ಪ್ರಧಾನಿ ಮೋದಿಯವರ ಐದು ಬಲಹೀನತೆಗಳನ್ನು ಬಹಿರಂಗಪಡಿಸಿದ ರಾಹುಲ್‌ ಗಾಂಧಿ

"ಚೀನಾದ ಅತಿಕ್ರಮಣ ಮತ್ತು ಅದರ ಬಗೆಗಿನ ಪ್ರಧಾನಿ ಮೋದಿಯವರ ಮೌನವು ದೇಶಕ್ಕೆ ಅತ್ಯಂತ ಅಪಾಯಕಾರಕ" ಎಂದು ಬಣ್ಣುಸಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಮೋದಿ ಅವರ ಐದು ಬಲಹೀನತೆಗಳನ್ನು ಬಹಿರಂಗಪಡಿಸಿದ್ದಾರೆ.

ಮೋದಿ ಅವರು ಚೀನಾಕ್ಕೆ ಹೆದರಿದ್ದಾರೆ ಮತ್ತು ತಮ್ಮ ಕೃತಕ ಇಮೇಜ್ ರಕ್ಷಿಸಿಕೊಳ್ಳುವುದಕ್ಕಾಗಿ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಅವರು ಆರೋಪಿಸಿದರು.

‘'ಪ್ರಧಾನಿ ಕುರಿತ ಐದು ಸತ್ಯಗಳು: 1. ಚೀನಾಕ್ಕೆ ಹೆದರುತ್ತಾರೆ. 2. ದೇಶದ ಜನರಿಂದ ಸತ್ಯವನ್ನು ಮರೆಮಾಚುತ್ತಾರೆ. 3. ಕೇವಲ ತಮ್ಮ ಇಮೇಜ್ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. 4. ಭಾರತೀಯ ಸೇನೆಯ ನೈತಿಕತೆಯನ್ನು ಕುಗ್ಗಿಸುತ್ತಿದ್ದಾರೆ. 5. ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’' ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

‘'ಚೀನಾದಿಂದ ಹೆಚ್ಚುತ್ತಿರುವ ಒಳನುಸುಳುವಿಕೆ ಮತ್ತು ಪ್ರಧಾನಿಯವರ ಮೌನವು ದೇಶಕ್ಕೆ ತುಂಬಾ ಹಾನಿಕಾರಕ’' ಎಂದು ರಾಹುಲ್‌ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

ಚೀನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರಿಸಿದೆ ಮತ್ತು ಅದನ್ನು ಮರಳಿ ಪಡೆಯಲು ಸರ್ಕಾರ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಬಂದಿದೆ.