Advertisement

ಬೊಮ್ಮಾಯಿ ಸರ್ಕಾರ ಬಿಜೆಪಿಯೇತರರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕುತ್ತಿದೆ: ಕಾಂಗ್ರೆಸ್

Advertisement

*ನೀವು ಬಿಜೆಪಿಯೇತರ ಪಕ್ಷಗಳ ಮತದಾರರಾಗಿದ್ದರೆ, ಈಗೀಂದೀಗಲೆ ಮತದಾರರ ಪಟ್ಟಿಯಲ್ಲಿ ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಹೆಸರು ಇದೆಯೇ ಇಲ್ಲವೇ ಎಂದು ಪರಿಕ್ಷಿಸಿಕೊಳ್ಳಿ. ಏಕೆಂದರೆ, ಇದು ಕಲಿಯುಗ.. ಅಲ್ಲಲ್ಲ ಮೋದಿಯುಗ!

ಬೆಂಗಳೂರು ಮಹಾ ನಗರಪಾಲಿಕೆ ಹಾಗು ರಾಜ್ಯದ ಇತರ ಕಡೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹಿಸಿ ಅವರ ಖಾಸಗೀ ಮಾಹಿತಿ ಕಲೆಹಾಕಿ ಅದರ ಆಧಾರದ ಮೇಲೆ ಕೆಲವರ (ಬೆಜೆಪಿಯೇತರ ಮತದಾರರ) ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಮತದಾನದ ಹಕ್ಕನ್ನು ಕಸಿದಿರುವುದು ಪ್ರಜಾತಂತ್ರ ವಿರೋಧೀ ಕೃತ್ಯ. ಇದರ ಹಿಂದೆ ಆಳುವ ಸರಕಾರದ ಸ್ವಹಿತಾಸಕ್ತ ಕುಟಿಲ ರಾಜನೀತಿಯ ಕೈವಾಡವಿದ್ದು ಇದರ ಹೊಣೆಹೊತ್ತು ಮುಖ್ಯಮಂತ್ರಿ ಬೊಮ್ಮಾಯಿ ಸರಕಾರ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.

ಅಧಿಕಾರದ ಆಸೆಗಾಗಿ ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿ, ಅನ್ಯ ಪಕ್ಷಗಳ ಶಾಸಕರನ್ನು ಅಪಹರಿಸಿ ಪಕ್ಷಾಂತರಿಗಳ ಸರಕಾರ ನಡೆಸುತ್ತಿರುವ ಬಿಜೆಪಿ, ತನ್ನ ಜನವಿರೋಧೀ ಭ್ರಷ್ಟ ಆಡಳಿತದ ಕಾರಣವಾಗಿ ಮುಂಬರುವ ಚುನಾವಣೆಯಲ್ಲಿ ಸೋಲು ಖಚಿತವೆಂದು ಮನಗಂಡು, ಶತಾಯಗತಾಯ ಗೆಲುವು ಸಾದಿಸುವ ಗುರಿಯೊಂದಿಗೆ ಇದೀಗ ಮತದಾರರ ಪಟ್ಟಿಗೆ ಕನ್ನಹಾಕಿ ಮತದಾರರ ಹೆಸರನ್ನೇ ಅಳಿಸಿಹಾಕಲು ನೋಡುತ್ತಿರುವುದು ಖಂಡನೀಯ. ಇದೊಂದು ಶಿಕ್ಷಾರ್ಹ ಅಪರಾಧ. ಈಗಾಗಲೇ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 6.76 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಮತಪಟ್ಟಿಯಿಂದ‌ ಡಿಲಿಟ್ ಮಾಡಲಾಗಿದ್ದರೆ, ದ.ಕ ಜಿಲ್ಲಾ ಬಂಟ್ವಾಳ ವ್ಯಾಪ್ತಿಯಲ್ಲಿ 69 ಸಾವಿರಕ್ಕು ಹೆಚ್ಚು ಮತದಾರರ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಇದು ಈ ಸರಕಾರದ ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ಸಾಕ್ಷಿಯಾಗಿದ್ದು, ಈ ನಿಟ್ಟಿನಲ್ಲಿ ಈ ಸರಕಾರದ ಬಗ್ಗೆ ಜನರು ಜಾಗೃತರಾಗಿರಬೇಕಾದುದು ಇಂದಿನ ಆಧ್ಯತೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಈ ಮೂಲಕ ಕೇಂದ್ರ ಸರಕಾರ ಮತದಾರರ ಗುರುತಿನ ಚೀಟಿಗೆ (ವೋಟರ್ ಐಡಿ) ಆಧಾರ್ ಕಾಡ್೯ ಲಿಂಕ್ ಮಾಡುವ 2021 ರ ಚುನಾವಣಾ ಕಾನೂನು ತಿದ್ದುಪಡಿ ಮಸೂದೆಯನ್ನು ಪ್ರತಿಪಕ್ಷಗಳ ಪ್ರತಿರೋದದ ನಡುವೆಯೂ ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಿರುವ ಹಿಂದಿನ ಮರ್ಮ ಬಟಾಬಯಲಾಗಿದೆ. ಇದು ಪ್ರಜಾತಂತ್ರದ ಕೊಲೆಯಲ್ಲದೆ ಮತ್ತೇನು? ಈ ಬಗ್ಗೆ ಅನಧಿಕೃತವಾಗಿ ಆಧಾರ್ ಲಿಂಕ್ ವೋಟರ್ ಐಡಿ ದುರುಪಯೋಗ ಪಡಿಸಿ ಮತದಾರರ ಮಾಹಿತಿ ಕದ್ದ "ಚಿಲುಮೆ" ಎಂಬ ಸಂಸ್ಥೆಯ ಮೇಲಷ್ಟೆ ಕ್ರಮ ಕೈಗೊಂಡರೆ ಸಾಲದು ಇದರ ಹಿಂದಿರುವ ಪ್ರಜಾತಂತ್ರ ವಿರೋಧಿ ಶಕ್ತಿಗಳ ವಿರುದ್ಧವೂ ಉನ್ನತ ಮಟ್ಟದ ತನಿಖೆ ನಡೆಯ ಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement