Advertisement

"ಆರೆಸ್ಸೆಸ್, ಬಿಜೆಪಿಯನ್ನು ಎದುರಿಸಲು ಧೈರ್ಯವಿಲ್ಲದವರು ಪಕ್ಷದಿಂದ ಹೊರನಡೆಯಿರಿ" ಎಂದು ಮತ್ತೊಮ್ಮೆ ಗುಡುಗಿದ ರಾಹುಲ್

Advertisement

"ಬಿಜೆಪಿಯನ್ನು ಎದುರಿಸುವ ಧೈರ್ಯವಿಲ್ಲದವರು ಪಕ್ಷವನ್ನು ತೊರೆಯಬಹುದು. ಅದರೆ, ನಾವು ಖಂಡಿತವಾಗಿಯೂ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ" ಎಂದು ಪಕ್ಷದೊಳಗೆ ಆಯಕಟ್ಟಿನ ಸ್ಥಾನವನ್ನು ಹೊಂದಿದ್ದೂ, ಆರೆಸ್ಸೆಸ್ ನ ಮನುವಾದಿ ಸಿದ್ಧಾಂತದ ಕುರಿತು ಮೃದು ಧೋರಣೆ ಹೊಂದಿರುವ ಮತ್ತು ಅವರುಗಳ ವಿರುದ್ಧ ಗಟ್ಟಿಧ್ವನಿಯಲ್ಲಿ ಮಾತನಾಡಲು, ಹೋರಾಡಲು ಭಯಪಡುತ್ತಿರುವ ಕೆಲವು ಸ್ಥಾಪಿತ ಹಿತಾಸಕ್ತ ನಾಯಕರುಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎಚ್ಚರಿಕೆಯ ಕರೆಯನ್ನು ನೀಡಿದ್ದಾರೆ.

"ಕಾಂಗ್ರೆಸ್ ಪಕ್ಷವು ಪ್ಯಾಸಿಸಮ್ ವಿರುದ್ಧ ಜನಪರವಾದ ಸಿದ್ಧಾಂತವನ್ನು ಹೊಂದಿರುವ ಪಕ್ಷವಾಗಿದೆ. ಪಕ್ಷದ ಸಿದ್ಧಾಂತವು ಲಕ್ಷಾಂತರ ಜನರ ಮನಸ್ಸಿನಲ್ಲಿದೆ ತನ್ನ ಮತ್ತು ಪಕ್ಷದ ವಿರುದ್ಧ ಯೋಜಿತವಾದ ಅಪಪ್ರಚಾರ ನಡೆಯುತ್ತಿದೆ" ಎಂದವರು ಆರೋಪಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯು ನೂರು ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಅವರು ರಾಜಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

"ಕಾಂಗ್ರೆಸ್ ಗೆ ನಿರ್ಭೀತ ನಾಯಕರು ಬೇಕು ಹಾಗೂ ಪಕ್ಷದಲ್ಲಿ ಹೆದರಿಕೊಂಡು ಕುಳಿತ್ತಿರುವವರನ್ನು ಹೊರಗೆ ಹಾಕಬೇಕು" ಎಂದು ಒಂದು ವರ್ಷದ ಹಿಂದೆಯೇ, ಪಕ್ಷದ ಐಟಿ ಸೆಲ್ ವಿಭಾಗದ ಪದಾದಿಕಾರಿಗಳ ಜೊತೆಗಿನ ಮಾತುಕತೆಯ ವೇಳೆ ರಾಹುಲ್ ಗಾಂಧಿ ಹೇಳಿದ್ದರು. ಈ ಮೂಲಕ ಪಕ್ಷಾಂತರಿಗಳಿಗೆ ಹಾಗೂ ಭಿನ್ನಮತೀಯರಿಗೆ ಖಡಕ್ ಸಂದೇಶ ರವಾನಿಸಿದ್ದರು.

"ಹೆದರದ ಅನೇಕ ಜನರಿದ್ದಾರೆ ಹಾಗೂ ಅವರು ಕಾಂಗ್ರೆಸ್ ನಿಂದ ಹೊರಗೆ ಇದ್ದಾರೆ. ನಾವು ಅವರನ್ನು ಒಳಗೆ ಕರೆತರಬೇಕು" ಎಂದು ಅವರು ಅಂದು ಹೇಳಿದ್ದರು.

"ನಮ್ಮ ಪಕ್ಷದಲ್ಲಿ ಭಯಭೀತರಾಗುವವರು ಇದ್ದಾರೆ. ಅಂತಹವರು ದಯವಿಟ್ಟು ಪಕ್ಷ ಬಿಡಿ, ಆರ್ ಎಸ್ ಎಸ್ ನತ್ತ ಹೋಗಿ, ನೀವು ನಮಗೆ ಬೇಡ. ಪಕ್ಷಕ್ಕೆ ನಿಮ್ಮ ಅಗತ್ಯವೂ ಇಲ್ಲ. ನಮಗೆ ನಿರ್ಭೀತ ಹಾಗೂ ಸೈದ್ಧಾಂತಿಕ ಬದ್ದತೆಯ ನಾಯಕರು ಬೇಕು, ಅದು ನಮ್ಮ ಸಿದ್ಧಾಂತ. ಅದು ನನ್ನ ಮೂಲ ಸಂದೇಶ" ಎಂದು ಹೇಳಿದ್ದರು.

Advertisement
Advertisement
Recent Posts
Advertisement