Advertisement

ನಾರಾಯಣಗುರು, ಭಗತ್ ಸಿಂಗ್, ಪೆರಿಯಾರ್ ಪಠ್ಯ ಕೈಬಿಟ್ಟಿರುವುದರ ಮತ್ತು ಹೆಡ್ಗೇವಾರ್ ಮತ್ತಿತರೆ ಮನುವಾದಿ  ಪಠ್ಯಗಳನ್ನು ಸೇರಿಸಿರುವುದರ ಹಿಂದಿರುವ ಗುಟ್ಟೇನು: ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಶ್ನೆ

Advertisement
"ಹಿಂದುತ್ವದ ಹೆಸರಲ್ಲಿ ಈ ದೇಶದ ಬಹುತ್ವದ ಕೊಲೆಗೆ ಶಿಕ್ಷಣ ಕ್ಷೇತ್ರವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ನೋಡುತ್ತಿರುವ ಆರೆಸ್ಸೆಸ್ ಪ್ರಯೋಜಿತ ಬಿಜೆಪಿ ಹುನ್ನಾರವನ್ನು ಖಂಡಿಸುವ ಕಾಂಗ್ರೆಸ್ ನಾಯಕರು ಸಂಸದ ಪ್ರತಾಪಸಿಂಹ ರಂತವರಿಗೆ ವಿಚಾರ ನಪುಂಸಕರಂತೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಯಾಕೆಂದರೆ ವಿಚಾರಹೀನ ಅಪ್ರಭುದ್ಧ ಮನಸ್ಥಿತಿಗೆ ವಿಚಾರವಂತಿಗೆಯ ಪ್ರಭುದ್ಧತೆ ಅರ್ಥ ಆಗಲು ಸಾಧ್ಯವಿಲ್ಲ" ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ಸರಿಯಾಗಿಯೇ ಇದೆ. ಅರ್ ಎಸ್ ಎಸ್ ಪ್ರತಿಪಾದಿಸುವ ಹಿಂದುತ್ವ , ಪ್ರಸಕ್ತ ಪರಿಸ್ಥಿತಿಯಲ್ಲಿ ಸಹಜವಾಗಿಯೇ ಆರ್ಯ ಸಂಸ್ಕೃತಿಯ ಮೂಲವನ್ನು ಹುಡುಕ ಬೇಕಾದ ಅನಿವಾರ್ಯತೆಯನ್ನ ದೇಶವಾಸಿಗಳಲ್ಲಿ ಹುಟ್ಟು ಹಾಕಿದೆ. ಇರಾನ್- ಮಧ್ಯ ಏಷ್ಯಾ ಮೂಲದಿಂದ ಬಂದ ಆರ್ಯರು, ಭಾರತೀಯರಾದಂತೆ ಈ ದೇಶದ ಮಣ್ಣಿನ ಮಗನನ್ನು ಪತಿಯಾಗಿ ವರಿಸಿ ಇಲ್ಲಿಗೆ ಬಂದು ನೆಲೆಸಿದ ಸೋನಿಯಾ ಗಾಂಧಿ ಇಟೆಲಿ ಮೂಲದವರಾದರೂ ಭಾರತೀಯ ಸಂಸ್ಕೃತಿಯಂತೆ ಭಾರತೀಯಳೇ ಆಗಿದ್ದಾರೆ. ಸಂಸದ ಪ್ರತಾಪ ಸಿಂಹ ಸೋನಿಯಾ ಮೂಲ ಹುಡುಕುವ ಮೊದಲು ತನ್ನ ಮನಸ್ಸಾಕ್ಷಿಯನ್ನು ಒರೆಗೆ ಹಚ್ಚಿ ಭಾರತೀಯ ಸಂಸ್ಕೃತಿಯ ಮೂಲ ಸೆಲೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ನಾಡಿನ ಜನರಿಂದ ಠೀಕೆಗೊಳಗಾದ ತನ್ನ ಪಕ್ಷದ ಸರಕಾರದ ಮಾನ ಉಳಿಸುವ ನಿಟ್ಟಿನಲ್ಲಿ, ಸಿಇಟಿ ಪ್ರೊಪೆಸರ್ ಎಂದು ಟ್ರೋಲ್ ಆಗಿರುವ, ರಾಷ್ಟ್ರಕವಿ ಕುವೆಂಪು ರವರ ನಾಡಗೀತೆಯನ್ನು ಅವಮಾನಿಸಿದವರಲ್ಲಿ ಒಬ್ಬನಾಗಿರುವ, ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರಂತವರನ್ನು ಪ್ರತಿಪಾದಿಸುವುದಾಗಲಿ ಮಿಥ್ಯೆಯನ್ನು ಸತ್ಯವೆಂದು ವಾದಿಸುವುದಾಗಲಿ ಪ್ರತಾಪಸಿಂಹರಂತಹ ಸುವಿಧ್ಯಾವಂತ ಸಂಸದನಿಗೆ ಎಷ್ಟು ಮಾತ್ರಕ್ಕೂ ಭೂಷಣವಲ್ಲ. ಒತ್ತಡಕ್ಕೆ ಮಣಿದು ನಾರಾಯಣಗುರು ಪಠ್ಯವನ್ನು ಸಮಾಜ ವಿಜ್ಞಾನ ಪಠ್ಯದಿಂದ ಕನ್ನಡ ಪಠ್ಯಕ್ಕೆ ವರ್ಗಾಯಿಸಿದರ ಹಿಂದೆ, ಭಗತ್ ಸಿಂಗ್ ಪೆರಿಯಾರ್ ಪಠ್ಯ ಕೈ ಬಿಟ್ಟ ಹಿಂದೆ, ಹೆಡ್ಗೇವಾರ್ ಹಾಗೂ ಇತರೆ ಮನುವಾದ ಪರಂಪರೆಯ ಪಠ್ಯಗಳನ್ನು ಸೇರಿಸಿರುವುದರ ಹಿಂದೆ ಯಾವ ಕಾರ್ಯಸೂಚಿ ಅಡಗಿದೆ ಎಂಬ ಸತ್ಯ ನಾಡಿನ ಜನರಿಗೆ ತಿಳಿದಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
Advertisement
Recent Posts
Advertisement