Advertisement

ಸಿದ್ದರಾಮಯ್ಯನವರ ಹುಟ್ಟು ಹಬ್ಬದಲ್ಲಿ 10ಲಕ್ಷಕ್ಕೂ ಮಿಕ್ಕಿದ ಜನ: ಕಕ್ಕಾಬಿಕ್ಕಿಯಾದ ಎಂಜಲುಕಾಸಿ ಮಾಧ್ಯಮಗಳು ಮತ್ತು ಆಪರೇಷನ್ ಕಮಲ ಸರ್ಕಾರ!

Advertisement

ಸಿದ್ದರಾಮಯ್ಯನವರ ಹುಟ್ಟು ಹಬ್ಬಕ್ಕೆ 10ಲಕ್ಷಕ್ಕೂ ಮಿಕ್ಕಿದ ಜನ ಸೇರಿರುವ ಕುರಿತು ದೇಶದ ಪ್ರಮುಖ ಜನಪರ ಪತ್ರಿಕೆಗಳು ವರದಿ ಮಾಡಿವೆ. ಆದರೆ ಈ ನಡುವೆ, ಎಂಜಲುಕಾಸಿ ಮಾಧ್ಯಮಗಳು ಮತ್ತು ಆಪರೇಷನ್ ಕಮಲ ಸರ್ಕಾರದ ನಾಯಕರುಗಳು ಕಕ್ಕಾಬಿಕ್ಕಿಯಾಗಿರುವ ಕುರಿತು ಅವರುಗಳು ಆ ಹುಟ್ಟು ಹಬ್ಬದ ಕುರಿತು ನಡೆಸುತ್ತಿರುವ ವಿಶ್ಲೇಷಣೆ ಮತ್ತು ನೀಡುತ್ತಿರುವ ಹೇಳಿಕೆಗಳಿಂದ ವ್ಯಕ್ತವಾಗುತ್ತದೆ.

ಕಾಂಗ್ರೆಸ್ ನವರು ತಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ನವರ ಹುಟ್ಟುಹಬ್ಬ ಆಚರಿಸಿದರೆ ಕರ್ನಾಟಕದ ಅಪರೇಷನ್ ಕಮಲ ಪಕ್ಷದ ನಾಯಕರುಗಳ ಪ್ರಕಾರ ಅದು "ವ್ಯಕ್ತಿಪೂಜೆ" ಯಾಗುತ್ತದೆ. ಜನಸಾಗರವನ್ನು ಕಂಡು ಉಂಟಾದ ಸಹಿಸಿಕೊಳ್ಳಲಾಗದ ಹೊಟ್ಟೆಯುರಿಯೇ ಅಂತಹ ಹೇಳಿಕೆಗಳನ್ನು ಅವರುಗಳು ನೀಡಲು ಕಾರಣ ಎನ್ನುವುದು ಬೆರಳುಚೀಪುವ ಎಳೆ ಮಕ್ಕಳಿಗೂ ಅರ್ಥವಾಗುವ ಸಂಗತಿಯಾಗಿದೆ.

ಅದೇನೆ ಇರಲಿ, ಕಾಂಗ್ರಸ್ ಪಕ್ಷಕ್ಕೆ ಮತ್ತದರ ನಾಯಕ ಸಿದ್ದರಾಮಯ್ಯ ನವರಿಗೆ ನಾಡಿನಾದ್ಯಂತ ಅದೆಂತಹ ಜನಬೆಂಬಲ ಇದೆ ಎನ್ನುವುದನ್ನು ಇದೀಗ ಎಂಜಲುಕಾಸಿ ಮಾಧ್ಯಮ ಗಳು ಹಾಗೂ ಆಪರೇಷನ್ ಕಮಲ ಸರ್ಕಾರದ ನಾಯಕರುಗಳು ಅರಿತುಕೊಂಡಿದ್ದಾರೆ ಎಂಬುದು ನಿರ್ವಿವಾದವಾದ ವಿಚಾರವಾಗಿದೆ.

ಹಾಗೆಯೇ, ಅದೇ ಎಂಜಲು ಕಾಸಿ ಮಾಧ್ಯಮಗಳು ಹಾಗೂ ಆಪರೇಷನ್ ಕಮಲ ಪಕ್ಷದ ನಾಯಕರುಗಳು "ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಾಯಕರುಗಳೊಳಗಿನ ಪೈಪೋಟಿಯೇ ಈ ಹುಟ್ಟುಹಬ್ಬದ ಆಚರಣೆ" ಎಂದು ಬಿಂಬಿಸಲು ಪ್ರಯತ್ನಿಸುವ ಮೂಲಕ ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂಬ ಸಂದೇಶವನ್ನು ರಾಜ್ಯದ ಜನರಿಗೆ ಪರೋಕ್ಷವಾಗಿ ರವಾನಿಸಿದ್ದಾರೆ ಹಾಗೂ ಆ ಮೂಲಕ ತಮ್ಮ ಕಾಲಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಈ ನಡುವೆ ಸ್ವತಃ ಸಿದ್ದರಾಮಯ್ಯ ನವರೇ ಆಪರೇಷನ್ ಕಮಲ ಪಕ್ಷದ ನಾಯಕರುಗಳು ಹಾಗೂ ತಿರುಚಿದ ಸುದ್ದಿ ಪ್ರಕಟಿಸುವ ಎಂಜಲುಕಾಸಿ ಮಾಧ್ಯಮಗಳಿಗೆ ತಿರುಗೇಟು ನೀಡಿದ್ದು "ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುವುದು ಕಾಂಗ್ರೆಸ್ ಶಾಸಕರುಗಳು ಮತ್ತು ಹೈಕಮಾಂಡ್" ಎಂದು ಹೇಳಿಕೆ ನೀಡಿದ್ದಾರೆ.

ಬಹುಶಃ, ಹುಟ್ಟು ಹಬ್ಬಕ್ಕೆ ಸೇರಿದ ಜನಸಾಗರ ಕಂಡು "ತಮ್ಮ ಪಕ್ಷದ ಸಂವಿಧಾನ ವಿರೋಧಿ ನಾಯಕರುಗಳು ಕೋಮುಪ್ರಚೋಧನಾಕಾರಿ ಹೇಳಿಕೆಗಳನ್ನು ನೀಡುವ ಮೂಲಕ ದಿನನಿತ್ಯವೂ ಕೋಮುಗಲಭೆ, ಕೊಲೆಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದರೂ ಇದ್ಯಾಕೆ ಜನ ನಮ್ಮ ಪರ ಬಾರದೆ, ಸಿದ್ದರಾಮಯ್ಯ ನವರ ಹುಟ್ಟು ಹಬ್ಬಕ್ಕೆ ಹೋಗುತ್ತಿದ್ದಾರೆ?" ಎಂದು ಆಪರೇಷನ್ ಕಮಲ ಪಕ್ಷದವರು ಮಂಡೆಬಿಸಿ ಮಾಡಿಕೊಂಡಂತಿದೆ.

ಈ ನಡುವೆ ಇತ್ತ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮೋತ್ಸವ ನಡೆಸುತ್ತಿದ್ದರೆ ಅತ್ತ ಆಪರೇಷನ್ ಕಮಲ ಪಕ್ಷದ ರಾಜ್ಯಾಧ್ಯಕ್ಷರು, ಕರ್ನಾಟಕ ಪ್ರವಾಸದಲ್ಲಿರುವ ಗುಜರಾತ್‌ನ ಗಡಿಪಾರು ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದೆ. ಹಾಗೆಯೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವರು ವ್ಯಂಗ್ಯವಾಡಿದ್ದು "ಅವರಿಗಂತೂ ಪಾಪ ಗುಜರಾತಿ, ಹಿಂದಿ ,ಇಂಗ್ಲಿಷ್ ಬಿಟ್ಟರೆ ಕನ್ನಡ ಮತ್ತು ತುಳು ಎರಡೂ ಬರುವುದಿಲ್ಲ. ಇವರಿಗೆ ಸ್ಪಷ್ಟ ತುಳು ಮತ್ತು ಅಸ್ಪಷ್ಟ ಕನ್ನಡ ಬಿಟ್ಟರೆ ಬೇರೆ ಬಾಷೆ ಖಂಡಿತವಾಗಿಯೂ ಬರುವುದಿಲ್ಲ. ಹಾಗಾದರೆ ಅವರಿಬ್ಬರೂ ಯಾವ ಬಾಷೆಯಲ್ಲಿ ಮಾತನಾಡಿರಬಹುದು?" ಎಂದಿದ್ದಾರೆ.

ಈ ಹಿಂದೆ ಪೇಪರ್ ತಿಮ್ಮ ಎಂಬ ಆಪರೇಷನ್ ಕಮಲ ಪಕ್ಷದ ಸಂಸದ ಸೆಲ್ಫಿ ವಿಡಿಯೋ ದಲ್ಲಿ ಅದೇ ಗಡಿಪಾರು ನಾಯಕರ ಕುರಿತು "ಅವರು ಈ ತಿಂಗಳಲ್ಲಿ ಎಷ್ಟು ಪ್ರತಿಭಟನೆ ಮಾಡಿದಿರಿ? ಅದರಿಂದ ಎಷ್ಟು ಲಾಠಿಚಾರ್ಜು ಆಯಿತು? ಎಂದು ಲೆಕ್ಕ ಕೇಳಿದರು" ಎಂದು ಹೇಳಿದಂತೆ ಇದೀಗ ಆ ಅಪರೇಷನ್ ಕಮಲ ಪಕ್ಷದ ರಾಜ್ಯಾಧ್ಯಕ್ಷನ ಹತ್ತಿರವೂ "ಅದೇಕೆ ಹುಟ್ಟು ಹಬ್ಬ ಆಚರಿಸಲು ಬಿಟ್ಟಿರಿ? ಅದೇಕೆ ಗಲಭೆಗಳನ್ನು ಆಯೋಜಿಸಲಿಲ್ಲ? ಅದೇಕೆ ಅಯೋಜಿಸಿದ ಗಲಾಟೆಗಳನ್ನು ಪೋಲಿಸರು ತಣ್ಣಗಾಗಿಸಲು ಬಿಟ್ಟಿರಿ? ಆ ಪೋಲಿಸರು ನಿಮ್ಮ ಮಾತು ಕೇಳುವುದಿಲ್ಲವೇ? ಮಾತು ಕೇಳದ ಪೋಲಿಸರನ್ನು ಅದೇಕೆ ಐ.ಟಿ, ಇ.ಡಿ ಮೂಲಕ ನಿಯಂತ್ರಣ ಮಾಡಲಿಲ್ಲ ಎಂದೆಲ್ಲಾ ಕೇಳಿರಬಹುದೇ? ಹಾಗೆಯೇ, 'ಅವರು' ಕೇಳಿದ್ದು ಇವರಿಗೆ ಅರ್ಥವಾಗದೆ 'ಇವರು' "ಮುಂದಿನ ಬಾರಿ ಕರ್ನಾಟಕದಲ್ಲಿ ಒಂದು ರೂಪಾಯಿಗೆ ಹದಿನೈದು ಡಾಲರ್ ಸಿಗುವಂತೆ ಮಾಡುವುದು ಗ್ಯಾರಂಟಿ" ಅಥವಾ "ಜಿಲ್ಲೆಗೆ ಬೆಂಕಿ ಹಚ್ಚುತ್ತೆನೆ" ಎಂದು ಹೇಳಿರಬಹುದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ಅಸಲಿ ದೇಶಭಕ್ತರು ಕೇಳುತ್ತಿರುವುದು ಸ್ವಲ್ಪ ಮಟ್ಟಿನ ಅಪಹಾಸ್ಯ ಅನ್ನಿಸಿದರೂ ಹಾಗೆ ಇದ್ದರೂ ಇದ್ದಿರಲೂಬಹುದು ಅನ್ನಿಸದಿರದು.

ಪಾಪ, ಅದೆಂತಹ ಹೀನಾತಿಹೀನ ಪರಿಸ್ಥಿತಿ ಬಂತು ನೋಡಿ ಈ ಎಂಜಲುಕಾಸಿ ಮಾಧ್ಯಮಗಳಿಗೆ ಮತ್ತು ಆಪರೇಷನ್ ಕಮಲ ಪಕ್ಷದ ನಾಯಕರುಗಳಿಗೆ?

Advertisement
Advertisement
Recent Posts
Advertisement