.ˌಯಾವುದನ್ನ ಹಿಂದುಳಿದ ವರ್ಗ ಮತ್ತು ದಲಿತರ ಮೇಲೆ ಅತಿಯಾಗಿ ಹೇರಿದ್ದರೋ ಅಷ್ಟನ್ನು ಮಾತ್ರವೇ ಆಯ್ದು ನಿಮ್ಮ ಮುಂದಿಟ್ಟಿದ್ದೇವೆ.

ಗಮನಿಸಿ: ಈ ಎಲ್ಲಾ ಶೋಷಣೆಗಳನ್ನು ನಮ್ಮ ಪೂರ್ವಜರು ಅನುಭವಿಸಿದ್ದರು. ಇದನ್ನು ವಿವಿಧ ಕಾಲಮಾನದಲ್ಲಿ ವಿವಿಧ ಸ್ಥಳಗಳಲ್ಲಿ ಅಂಬೇಡ್ಕರ್ ಸಂವಿಧಾನ ಬರುವ ತನಕವೂ ಹೇರಿಕೊಂಡು ಬರಲಾಗಿತ್ತು. ಇಂದಿಗೂ ಕೆಲವೆಡೆ ಅಂತಹ ಕೆಲವು ಅನಿಷ್ಟ ಪದ್ಧತಿಗಳು ಇವೆ. ಆ ಕಾರಣಕ್ಕಾಗಿಯೇ ಸಿದ್ದರಾಮಯ್ಯ ನವರಂತಹ ನಾಯಕರುಗಳು ತಮ್ಮ ಅಧಿಕಾರಾವಧಿಯಲ್ಲಿ "ಮೌಢ್ಯ ನಿಷೇಧ"ದಂತಹ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾದಾಗಲೆಲ್ಲ ದೇವರು ಧರ್ಮದ ಹೆಸರಲ್ಲಿ, "ದೇವರ ಪೂಜೆಯನ್ನು ನಿಷೇಧಿಸಲಾಗುತ್ತದೆ" ಎಂದು ಅಪಪ್ರಚಾರ ನಡೆಸಿ ಅಧಿಕಾರದ ಸ್ಥಾನದಿಂದ ಕೆಳಗಿಸಲಾಗುತ್ತಿತ್ತು.

ಯೋಚನೆ ಮಾಡಿ ಹೇಳಿ ಗೆಳೆಯರೆ, ನಾವು ನಮ್ಮ ಮುಂದಿನ ಜನಾಂಗದ ಮಕ್ಕಳ ಜೀವನವನ್ನ, ನಮ್ಮ ಪೂರ್ವಜರು ಬದುಕಿದ ರೀತಿಯಲ್ಲಿ ಈ ಮನುವಾದಿಗಳ ಸೇವಕರಾಗಿ ಕಳೆಯಬೇಕೋ? ನಮ್ಮ ಪೀಳಿಗೆಯನ್ನು ಈ ಕುತಂತ್ರಿ ವೈದಿಕವರ್ಗದ ಗುಲಾಮಗಿರಿಗೆ ತಳ್ಳಬೇಕೋ? ಅಥವಾ ಆ ನೀಚ ಮನುವಾದಿಗಳನ್ನು ಈಗಿಂದೀಗಲೇ ಮಟ್ಟಹಾಕಬೇಕೋ? …ಎಚ್ಚರ ತಪ್ಪದಿರೋಣ.

ಮಾಹಿತಿ: ವಿವಿಧ ಮೂಲಗಳಿಂದ
Advertisement
Advertisement
Recent Posts
Advertisement