Advertisement

ಉಚಿತ ವಿದ್ಯುತ್ ಹಾಗೂ ಪ್ರತೀ ಗೃಹಿಣಿಗೆ 2000 ರೂ.ಗಳ ಕಾಂಗ್ರೆಸ್ ಯೋಜನೆ ಸ್ವಾಗತಾರ್ಹ

Advertisement

ಬಿಜೆಪಿ ಸರಕಾರದ ಬೆಲೆ ಏರಿಕೆಯಿಂದ ಸಂಕಷ್ಠದಲ್ಲಿರುವ ಮಹಿಳೆಯರಿಗೆ ಪ್ರಿಯಾಂಕ ಗಾಂಧಿಯವರು ಕರ್ನಾಟಕದಲ್ಲಿ ಘೋಷಿಸಿದ ಗೃಹಲಕ್ಷ್ಮೀ ಯೋಜನೆ ವರದಾನವಾಗಲಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಿಯಾಂಕ ಗಾಂಧಿಯವರು ಕರ್ನಾಟಕದಲ್ಲಿ ಘೋಷಿಸಿದ ಗ್ರಹಲಕ್ಷ್ಮಿ ಯೋಜನೆಯನ್ನು ಮಹಿಳಾ ವರ್ಗ ತುಂಬಾ ಸಂತೋಷದಿಂದ ಸ್ವಾಗತಿಸುತ್ತೇವೆ . ಬಿಜೆಪಿ ಸರ್ಕಾರದ ಆಡಳಿತದಿಂದ ಜನರ ಜನಜೀವನ ತೀರ ಸಂಕಷ್ಟದಲ್ಲಿದೆ. ದಿನನಿತ್ಯದ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ತಲುಪುತ್ತಿದೆ. ಗ್ಯಾಸ್ ಸಿಲಿಂಡರ್ ನ ಬೆಲೆ ಗಗನಕ್ಕೆ ಏರಿದೆ. ನಮ್ಮ ಯುವಕ ಯುವತಿಯರು ಯಾವುದೇ ಉದ್ಯೋಗಗಳು ದೊರಕದೆ ನಿರುದ್ಯೋಗಿಗಳಾಗಿದ್ದಾರೆ. "ನೋಟ್ ಬ್ಯಾನ್, ಜಿಎಸ್‌ಟಿ" ಮುಂತಾದ ಅನೇಕ ಜನವಿರೋಧಿ ಕಾರ್ಯಕ್ರಮಗಳ ಮೂಲಕ ಜನರ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಇಂತಹ ಸಂಕಷ್ಟದ ಕಾಲಘಟ್ಟದಲ್ಲಿ ಕುಟುಂಬವನ್ನು ನಡೆಸುವುದು ಎಲ್ಲರಿಗೂ ಕಷ್ಟಕರವಾದ ಒಂದು ಪರಿಸ್ಥಿತಿ ನಿರ್ಮಾಣವಾಗಿದೆ . ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಗಾಂಧಿಯವರು ಪ್ರತಿ ಮನೆಯ ಮಹಿಳಾ ಯಜಮಾನಿಗೆ ಮಾಸಿಕ 2,000 ಗ್ರಹಲಕ್ಷ್ಮಿ ಯೋಜನೆಯನ್ನು ನಾ ನಾಯಕಿ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಈ ಯೋಜನೆ ಕಾರ್ಯಗೊಳ್ಳಲಿದೆ .

ಇದರ ಜೊತೆ ನಮ್ಮೆಲ್ಲರ ನಾಯಕರಾದ ಸಿದ್ದರಾಮಯ್ಯರವರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸಿನ ಎಲ್ಲ ನಾಯಕರು ಜೊತೆ ಸೇರಿಕೊಂಡು ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತ ಕೊಡುವಂತಹ ಒಂದು ಮಹತ್ತರವಾದ ಯೋಜನೆಯನ್ನು ಕೂಡ ರೂಪಿಸಿದ್ದಾರೆ. ಈ ಎರಡು ಯೋಜನೆಗಳು ನಮ್ಮ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ತುಂಬಾ ಪ್ರಯೋಜನವಾಗಲಿವೆ.
ಈ ಯೋಜನೆಯನ್ನು ಘೋಷಿಸಿದ ನಮ್ಮ ಪಕ್ಷದ ನಾಯಕರಿಗೆ ಹಾಗೂ ಪ್ರಿಯಾಂಕ ಗಾಂಧಿ ಅವರಿಗೆ ಸಮಸ್ತ ಜನತೆಯ ಪರವಾಗಿ ಕೃತಜ್ಞತೆಗಳು ಸಲ್ಲಿಸುತ್ತಿದ್ದೇನೆ. ಈ ಕಾರ್ಯಕ್ರಮಗಳು ಸಾಕಾರಗೊಳ್ಳಬೇಕಿದ್ದರೆ ನಾವೆಲ್ಲರೂ ಕೂಡ ಒಂದು ಶಕ್ತಿಯಾಗಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ . ಈ ನಿಟ್ಟಿನಲ್ಲಿ ಮುಂದಿನ ಅವಧಿಗೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಸರ್ಕಾರ ಆಗಿ ರೂಪುಗೊಳ್ಳಲಿದೆ ಎಂಬುದಾಗಿ ಕರ್ನೆಲಿಯೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement