ರಾಜ್ಯ

ಜೂನ್ 16: ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಂದ ರಾಜಭವನ ಚಲೋ : ಡಿ.ಕೆ ಶಿವಕುಮಾರ್

Published by
ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ರಾಜಭವನ ಚಲೋ ಹಿನ್ನಲೆಯಲ್ಲಿ ಜೂನ್ 16ರಂದು ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು, ರಾಜ್ಯದ ಎಲ್ಲಾ ಶಾಸಕರು, ಮಾಜಿ ಶಾಸಕರುಗಳು, ಮಾಜಿ ಸಂಸದರುಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ರಾಜ್ಯದೆಲ್ಲೆಡೆಯಿಂದ ಬೆಂಗಳೂರಿಗೆ ಆಗಮಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿರುತ್ತಾರೆ.

https://youtube.com/shorts/Xa6lsEafSf4?feature=share

ಆ ಪ್ರಯುಕ್ತ ಗುರುವಾರ ಬೆಳಿಗ್ಗೆ 10ಗಂಟೆಗೆ ಪಕ್ಷದ ಸಮಸ್ತ ನಾಯಕರುಗಳು, ಕಾರ್ಯಕರ್ತರುಗಳು ಕೆಪಿಸಿಸಿ ಕ್ವೀನ್ಸ್ ರಸ್ತೆಯ ಕಚೇರಿಗೆ ಆಗಮಿಸಿ, ಅಲ್ಲಿಂದ ಜೊತೆಯಾಗಿ ಕಾಲ್ನಡಿಗೆ ಮೂಲಕ ರಾಜಭವನಕ್ಕೆ ತೆರಳಲಾಗುವುದು ಎಂದವರು ವಿನಂತಿಸಿದ್ದಾರೆ.

Share
Published by

Recent Posts