Advertisement

ಹೆಡ್ಗೆವಾರ್ ಪಠ್ಯದಲ್ಲಿ ಸೇರಿಸಲು ಲಾಯಕ್ಕಿಲ್ಲದ ವ್ಯಕ್ತಿ ಎಂದು ಕರ್ನಾಟಕ ಸರ್ಕಾರವೇ ಒಪ್ಪಿಕೊಂಡಿದೆ: ಡಾ. ಎಚ್.ಸಿ ಮಹಾದೇವಪ್ಪ

Advertisement
"ತಮಾಷೆ ಎಂದರೆ ಶಿಕ್ಷಣ ಸಚಿವ ನಾಗೇಶ್ ಅವರು ನಾವು ಕೇಶವ್ ಬಲಿರಾಂ ಹೆಡ್ಗೆವಾರ್, ಅವರ ಬಗ್ಗೆ ಪಠ್ಯ ರೂಪಿಸಿಲ್ಲ, ಬದಲಿಗೆ ಅವರ ಮಾತುಗಳನ್ನು ಮಾತ್ರವೇ ಪಠ್ಯಕ್ಕೆ ಸೇರಿಸಿದ್ದೇವೆ, ಹೀಗಾಗಿ ಇದನ್ನು ವಿವಾದ ಮಾಡಬೇಕಿಲ್ಲ ಎಂದಿದ್ದಾರೆ.
ಈ ಮೂಲಕ ಹೆಡ್ಗೆವಾರ್ ಓರ್ವ ಪಠ್ಯದಲ್ಲಿ ಸೇರಿಸಲು ಲಾಯಕ್ಕಿಲ್ಲದ ವ್ಯಕ್ತಿ ಎಂದು ಕರ್ನಾಟಕ ರಾಜ್ಯ ಸರ್ಕಾರದವರೇ ನೇರವಾಗಿ ಒಪ್ಪಿಕೊಂಡಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಹೇಳಿದ್ದಾರೆ.

"ಹೆಡ್ಗೆವಾರ್ ಓರ್ವ ಲಾಯಕ್ಕಿಲ್ಲದ ವ್ಯಕ್ತಿ ಎಂಬುದನ್ನು ಸಚಿವರೇ ಸೂಚ್ಯವಾಗಿ ಹೇಳುತ್ತಿರುವಾಗ, ಅಂತಹ ವ್ಯಕ್ತಿಯ ಮಾತುಗಳನ್ನು ಪಠ್ಯದಲ್ಲಿ ತುರುಕುವಂತಹ ಪ್ರಯತ್ನವೇಕೆ? ಸರ್ಕಾರವು ತಾನೇ ಹೇಳಿದ ನಾಲಾಯಕರ ಮಾತುಗಳನ್ನು ಪಠ್ಯದಿಂದ ತೆಗೆದು ಹಾಕಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ" ಎಂದವರು ಕರೆ ನೀಡಿದ್ದಾರೆ.
(ಎಡಗಡೆಯಲ್ಲಿ ಇರುವುದು ಈ ಹಿಂದೆ ಬೋದಿಸಲ್ಪಡುತ್ತಿದ್ದ ಪುಸ್ತಕದ ಪರಿವಿಡಿ. ಬಲಗಡೆ ಇರುವುದು ರೋಹಿತ್ ಚಕ್ರತೀರ್ಥರವರ ಪುಸ್ತಕ ಪರಿಶೀಲನಾ ಸಮಿತಿ ಅಂತಿಮಗೊಳಿಸಿರುವ ಪರಿಷ್ಕೃತ ಪುಸ್ತಕದ ಪರಿವಿಡಿ)

ಸಾಮಾಜಿಕ ಜಾಲತಾಣದಲ್ಲಿ ಇದೀಗ ಪ್ರಭಲ ಪ್ರತಿಭಟನೆ ವ್ಯಕ್ತವಾಗಿದ್ದು "ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ ಭಾರತಕ್ಕೆ ನಿಜವಾದ ಕಂಟಕರಾಗಿದ್ದದ್ದು ಬ್ರಿಟಿಷರಿಗಿಂತ ಹೆಚ್ಚಾಗಿ ಬ್ರಿಟಿಷ್ ಸರ್ಕಾರದ ಬೂಟು ನೆಕ್ಕುತ್ತಿದ್ದ ಇದೇ ಬಲಪಂಥೀಯ ನಾಯಕರುಗಳು. ತಮ್ಮನ್ನು ತಾವು ಭಾರತೀಯರು ಎಂದು ಕರೆಸಿಕೊಳ್ಳುತ್ತಿದ್ದ ಇವರುಗಳು ಸ್ವಾತಂತ್ರ್ಯ ಹೋರಾಟಗಾರರ ಚಲನವಲನಗಳ ಕುರಿತಾದ ಮಾಹಿತಿಗಳನ್ನು ಬ್ರಿಟಿಷ್ ಸರ್ಕಾರಕ್ಕೆ ನೀಡುತ್ತಿದ್ದರು ಮತ್ತು ಆ ಮೂಲಕ ಎಷ್ಟೋ ಸ್ವಾತಂತ್ರ್ಯ ಹೋರಾಟಗಾರರಿಗೆ ಗಲ್ಲು ಮತ್ತಿತರ ಕಠಿಣ ಶಿಕ್ಷೆಗೆ ಗುರಿಪಡಿಸಿದ್ದರು. ಈ ರೀತಿಯಾಗಿ ಬ್ರಿಟಿಷರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಭಾರತ ಮಾತೆಗೆ ದ್ರೋಹ ಎಸಗಿದ ಆರೆಸ್ಸೆಸ್ ನಾಯಕರ ಕುರಿತಾದ ಪಠ್ಯಗಳನ್ನು ನಮ್ಮ ಕನ್ನಡದ ಮಕ್ಕಳು ಓದಬೇಕೆ? ಎಂಬ ಕೂಗು ಎದ್ದಿದೆ.

ರಾಜ್ಯ ಸರ್ಕಾರ ಹತ್ತನೆಯ ತರಗತಿಯ ಪಠ್ಯಪುಸ್ತಕದಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಗಾಂಧಿ ಹತ್ಯೆ ಮತ್ತಿತ್ತರ ಹಲವು ಕಾರಣಕ್ಕಾಗಿ ಹಲವು ಬಾರಿ ನಿಷೇಧಕ್ಕೊಳಗಾದ ಸಂಸ್ಥೆ ಆರೆಸ್ಸೆಸ್ ನ ಸಂಸ್ಥಾಪಕ ಹೆಡ್ಗೆವಾರ್ (ಕೇಶವ ಬಲಿರಾಂ ಹೆಡಗೇವಾರ್) ಅವರ ಭಾಷಣವನ್ನು ಸೇರ್ಪಡೆ ಗೊಳಿಸಿರುವುದು ಮತ್ತು ಅಪ್ರತಿಮ ದೇಶಭಕ್ತ ಭಗತ್ ಸಿಂಗ್ ಕುರಿತಾದ ಮಾಹಿತಿ ಹಾಗೂ ಲಂಕೇಶ್ ಮತ್ತಿತರ ಪ್ರಗತಿಪರರ ಪಠ್ಯಗಳನ್ನು ಕೈಬಿಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಲಪಂಥಿಯವಾದಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಹೆಡ್ಗೆವಾರ್ ಅವರ ಭಾಷಣವನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು ಹಾಗೂ ಆ ಶಿಫಾರಸ್ಸಿನಂತೆ ಶಿಕ್ಷಣ ಇಲಾಖೆ 2022-23ರ ಶೈಕ್ಷಣಿಕ ವರ್ಷದಿಂದ ಹತ್ತನೆಯ ತರಗತಿಯ ಕನ್ನಡ ವಿಷಯ (ಪ್ರಥಮ ಭಾಷೆ)ದ ಐದನೆ ಪಾಠವಾಗಿ ಹೆಡ್ಗೆವಾರ್ ಅವರ ಭಾಷಣ (ನಿಜವಾದ ಆದರ್ಶ ಪುರುಷ ಯಾರಾಗಬೇಕು?) ವನ್ನು ಸೇರ್ಪಡೆಗೊಳಿಸಿದೆ. ಜೊತೆಗೆ ಜನಾಂಗೀಯ ಧ್ವೇಷವನ್ನು ಖಂಡಿಸುವ ಪಿ.ಲಂಕೇಶ್ ರವರ ''ಮೃಗ ಮತ್ತು ಸುಂದರಿ'', ಸಾರಾ ಅಬುಬಕ್ಕರ್ ಅವರ ''ಯುದ್ಧ'', ಎ.ಎನ್ ಮೂರ್ತಿರಾಯರ "ವ್ಯಾಘ್ರಗೀತೆ'' ಮುಂತಾದ ವಿದ್ಯಾರ್ಥಿಗಳಲ್ಲಿ ಆದರ್ಶವನ್ನು ಹಾಗೂ ನೈತಿಕತೆಯನ್ನು ತುಂಬಿಸುವ ಹಲವು ಪಠ್ಯಗಳನ್ನು ಕೈ ಬಿಡಲಾಗಿದೆ ಅಲ್ಲದೆ ಭಗತ್ ಸಿಂಗ್ ಕುರಿತಾದ ಪಠ್ಯವನ್ನು ಕೂಡ ಕೈಬಿಡಲಾಗಿದೆ ಎಂಬ ಆತಂಕಕಾರಿ ವಿಚಾರ ಕೂಡ ವರದಿಯಾಗಿದೆ.

ಈ ಕುರಿತು ಶೈಕ್ಷಣಿಕ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಹಾಗೆಯೇ, ನಾಡಗೀತೆಯನ್ನು ತಿರುಚಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದ ಹಾಗೂ ಸದಾ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಅಂಶಗಳನ್ನೊಳಗೊಂಡ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದ ರೋಹಿತ್ ಚಕ್ರತೀರ್ಥ ಎಂಬ ಬಲಪಂಥಿಯ ವ್ಯಕ್ತಿಯ ನೇತೃತ್ವದ ಪಠ್ಯಪುಸ್ತಕ ಸಮಿತಿಯು ನಮ್ಮ ವಿಧ್ಯಾರ್ಥಿಗಳಿಗೆ ಅದೆಂತಹ ನೈತಿಕತೆಯನ್ನು ಬೋದಿಸಬಲ್ಲುದು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅಸಹ್ಯದ ಹೇರಿಕೆಯನ್ನು ಸಹಿಸಿಕೊಳ್ಳುವುದು ಭವಿಷ್ಯದ ಜನಾಂಗಕ್ಕೆ ನಾವು ಮಾಡುವ ಘೋರ ಅನ್ಯಾಯ ಎಂಬ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
Advertisement
Advertisement
Recent Posts
Advertisement