ರಾಜ್ಯ

ಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಮತ್ತೊಂದು ದೇಶದ ಬಳಿ ಕ್ಷಮೆ ಯಾಚಿಸುವಂತಾಗಿದೆ: ಡಾ. ಎಚ್.ಸಿ ಮಹಾದೇವಪ್ಪ ಕಿಡಿ

Published by
“ಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಏಕೆ ಮತ್ತೊಂದು ದೇಶದ ಬಳಿ ಕ್ಷಮೆಯಾಚಿಸಬೇಕು? ಈ ಹಿಂದೆಯೂ ಕೂಡಾ ರಾಜತಾಂತ್ರಿಕ ರೀತಿ ನೀತಿಗಳನ್ನು ಅರಿಯದೇ ಪ್ರಧಾನಿ ಮೋದಿಯವರು ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರವನ್ನು ಬಹಿರಂಗವಾಗಿ ನಡೆಸಿದ್ದರು. ಯಾರಾದರೂ ಹಾಗೆ ಮಾಡುತ್ತಾರೆಯೇ” ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಕಿಡಿ ಕಾರಿದ್ದಾರೆ.

“ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ವಿವಾದಿತೆ ಹೇಳಿಕೆ ನೀಡಿ ವಿಶ್ವದ ಹಲವು ರಾಷ್ಟ್ರಗಳಿಂದ ವಿರೋಧಿಸಲ್ಪಟ್ಟಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದ ಹುದ್ದೆಯಿಂದ ಉಚ್ಛಾಟನೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ #ShameOnYouModi ಎಂದು ವೈದಿಕಶಾಹಿಗಳು ಘೋಷಣೆ ಕೂಗಿದ್ದು ಟ್ವಿಟರ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಟ್ರೆಂಡಿಂಗ್ ಮಾಡಿದ್ದು ನರೇಂದ್ರ ಮೋದಿಯೂ ಕೂಡಾ ತಮ್ಮ ವಿಕೃತಿಗೆ ಹೊರತಲ್ಲ ಎಂಬ ಸಂದೇಶವನ್ನು ಅವರು ಸಾರಿದರು” ಎಂದವರು ವಿಶ್ಲೇಶಿಸಿದ್ದಾರೆ.

“ಈ ರೀತಿಯ ನಡವಳಿಕೆಗಳು ಪ್ರಧಾನಿ ಮೋದಿ ಓರ್ವ ಪ್ರಧಾನಿಗಿಂತಲೂ ಯಾರದ್ದೋ ಸೂತ್ರದ ಗೊಂಬೆ ಎಂಬುದನ್ನು ಸಾಬೀತುಪಡಿಸಿವೆ. ಸಾಲದು ಎಂಬಂತೆ ಬಿಜೆಪಿಗರು ತಮ್ಮ ವಿಕೃತಿ ಮತ್ತು ದ್ವೇಷದ ಭಾವನೆಯನ್ನು ಅನಾವರಣಗೊಳಿಸಿ ಜಗತ್ತಿನ ಮಟ್ಟದಲ್ಲಿ ಭಾರತದ ಘನತೆ ಮತ್ತು ಗೌರವವನ್ನು ಕಳೆಯುವಂತಹ ಕೆಲಸ ಮಾಡಿದ್ದಾರೆ” ಎಂದವರು ಖೇದ ವ್ಯಕ್ತಪಡಿಸಿದ್ದಾರೆ.
Share
Published by

Recent Posts