Advertisement

ಮಠಗಳಿಂದಲೂ 30 ಪರ್ಸೆಂಟ್ ಕಮಿಷನ್ ಪಡೆಯುವ ಸರ್ಕಾರ: ದಿಂಗಾಲೇಶ್ವರ ಸ್ವಾಮೀಜಿ ಆರೋಪ |ಇದು ಹಿಂದೂ ಧರ್ಮದ ಹೆಸರು ಹೇಳಿ ಅಧಿಕಾರ ಬಂದವರ ಅಸಲಿಯತ್ತು|

Advertisement
ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಅಂದಿನಿಂದ ಇಂದಿನವರೆಗೂ ರಾಜ್ಯದ ವಿವಿಧ ಮಠಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.

ಆದರೆ ಇದೀಗ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಮಠಗಳಿಗೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಕೂಡ 30%ಕಮಿಷನ್ ಪಾವತಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ ಎಂದು ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಆರೋಪಿಸಿದ್ದಾರೆ.

ಇದು ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರದ ಅದೆಂತಹ ಹೀನ ಮಟ್ಟಕ್ಕೆ ತಲುಪಿದೆ ಎಂಬುದರ ಕುರಿತು ಒಂದು ಸಣ್ಣ ಉದಾಹರಣೆಯಾಗಿದೆ. ಹಾಗೆಯೇ ಇದು ತಾವು ಮಹಾನ್ ಹಿಂದೂ ಧರ್ಮೋದ್ಧಾರಕರು ಎಂದು ಹೇಳಿಕೊಂಡು, ರಾಜ್ಯಾದ್ಯಂತ ಹಿಂದೂ ಮಸಲ್ಮಾನರ ನಡುವೆ ಇಲ್ಲದ ವದಂತಿಗಳನ್ನು ಹರಡಿ, ಆ ಮೂಲಕ ನಡೆದ ಗಲಭೆಯಲ್ಲಿ ನೂರಾರು ಹಿಂದೂ ಮುಸ್ಲಿಂ ಯುವಕರ ಸಾವು ನೋವಿಗೆ ಕಾರಣರಾಗಿ ಅದರ ಪರಿಣಾಮವಾಗಿ ಅಧಿಕಾರಕ್ಕೆ ಬಂದವರ ಅಸಲಿ ಮುಖದ ಅನಾವರಣ ಕೂಡಾ ಹೌದು.
ಮೊನ್ನೆ ಆದಿತ್ಯವಾರ ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ "ಕೃಷ್ಣಾ– ಮಹಾದಾಯಿ– ನವಲಿ ಸಂಕಲ್ಪ ಯಾತ್ರೆ"ಯ ಸಮಾರೋಪ ಸಮಾರಂಭದಲ್ಲಿ ಸ್ವಾಮೀಜಿಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

"ಮಠಗಳಿಗೆ ಬಿಡುಗಡೆ ಆದ ಅನುದಾನದಲ್ಲಿ 30 ಪರ್ಸೆಂಟ್ ಪಾವತಿಯಾದ ನಂತರವೇ ಕಟ್ಟಡದ ಕೆಲಸ ಆರಂಭವಾಗುತ್ತದೆ. ಪಾವತಿ ಮಾಡದಿದ್ದರೆ ಕಾಮಗಾರಿ ಆರಂಭವೇ ಆಗುವುದಿಲ್ಲ'' ಎಂದವರು ಬೇಸರದಿಂದ ನುಡಿದರು.

‘'ಈಗಂತೂ ಕರ್ನಾಟಕದಲ್ಲಿ ಬುದ್ಧಿಗೇಡಿ ಸರ್ಕಾರ ಆಡಳಿತ ನಡೆಸುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಸುವ್ಯವಸ್ಥಿತವಾದ ಕಾಂಕ್ರೀಟ್ ರಸ್ತೆಯನ್ನು ಮೆಷಿನ್ ಮೂಲಕ ಒಡೆದು ಪೈಪುಗಳನ್ನು ಹಾಕಿ ನಳ್ಳಿಯ ಮೂಲಕ ನೀರು ಕೊಡುವ ಬದಲಿಗೆ ರೈತರ ಹೊಲಗಳಿಗೆ ನೀರು ಕೊಡುವ ಪುಣ್ಯದ ಕೆಲಸ ಮಾಡಿ'' ಎಂದವರು ಆಗ್ರಹಿಸಿದ್ದಾರೆ.

"ದೇಶದ ರೈತರು ಮೂರು ರೈತವಿರೋಧಿ ಕೃಷಿ ಕಾನೂನನ್ನು ವಿರೋಧಿಸಿ ಉತ್ತರ ಭಾರತದಲ್ಲಿ ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಮಳೆ- ಬಿಸಿಲೆನ್ನದೆ, ಸಾವು–ನೋವಿಗೂ ಅಂಜದೇ ನಡೆಸಿದ ಪ್ರತಿಭಟನೆಯ ಮಾದರಿಯಲ್ಲೇ ಕರ್ನಾಟಕದ ರೈತರು ಸಿದ್ಧರಾದರೆ ಮಾತ್ರವೇ ಈ ಭಾಗದ ರೈತರಿಗೆ ಅನ್ನಸಿಗುತ್ತದೆ. ಇಲ್ಲವಾದರೆ ಏನೇನೂ ಸಿಗೋದಿಲ್ಲ. ರೈತರು ಜಾಣರಾಗಬೇಕಾಗಿದೆ’' ಎಂದವರು ಹೇಳಿದ್ದಾರೆ.
Advertisement
Advertisement
Recent Posts
Advertisement