ರಾಜ್ಯ

ರಾಹುಲ್ ಗಾಂಧಿಯವರನ್ನ ದಿನಕ್ಕೆ 10ಗಂಟೆಯಂತೆ 5 ದಿನಗಳ ತನಕ ತನಿಖೆಗೆ ಕರೆಯುವ ಮೂಲಕ ಕಿರುಕುಳ ನೀಡುತ್ತಿರುವುದು ಸರಿನಾ?: ಕುಮಾರಸ್ವಾಮಿ ಪ್ರಶ್ನೆ

Published by
“ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯವರಿಗೆ ಇಡಿ ಐದು ದಿನ ನಿರಂತರವಾಗಿ ವಿಚಾರಣೆಗೆ ಕರೆದಿದ್ದಾರೆ. ಆ ತನಿಖಾ ಸಂಸ್ಥೆಯವರಿಗೆ ನಾನು ಕೇಳೋದು, ಮಾಹಿತಿ ತೆಗೆಯಲು ನಿಮಗೆ ಐದು ದಿನ ಬೇಕಾ? ಯಾತಕ್ಕೆ ನಿತ್ಯ ಕರಿತಿದ್ದೀರಿ, ಆ ಮೂಲಕ ದೇಶಕ್ಕೆ
ಏನು ಸಂದೇಶ ಕೊಡೋಕೆ ಹೊರಟಿದ್ದೀರಿ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


“ನ್ಯಾಶನಲ್ ಹೆರಾಲ್ಡ್ ಕುರಿತಾದ ಸಂಪೂರ್ಣ ದಾಖಲೆ ನಿಮ್ಮ ಬಳಿ ಇದೆ. ಕಂಪೆನಿ ಪ್ರಾರಂಭ ಹೇಗಾಯಿತು, ಏಕಾಯಿತು? ಹಣ ಎಲ್ಲಿಂದ ಬಂತು ಎಂಬ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದೆ. ನಿರಂತರ ಐದು ದಿನ ಪ್ರತಿ ನಿತ್ಯ ಹತ್ತು ಗಂಟೆ ನಿಮ್ಮ ಕಚೇರಿಯಲ್ಲಿ ಕರೆದು ಕೂರಿಸಿಕೊಂಡು ಏನು ತನಿಖೆ ಮಾಡುತ್ತಿದ್ದೀರಾ? ಏನು ವಿಷಯ ಸಂಗ್ರಹ ಮಾಡುತ್ತಿದ್ದೀರಿ? ಅದಕ್ಕೆ ಇಷ್ಟು ದಿನ ಬೇಕಾ” ಎಂದವರು ಖಾರವಾಗಿ ಪ್ರಶ್ನಿಸಿದ್ದಾರೆ‌.

“ತನಿಖೆಗೆ ಪೂರಕವಾಗಿ ಮಾಹಿತಿ ಪಡೆಯಲು ಅರ್ಧ ಅಥವಾ ಒಂದು ಗಂಟೆ ಕೆಲಸ ಇರಬಹುದು. ಈಗಾಗಲೇ ಮಾಹಿತಿ ಪಡೆದಿದ್ದರೂ ಯಾತಕ್ಕೆ ತಳ್ಳುತ್ತಿದ್ದೀರಾ. ಜನರ ಮುಂದೆ ಒಂದು ವ್ಯವಸ್ಥಿತ ಅನುಮಾನ ತರುವ ಕೆಲಸದ ಒಂದು ಭಾಗ ಇದು. ರಾಹುಲ್ ಗಾಂಧಿಯವರನ್ನ ಹೆದರಿಸೋದು ಇನ್ನೊಂದು ಭಾಗ. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಿ ಅದು ಬಿಟ್ಟು ದಿನಾ ಯಾಕೆ ಕಿರುಕುಳ ಕೊಡುತ್ತಿದ್ದೀರಿ” ಎಂದವರು ಪ್ರಶ್ನಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

Share
Published by

Recent Posts