"ತಾನು ಕಳ್ಳ ಪರರ ನಂಬ" ಎಂಬಂತಾಗಿದೆ ಸಚಿವ ಸುನಿಲ್ ಕುಮಾರ್ ಸ್ಥಿತಿ: ಕಾಂಗ್ರೆಸ್ ಲೇವಡಿ

ಭ್ರ್ರಷ್ಟಾಚಾರವನ್ನೇ ರಾಜಕೀಯವಾಗಿಸಿ ಕೊಂಡ ಬಿಜೆಪಿಯ ರಾಜಕೀಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಸಚಿವ ಸುನೀಲ್ ಕುಮಾರ್ ರವರ ಕಣ್ಣಿಗೆ ಮಾಜಿ ಸಿಎಂ. ಸಿದ್ಧರಾಮಯ್ಯ ಭ್ರಷ್ಟಾಚಾರಿಯ ಹಾಗೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಯಾಕೆಂದರೆ ವ್ಯಕ್ತಿಯ ನೋಡುವ ದೃಷ್ಟಿ ಮತ್ತು ಅಡುವ ಮಾತುಗಳು ಅವನ ಸಂಸ್ಕೃತಿಯನ್ನು ಅವಲಂಬಿತವಾಗಿರುತ್ತವೆ. ತಾನು ಕಳ್ಳ ಪರರ ನಂಬ ಎಂಬಂತಾಗಿದೆ ಸಚಿವ ಸುನಿಲ್ ಸ್ಥಿತಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.


ತನ್ನದೆ ಇಲಾಖೆಯ ಕೆಪಿಟಿಸಿಎಲ್ ಜ್ಯೂನಿಯರ್ ಇಂಜಿನಿಯರುಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ವಿಚಾರಣೆಗೊಳ ಪಡಿಸಲು ಮೀನಮೆಷ ಎಣಿಸುತ್ತಿರುವ ಸುನೀಲ್ ಕುಮಾರ್ ವಿಧ್ಯುತ್ ಬಿಲ್ ದರ ಏರಿಕೆಗೆ ಕಲ್ಲಿದ್ದಲು ಕೊರತೆಯ ಕಾರಣವನ್ನು ಮುಂದಿಟ್ಟು ತನ್ನ ಇಲಾಖೆಯೊಳಗೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮರೆಮಾಚಲು ನೋಡುತಿದ್ದಾರೆ.ಕೇಂದ್ರದಲ್ಲಿ ಇವರದ್ದೇ ಸರಕಾರ ಇರುವ ಹೊರತಾಗಿಯೂ ರಾಜ್ಯದಲ್ಲಿ ವಿಧ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆ ಆಗುತ್ತಿರುವುದಕ್ಕೆ ಸಚಿವರ ಬೇಜವಾಬ್ದಾರಿತನವೇ ಕಾರಣ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಇವರ ಸರಕಾರದ 40 ಪರ್ಸೆಂಟ್ ಕಮಿಷನ್ ದಂದೆ ಪ್ರಕರಣದಲ್ಲಿ ದೂರುದಾರ ರಾಜ್ಯ ಗುತ್ತಿಗೆದಾರ ಸಂಘದವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಾದರೆ ಯಾವ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಒತ್ತಾಯಿಸಿದರೂ ಮೌನ ವಹಿಸಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪಿಎಸ್ ಐ ನೇಮಕಾತಿಯ ಬಹುಕೋಟಿ ಲಂಚ ಪ್ರಕರಣ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣವೇ ಮೊದಲಾದ ಇವರದ್ದೇ ಸರಕಾರದ ಹತ್ತು ಹಲವು ಭ್ರಷ್ಟಾಚಾರದ ಪ್ರಕರಣಗಳನ್ನು ಈವರೆಗೂ ಪಾರದರ್ಶಕ ತನಿಖೆಗೆ ಏಕೆ ಒಳಪಡಿಸಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಜಿ ಕೆಟಗರಿ ಸೈಟ್ ಹಂಚಿಕೆ ಸಂಪೂರ್ಣ ನಿಷೇದವಾಗಿದ್ದರೂ, ಬದಲಿ ನಿವೇಶನದ ಹೆಸರಲ್ಲಿ ತಮ್ಮವರಿಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸೈಟ್ ಹಂಚಿಕೆ ಮಾಡಿ ಸುಪ್ರಿಂ ಕೋರ್ಟಿನಿಂದ ಛೀಮಾರಿ ಹಾಕಿಸಿ ಕೊಂಡ ಈ ಸರಕಾರದ ಯಾವುದೇ ಸಚಿವನಿಗ ಪ್ರತಿ ಪಕ್ಷ ನಾಯಕ ಸಿದ್ಧರಾಮಯ್ಯನವರ ಆರ್ಥಿಕ ಮತ್ತು ಸಾಮಾಜಿಕ ಬದ್ಧತೆಯನ್ನೊಳಗೊಂಡ ರಾಜಕೀಯ ನೈತಿಕತೆಯನ್ನು ಪ್ರಶ್ನಿಸುವ ಶಕ್ತಿ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.

ದೇಶದ ಹಿತ ದೃಷ್ಠಿಗಿಂತ ಅಧಿಕಾರವೇ ಮುಖ್ಯವೆಂದು ಬಗೆದಿದ್ದ‌ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಗುರಿಯೊಂದಿಗೆ ಪಿಎಫ್ಐ ಗೆ ಸಲುಗೆ ಕೊಟ್ಟು ಎಸ್ ಡಿಪಿಐ ಯನ್ನು ಸಾಕಿ ಬೆಳೆಸಿತ್ತು. ಇದಕ್ಕೇ ರಾಮಸೇನೆಯ ಪ್ರಮೋದ್ ಮುತಾಲಿಕ್ ರವರೇ ಸಾಕ್ಷಿ ನುಡಿದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಸುದೀರ್ಘ ಆಡಳಿತಾವಧಿಯಲ್ಲಿ ಸಿಮಿ ಸಂಘಟನೆಯೂ ಸೇರಿ ಸುಮಾರು 36ಕ್ಕೂ ಹೆಚ್ಚು ದೇಶದ ಒಳಗೆ ಮತ್ತು ದೇಶದ ಹೊರಗೆ ದೇಶದ ವಿರುದ್ಧ ಕಾರ್ಯನಿರ್ವಸುತ್ತಿದ್ದ ಉಗ್ರಗಾಮಿ ಸಂಘಟನೆಗಳನ್ನು ನಿಷೇದಿಲಾಗಿತ್ತು. ಆ ಧೈರ್ಯ ಮತ್ತು ಇಚ್ಛಾಶಕ್ತಿ ಈ ಸರಕಾರಕ್ಕಿಲ್ಲ. ಬಹುಶಃ ಈ ಸತ್ಯವನ್ನು ಅರಗಿಸಲು ಸಚಿವ ಸುನೀಲ್ ಕುಮಾರ್ ರವರಿಗೆ ಕಷ್ಟವಾದೀತು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.