Advertisement

ಸಿಂಧೂ ಕಣಿವೆಯ ನಾಗರಿಕತೆಯನ್ನು ಕಟ್ಟಿದ್ದು ವಲಸಿಗ ಆರ್ಯರಲ್ಲ, ಮೂಲನಿವಾಸಿಗಳಾದ ಶೂದ್ರರು!

Advertisement

ಕ್ರಿ.ಪೂ.2000 - 1800ರ ನಡುವೆ ವಿದೇಶಿ ಆರ್ಯರು ಸಿಂಧೂ ಕಣಿವೆಯ ಮೂಲಕ ಈ ಭಾರತ ಖಂಡದ ಭೂಮಿಗೆ ಆಗಮಿಸುತ್ತಾರೆ. ಆರ್ಯರು ಭಾರತಕ್ಕೆ ಬರುವುದಕ್ಕೂ ಮೊದಲು ಅವರಿಗಿಂತಲೂ ಮುಂದುವರೆದ ಜನಾಂಗವೂ ಈ ನೆಲದಲ್ಲಿತ್ತು. ಅದುವೇ ನಾಗ ಜನಾಂಗ. ಈ ನಾಗ ಜನಾಂಗವು ಬದುಕುತ್ತಿದ್ದ ರೀತಿಯನ್ನು ನಾಗರೀಕತೆ ಎಂದು; ಹಾಗೂ ಅವರು ವಾಸಿಸುತ್ತಿದ್ದ ಸ್ಥಳಗಳನ್ನು ನಗರ ಗಳೆಂದು ಕರೆದರು.

ಈ ನಾಗಜನಾಂಗವೇ ಸಿಂಧೂ ನಾಗರೀಕತೆ ಮತ್ತು ಹರಪ್ಪ ಮೊಹಂಜೊದರ್ ನಾಗರೀಕತೆಯ ವಾರಸುದಾರರು. ಇವರನ್ನು ಮುಂದುವರೆದು ದ್ರಾವಿಡರೆಂದು ಇತಿಹಾಸಕಾರರು ಗುರುತಿಸಿದರು.

ನಾಗ ಜನಾಂಗದವರು ಪ್ರಕೃತಿಯ ಆರಾಧಕರಾಗಿದ್ದರು. ನಾಗ ಜನಾಂಗದಲ್ಲೂ ಕೂಡ ಹಲವಾರು ಭಿನ್ನ ಆಚಾರಗಳು, ಪದ್ಧತಿಗಳಿದ್ದವು. ಅದಕ್ಕನುಗುಣವಾಗೇ ಕೆಲವು ಪಂಗಡಗಳಿದ್ದವು. ಅವುಗಳೆಂದರೆ; ದಾನವ, ದಸ್ಯು , ಪಿಶಾಚ, ನಿಶಾಚರ, ರಾಕ್ಷಸ , ಅಸುರ, ಯಕ್ಷ ,ಇನ್ನು ಹಲವಾರು.

ಅದೇ ರೀತಿ ವಿದೇಶಿ ಆರ್ಯರಲ್ಲೂ ಕೂಡ ಕೆಲವು ಪಂಗಡಗಳಿದ್ದವು. ಋಷಿ, ದೇವ, ಪುರೋಹಿತ….. ಇತ್ಯಾದಿ.

ಆರ್ಯರ ಸೈನಿಕ ಪಂಗಡ ಅಥವ ಗುಂಪಿನ ಹೆಸರೇ "ದೇವ". ಈ ದೇವ ಪಡೆಯ ಪ್ರಮುಖ ನಾಯಕ ಅಥವ ಸೈನ್ಯಾಧಿಪತಿಯೇ ಇಂದ್ರ. ಈತನನ್ನು ದೇವೆಂದ್ರನೆಂದು ಕೂಡ ಕರೆಯುತ್ತಿದ್ದರು.

ಈ ದೇವೆಂದ್ರ ಅಥವಾ ಇಂದ್ರ ; ಇದು ಒಂದು ವ್ಯಕ್ತಿಯ ಹೆಸರಾಗಿರಲಿಲ್ಲ. ಬದಲಾಗಿ ಇದು ಒಂದು ಪದವಿಯಾಗಿತ್ತು. ಹಾಗೆಯೇ, ಸೂರ್ಯ, ಚಂದ್ರ, ಅಗ್ನಿ , ವಾಯು, ವರುಣ, ಯಮ ಮುಂತಾದವು ಒಂದು ಪದವಿಯ ಹೆಸರಾಗಿತ್ತೇ ಹೊರತು; ವ್ಯಕ್ತಿಯ ಹೆಸರಾಗಿರಲಿಲ್ಲ. ಈ ದೇವ ಗುಂಪಿನ ಸೈನಿಕ ಸದಸ್ಯರುಗಳನ್ನೆ ದೇವರೆಂದು ಕರೆದರು.

ಭಾರತ ಮತ್ತು ಪಾಶ್ಚಾತ್ಯ ಇತಿಹಾಸದ ಸಂಶೋಧಕರು ಇದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ.
ಆದರೆ, ಬಾಬಾಸಾಹೇಬ್ ಅಂಬೇಡ್ಕರ್ ರವರು ತಮ್ಮ ಐತಿಹಾಸಿಕ ಸಂಶೋಧನೆಗಳ ಮೂಲಕ ಇದರ ಬಗ್ಗೆ ಬಹಳ ಸ್ಪಷ್ಟವಾಗಿ ದಾಖಲಿಸಿದ್ದಾರೆ.

ಅದು ಅವರ ಬರಹಗಳು ಮತ್ತು ಭಾಷಣಗಳು ಸಂಪುಟ - 7:
ಯಾರು ಶೂದ್ರ? ಮತ್ತು ಆತನು ಇಂಡೋ-ಆರ್ಯನ್ ಸಮಾಜದಲ್ಲಿ ನಾಲ್ಕನೇಯ ವರ್ಣದವನು ಹೇಗಾದನು?
ಯಾರು ಅಶೂದ್ರ? ಮತ್ತು ಆತನು ಹೇಗೆ ಅಸ್ಪೃಶ್ಯ ನಾದನು? ಎನ್ನುವ ಬೃಹತ್ ಕೃತಿಯಲ್ಲಿ ವೇದಗಳು, ಸ್ಮೃತಿಗಳು, ಬ್ರಾಹ್ಮಣಗಳು, ಉಪನಿಷದ್, ಪುರಾಣಗಳು, ಮಹಾಕಾವ್ಯ ಮತ್ತು ಭಗವದ್ಗೀತೆಯನ್ನು ಉಲ್ಲೇಖಿಸಿ ದಾಖಲಿಸುತ್ತಾರೆ.

ಭಾರತದ ನೆಲಕ್ಕೆ ಭಿಕ್ಷುಕ ಅಲೆಮಾರಿಗಳಾಗಿ ವಲಸೆ ಬಂದ ಆರ್ಯರು, ಇಲ್ಲಿನ ನಾಗ ಜನಾಂದವರ ಉದಾರತೆಯಿಂದಾಗಿ ಬದುಕಲು ಅವಕಾಶವನ್ನು ಪಡೆಯುತ್ತಾರೆ.

ಕಾಲಕ್ರಮೇಣ, ಈ ನೆಲದ ಸಂಪತ್ತು , ಸಂಪನ್ಮೂಲ ಮತ್ತು ಅಧಿಕಾರವನ್ನು ಶಾಶ್ವತವಾಗಿ ಪಡೆಯಲು ನಾಗ ಜನಾಂಗದಲ್ಲೆ ಒಡಕುಗಳನ್ನು ಮೂಡಿಸುತ್ತ , ಅವರನ್ನೆ ಬೇರೆ ಬೇರೆ ಮಾಡಿದರು. ಒಗ್ಗಟ್ಟಾಗಿದ್ದ ಸಮುದಾಯಗಳನ್ನು ಒಡೆದು ಹಾಕಿದ ನಂತರ ಅವರ ಮೇಲೆ ಸತತ ದಾಳಿಗಳನ್ನು ಮಾಡಿ, ಅವರ ನಾಯಕರುಗಳನ್ನೆಲ್ಲ ಕೊಂದು ಕೊಂದ, ಈ ನೆಲದ ಮೂಲನಿವಾಸಿಗಳನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು.

ಆರ್ಯರು ಮತ್ತು ನಾಗ ಜನಾಂಗದ ನಡುವೆ ನಡೆದ ಅನೇಕ ಯುದ್ಧಗಳೇ ಪುರಾಣಗಳಲ್ಲಿ ದೇವರುಗಳಿಗೂ ಮತ್ತು ರಾಕ್ಷಸ, ಅಸುರ, ದಾನವರಿಗೂ ನಡೆದ ಯುದ್ಧವೆಂದು ಬಿಂಬಿಸಲಾಯಿತು.

ಈ ನೆಲದ ಮೂಲನಿವಾಸಿಗಳಾದ ನಾಗ ಜನಾಂಗದ ರಾಕ್ಷಸ, ಅಸುರ, ದಾನವ ಇತ್ಯಾದಿ.. ರನ್ನು ಕ್ರೂರಿಗಳು, ವಂಚಕರು, ಮೋಸಗಾರರು ಎಂದು ತಮ್ಮ ಪುರಾಣಗಳಲ್ಲಿ ಆರ್ಯರು ಬಿಂಬಿಸಿದರು.

ಆದರೆ, ಸುರಪಾನಿಗಳು, ಕಾಮಂಧರು, ಭ್ರಷ್ಟರು, ಅಯೋಗ್ಯರು ಆಗಿದ್ದವರುಗಳನ್ನು ಸಭ್ಯರಂತೆ, ಪೂಜನೀಯರಂತೆ ಆರ್ಯರು ತಮ್ಮ ಗ್ರಂಥಗಳಲ್ಲಿ ಬಿಂಬಿಸಿದರು.

Much of the Ancient history of India, is no history at all. Not that Ancient India has no history. It has plenty of it. But it has lost its character. It has been made MYTHOLOGY & HOLY STORIES to amuse women & children.

ಪ್ರಾಚೀನ ಭಾರತದ ಬಹುಪಾಲು ಇತಿಹಾಸ, ಇತಿಹಾಸವೇ ಅಲ್ಲ‌. ಹಾಗೆಂದು ಪ್ರಾಚೀನ ಭಾರತಕ್ಕೆ ಇತಿಹಾಸವೇ ಇಲ್ಲವೆಂದಲ್ಲ. ಬಹಳಷ್ಟು ಇತಿಹಾಸ ಈ ನೆಲಕ್ಕಿದೆ. ಆದರೆ, ಅದು ತನ್ನ ಗುಣಗಳನ್ನು ಕಳೆದುಕೊಂಡಿದೆ. ಪ್ರಾಚೀನ ಭಾರತದ ಇತಿಹಾಸವೆಲ್ಲವನ್ನು ಹೆಂಗಸರು ಮತ್ತು ಮಕ್ಕಳನ್ನು ರಂಜಿಸಲು ಪುರಾಣಗಳು ಮತ್ತು ಪುಣ್ಯಕಥೆಗಳನ್ನಾಗಿ ಮಾಡಲಾಗಿದೆ.

(ಸಂಗ್ರಹ)
ಬರಹ: ಅನಾಮಿಕ

Advertisement
Advertisement
Recent Posts
Advertisement