Advertisement

ನವೆಂಬರ್ 26: ಕಾರ್ಟೂನು ಹಬ್ಬ ಬಳಗದಿಂದ ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಸ್ಪರ್ಧೆ

Advertisement

"ಕಾರ್ಟೂನು ಹಬ್ಬ ಬಳಗ, ಕುಂದಾಪುರ" ಇವರ ನೇತೃತ್ವದಲ್ಲಿ ಕಳೆದ 9ವರ್ಷಗಳಿಂದ ನಡೆದು ಬರುತ್ತಿರುವ "ಕಾರ್ಟೂನು ಹಬ್ಬ" ಈ ಬಾರಿ ನವೆಂಬರ್ 23ರಿಂದ 27ರ ತನಕ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದ್ದು ಆ ಪ್ರಯುಕ್ತ ನವೆಂಬರ್ 26ರಂದು ಮಧ್ಯಾಹ್ನ 2ಗಂಟೆಗೆ "ಕಾರ್ಟೂನು ಸ್ಪರ್ಧೆ" ನಡೆಯಲಿದೆ.

ಈ ಸ್ಪರ್ಧೆ 4ರಿಂದ 7ನೇಯ ತರಗತಿ, 8ರಿಂದ 10ನೇಯ ತರಗತಿ ಮತ್ತು ಪಿಯುಸಿ ಹಾಗೂ ಮೇಲ್ಪಟ್ಟು ಹೀಗೆ, ಮೂರು ವಿಭಾಗಗಳಲ್ಲಿ ನಡೆಯಲಿದೆ. "ಕಾರ್ಟೂನು ಸ್ಪರ್ಧೆಯ ವಿಷಯ"ವನ್ನು ಸ್ಪರ್ಧೆ ನಡೆಯುವ ಸ್ಥಳದಲ್ಲೇ ನೀಡಲಾಗುವುದು.

ಸ್ಪರ್ಧೆಯ ನಿಯಮಗಳು: ಸ್ಥಳದಲ್ಲಿ "ಸ್ಪರ್ಧೆಯ ವಿಷಯ" ನೀಡಿದಾಗ ವಿಧ್ಯಾರ್ಥಿಗಳು ಐಡಿಯಾ ಹೊಳೆಯದೆ ಗೊಂದಲಕ್ಕೊಳಗಾಗುವುದನ್ನು ತಪ್ಪಿಸಲು ವಿಧ್ಯಾರ್ಥಿಗಳು ತಮ್ಮ ತಮ್ಮ ಪೋಷಕರೊಂದಿಗೆ ವಿಷಯವನ್ನು ಚರ್ಚಿಸಲು ಸ್ಪರ್ಧೆಯ ಪೂರ್ವದಲ್ಲಿ 30ನಿಮಿಷಗಳ ಕಾಲಾವಕಾಶ ನೀಡಲಾಗುವುದು ಮತ್ತು ಆ ನಂತರ ಚಿತ್ರ ರಚಿಸಲು 2ಗಂಟೆಗಳ ಕಾಲಾವಕಾಶ ದೊರೆಯಲಿದೆ. ಸ್ಪರ್ಧೆಯ ಸಮಯದಲ್ಲಿ ಚಿತ್ರರಚನೆ ಮತ್ತಿತರ ಕಾರ್ಯಗಳನ್ನು ಕಡ್ಡಾಯವಾಗಿ ವಿಧ್ಯಾರ್ಥಿಗಳೇ ಮಾಡಬೇಕಾಗಿದೆ. ಸ್ವಂತವಾದ ಮತ್ತು ಕ್ರೀಯಾಶೀಲ ಐಡಿಯಾಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು.

ಚಿತ್ರ ರಚನೆಗೆ ಡ್ರಾಯಿಂಗ್ ಹಾಳೆಗಳನ್ನು "ಕಾರ್ಟೂನು ಹಬ್ಬ"ದ ಆಯೋಜಕರೆ ಪೂರೈಕೆ ಮಾಡಲಿದ್ದು, ಚಿತ್ರ ಬಿಡಿಸಲು ಬೇಕಾಗುವ ಇತರ ಪರಿಕರಗಳನ್ನು ವಿಧ್ಯಾರ್ಥಿಗಳೇ ತರಬೇಕಾಗಿದೆ.

ಚಿತ್ರದ ಶೈಲಿ: ಕಪ್ಪುಬಿಳುಪಿನಲ್ಲಿ ಅಥವಾ ಇತರ ಬಣ್ಣಗಳನ್ನು ಬಳಸಿ ಅಥವಾ ಡೈಲಾಗ್ ರಹಿತವಾಗಿಯೂ ಚಿತ್ರಗಳನ್ನು ರಚಿಸಬಹುದಾಗಿದೆ. ಬಹುಮಾನಗಳ ಘೋಷಣೆ ಮತ್ತು ವಿತರಣೆ ನವೆಂಬರ್ 27ರಂದು ಸಂಜೆ ಐದು ಗಂಟೆಗೆ ನಡೆಯಲಿದೆ ಮತ್ತು ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.

ಈ ಸ್ಪರ್ಧೆಯಲ್ಲಿ 4ರಿಂದ 7ನೇಯ ತರಗತಿಯ ವಿಧ್ಯಾರ್ಥಿಗಳಿಗೆ ಪ್ರಥಮ ಬಹುಮಾನವಾಗಿ ರೂಪಾಯಿ 4,000/- ಮತ್ತು ಎಕ್ಸ್ ಪಿ ಪೆನ್ . ದ್ವಿತೀಯ ಬಹುಮಾನವಾಗಿ ರೂ. 3000/- ಮತ್ತು ಎಕ್ಸ್ ಪಿ ಪೆನ್. ತೃತೀಯ ಬಹುಮಾನವಾಗಿ ರೂ. 2000/- ಮತ್ತು ಎಕ್ಸ್ ಪಿ ಪೆನ್ ದೊರೆಯಲಿದೆ.

8ರಿಂದ 10ನೇಯ ತರಗತಿಯ ವಿಧ್ಯಾರ್ಥಿಗಳಿಗೆ ಪ್ರಥಮ ಬಹುಮಾನವಾಗಿ ರೂಪಾಯಿ 6,000/- ಮತ್ತು ಎಕ್ಸ್ ಪಿ ಪೆನ್ . ದ್ವಿತೀಯ ಬಹುಮಾನವಾಗಿ ರೂ. 4000/- ಮತ್ತು ಎಕ್ಸ್ ಪಿ ಪೆನ್. ತೃತೀಯ ಬಹುಮಾನವಾಗಿ ರೂ. 3000/- ಮತ್ತು ಎಕ್ಸ್ ಪಿ ಪೆನ್ ದೊರೆಯಲಿದೆ.

ಪಿಯುಸಿ ಮತ್ತು ಮೇಲ್ಪಟ್ಟು ವಿಧ್ಯಾರ್ಥಿಗಳಿಗೆ
ಪ್ರಥಮ ಬಹುಮಾನವಾಗಿ ರೂಪಾಯಿ 7,000/- ಮತ್ತು ಎಕ್ಸ್ ಪಿ ಪೆನ್ . ದ್ವಿತೀಯ ಬಹುಮಾನವಾಗಿ ರೂ. 5,000/- ಮತ್ತು ಎಕ್ಸ್ ಪಿ ಪೆನ್. ತೃತೀಯ ಬಹುಮಾನವಾಗಿ ರೂ. 4,000/- ಮತ್ತು ಎಕ್ಸ್ ಪಿ ಪೆನ್ ದೊರೆಯಲಿದೆ.

ಮೇಲಿನ ಎಲ್ಲಾ ವಿಭಾಗಗಳ ವಿಜೇತರಿಗೆ ಕಾರ್ಟೂನು ಹಬ್ಬ ಬಳಗದ ಟ್ರೋಫಿ ಮತ್ತು ಕಾರ್ಟೂನು ಪುಸ್ತಕಗಳನ್ನು ಬಹುಮಾನದ ಜೊತೆ ನೀಡಲಾಗುತ್ತದೆ.

ಭಾರತೀಯ ವ್ಯಂಗ್ಯಚಿತ್ರ ರಂಗದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವ ಕಾರಣದಿಂದಾಗಿ ವಿಧ್ಯಾರ್ಥಿನಿಯರಲ್ಲಿ ಕಾರ್ಟೂನು ರಚನೆಯಲ್ಲಿ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಈ ಮೇಲಿನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾಗದ ಮೂವರು ಪ್ರತಿಭಾನ್ವಿತ ವಿಧ್ಯಾರ್ಥಿನಿಯರಿಗೆ "ಎಕ್ಸ್ ಪಿ ಪೆನ್ ಡೆಕೋ ಫನ್ ಎಲ್ ಟ್ಯಾಬ್ಲೆಟ್ " ವಿಶೇಷ ಬಹುಮಾನಗಳನ್ನು ನೀಡಲಾಗುವುದು ಎಂದು "ಕಾರ್ಟೂನು ಹಬ್ಬ" ತಂಡದ ಪರವಾಗಿ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement