Advertisement

ಹಿಂದೆ ಗ್ಯಾಸ್ ಉಪಯೋಗಿಸುತ್ತಿದ್ದ ಜನರು ಮೋದಿಯವರ ಅಚ್ಚೇದಿನದ ಪರಿಣಾಮವಾಗಿ ಸೌದೆ ಒಲೆಯತ್ತ ಮೊರೆ ಹೋಗುತ್ತಿದ್ದಾರೆ: ದಿನೇಶ್ ಗುಂಡೂರಾವ್

Advertisement
"ಮೋದಿಯವರ ಅಚ್ಚೇದಿನದ ಪರಿಣಾಮ ಗೃಹಬಳಕೆಯ ಸಿಲಿಂಡರ್ ಬೆಲೆ ಸಾವಿರದ ಗಡಿ ದಾಟಿ ಹೋಗಿದೆ. ಕೇಂದ್ರದ ಉಜ್ವಲಾ ಯೋಜನೆಯ‌‌ ಮೂಲಕ ಗ್ಯಾಸ್ ಸಂಪರ್ಕ ಪಡೆದಿದ್ದ ಬಡಪಾಯಿ ಬಡವರು ಗ್ಯಾಸ್ ಬೆಲೆಯೇರಿಕೆಯ ಶಾಕ್‌ಗೆ ತತ್ತರಿಸಿ ಹೋಗಿದ್ದಾರೆ.‌ ಸೌದೆ ಬಿಟ್ಟು ಸಿಲಿಂಡರ್ ಮೊರೆ ಹೋಗಿದ್ದ ಬಡವರಿಗೆ‌ ದರ ಏರಿಕೆಯಿಂದ ಹಳೆ ಗಂಡನ ಪಾದವೇ ಗತಿ ಎಂಬಂತೆ ಸೌದೆಯೇ ಆಸರೆಯಾಗಿದೆ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಹೊಗೆ ರಹಿತ ಅಡುಗೆ ಮನೆ ಉಜ್ವಲಾ ಯೋಜನೆಯ ಮೂಲ‌ ಉದ್ದೇಶ. ಆದರೆ ಕೇಂದ್ರ ಸಿಲಿಂಡರ್ ಬೆಲೆಯನ್ನು ಯದ್ವಾತದ್ವಾ ಏರಿಸಿದರೆ ಬಡವರಿಗೆ ಕೊಳ್ಳುವ ಶಕ್ತಿಯೆಲ್ಲಿದೆ? ಬಡವರು ಈ ದರದಲ್ಲಿ ಸಿಲಿಂಡರ್ ಖರೀದಿಸಿ ಅನ್ನ ಬೇಯಿಸಲು ಸಾಧ್ಯವೆ? ಬಡವರು ಅನ್ಯಮಾರ್ಗವಿಲ್ಲದೆ ಅಡುಗೆಗೆ ಸೌದೆಯನ್ನೇ ಬಳಸಬೇಕು. ಹಾಗಾದರೆ ಉಜ್ವಲಾ ಯೋಜನೆಯ ಸಾರ್ಥಕತೆಯೇನು" ಎಂದವರು ಪ್ರಶ್ನಿಸಿದ್ದಾರೆ.
"ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಗ್ಯಾಸ್‌ಗೆ ಸಬ್ಸಿಡಿ ದೊರೆಯುತಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಳಿತವಾದರೂ ಅದರ ಬಿಸಿ ಗ್ರಾಹಕರಿಗೆ ತಟ್ಟದಂತೆ ಸಿಂಗ್ ಸರ್ಕಾರ ನೋಡಿಕೊಂಡಿತ್ತು. ಆದರೆ ಮೋದಿ ಸರ್ಕಾರ ಗ್ಯಾಸ್ ಮೇಲಿನ ಸಬ್ಸಿಡಿಯನ್ನು ಸುಳಿವೇ ಕೊಡದೆ ರದ್ದು ಮಾಡಿದೆ. ಬಡವರು ಬದುಕಬಾರದು ಎನ್ನುವುದು ಮೋದಿ ಸರ್ಕಾರದ ಉದ್ದೇಶವೇ" ಎಂದವರು ಕೇಳಿದ್ದಾರೆ.
"ಮೋದಿಯವರ ಆಡಳಿತದಲ್ಲಿ ದುಡ್ಡಿದ್ದವರು ಮಾತ್ರ ದುನಿಯಾ ನಡೆಸಲು ಸಾಧ್ಯ. ಬಡವರ ಪಾಲಿಗೆ ಮೋದಿ ಸರ್ಕಾರ ಶಾಪಗ್ರಸ್ತ ಸರ್ಕಾರವಾಗಿದೆ. ಬೆಲೆಯೇರಿಕೆ ಕೇವಲ ಗ್ಯಾಸ್‌ಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ವಸ್ತುವಿನ ಬೆಲೆಯೂ ಕೈಗೆಟುಕದಂತಾಗಿದೆ. ಬೆಲೆಯೇರಿಕೆಯಿಂದ ಆಮ್ ಆದ್ಮಿಯ ಪಾಡು ಆತನಿಗಷ್ಟೇ ಗೊತ್ತು" ಎಂದವರು ಖೇದ ವ್ಯಕ್ತಪಡಿಸಿದರು.
ಚಿತ್ರಗಳು: ಸಾಂದರ್ಭಿಕವಾಗಿ ಬಳಸಲಾಗಿದೆ.
Advertisement
Advertisement
Recent Posts
Advertisement