Advertisement

ಕಾರ್ಕಳ ರಸ್ತೆಗೆ ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದಕ ಗೋಡ್ಸೆ ಹೆಸರಿನ ನಾಮಫಲಕ ಅಳವಡಿಕೆ: ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ

Advertisement
ಕಾರ್ಕಳದ ಶಾಸಕ ಹಾಗೂ ರಾಜ್ಯದ ಇಂಧನ ಸಚಿವ ಸುನೀಲ್ ಕುಮಾರ್ ರವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಸ್ತೆಯೊಂದಕ್ಕೆ ಸ್ವತಂತ್ರ ಭಾರತದ ಮೊತ್ತಮೊದಲ ಭಯೋತ್ಪಾದಕ, ಹಂತಕ ನಾಥೂರಾಂ ಗೋಡ್ಸೆಯ ಹೆಸರಿಟ್ಟು, ವೈಭವೀಕರಿಸಿ ನಾಮಫಲಕ ಅಳವಡಿಕೆ ಮಾಡಿರುವುದು ದೇಶದ ಸಂವಿಧಾನಕ್ಕೆ ಬಗೆದ ಮಹಾ ಅಪಚಾರವಾಗಿದೆ ಹಾಗೆಯೇ ನಾಥೂರಾಂ ಘೋಡ್ಸೆ ಈ ದೇಶದ ಘನ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಓರ್ವ ಕೊಲೆ ಅಪರಾಧಿಯಾಗಿದ್ದು ಆತನನ್ನು ವೈಭವೀಕರಿಸುವುದು ಇದು ದೇಶದ್ರೋಹದ ವ್ಯಾಪ್ತಿಗೆ ಬರುವ ಪ್ರಕರಣವಾಗಿದ್ದು ಈ ಕುರಿತು ಜಿಲ್ಲಾಡಳಿತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದೆ.

ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ ಜೀವನದ ಬಹುಪಾಲು ಸಮಯವನ್ನು ಬ್ರಿಟೀಷರ ವಿರುದ್ಧ ಸತ್ಯಾಗ್ರಹ, ಜೈಲುವಾಸದಲ್ಲಿ ಕಳೆದು ಹಣ್ಣುಹಣ್ಣು ಮುದುಕರಾಗಿದ್ದ, ದೇಹದಲ್ಲಿ ತ್ರಾಣವಿಲ್ಲದೆ ಕೋಲು ಹಿಡಿದು ನಡೆಯುತ್ತಿದ್ದ ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರನ್ನು ಭೀಕರವಾಗಿ ಕೊಲೆಗೈದು ಈ ದೇಶದ ಕಾನೂನಿನಡಿಯಲ್ಲಿ ಗಲ್ಲು ಶಿಕ್ಷೆಗೊಳಗಾದ ರಾಷ್ಟ್ರ ದ್ರೋಹಿಯ ಹೆಸರನ್ನು ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತು ವ್ಯಾಪ್ತಿಯ ಬೋಳ ಪಡುಗಿರಿ ಅಂಬರಾಡಿ ಸಂಪರ್ಕ ರಸ್ತೆಗೆ ಇಟ್ಟು, ನಾಮಫಲಕ ಅಳವಡಿಸುವ ಮೂಲಕ ಬಿಜೆಪಿ ಪಕ್ಷ ರಾಷ್ಟ್ರ ದ್ರೋಹದ ಕೃತ್ಯವೆಸಗಿದೆ. ಆ ಮೂಲಕ ಅದು ತನ್ನ ಮೂಲಭೂತವಾದಿ ಚಿಂತನೆಯ ರಾಷ್ಟ್ರದ್ರೋಹದ ಗುಪ್ತಕಾರ್ಯಸೂಚಿಗೆ ಸಾಕ್ಷಿ ಒದಗಿಸಿದೆ.

ಈಗಾಗಲೇ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ನ ಎಚ್ಚರಿಕೆಗೆ ಮಣಿದು ಕಾರ್ಕಳ ಪೊಲೀಸರ ಮೂಲಕ ತೆರವುಗೊಳಿಸಲಾದ ಬೋಡ್೯ ಗ್ರಾಮ ಪಂಚಾಯತಿಗೆ ಸೇರಿದ ಅಧಿಕೃತ ಬೋರ್ಡು ಆಗಿದೆ ಎನ್ನಲಾಗಿದೆ. ಈ ಬಗ್ಗೆ ಪಂಚಾಯತಿಯ ಗಮನಕ್ಕೆ ತಾರದೆ ಯಾರೋ ಖಾಸಗಿಯವರು ಈ ಬೋರ್ಡನ್ನು ಹಾಕಿದ್ದಾರೆ ಎನ್ನುವ ಸಚಿವ ಸುನೀಲ್ ಕುಮಾರ್ ಹೇಳಿಕೆ ತನ್ನ ತಲೆದಂಡ ತಪ್ಪಿಸಲು ನೀಡಿದ ಹಾರಿಕೆಯ ಉತ್ತರವಾಗಿದೆ. ಬಿಜೆಪಿ ಬೆಂಬಲಿತರ ಆಡಳಿತ ಇರುವ ಈ ಪಂಚಾಯತಿನಲ್ಲಿ ಎಲ್ಲ ನಿರ್ಣಯಗಳು ಪಕ್ಷದ ಮಾರ್ಗಸೂಚಿಯಂತೆಯೇ ನಡೆಯುತ್ತವೆ ಎನ್ನುವುದು ಜನಜನಿತವಾಗಿದೆ. ಈ ಕುರಿತು ತನಿಖೆಗೆ ಕಾಂಗ್ರೆಸ್ ಒತ್ತಾಯಿಸುತ್ತದೆ.

ರಾಷ್ಟ್ರಪಿತನ ಹಂತಕನ ಹೆಸರನ್ನು ಸರಕಾರದ ಅನುದಾನದಿಂದ ನಿರ್ಮಿಸಿದ ರಸ್ತೆಗೆ ಇಟ್ಟ ಬೋಳ ಗ್ರಾಮ ಪಂಚಾಯತ್ ವಿರುದ್ದ, ಉಡುಪಿ ಜಿಲ್ಲಾಡಳಿತ ಮತ್ತು ಆರಕ್ಷಕ ಇಲಾಖೆ ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪಂಚಾಯತ್ ರಾಜ್ ವ್ಯವಸ್ಥೆಗೆ ದ್ರೋಹ ಬಗೆದ ಈ ಗ್ರಾಮ ಪಂಚಾಯತನ್ನು ಸರಕಾರ ಕೂಡಲೇ ಬರ್ಕಾಸ್ತು ಗೊಳಿಸ ಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಸ್ಟರ್.

Advertisement
Advertisement
Recent Posts
Advertisement