ಕಾಂಗ್ರೆಸ್‌ ಪ್ರಜಾಧ್ವನಿ  ಸಮಾವೇಶ ಯಶಸ್ಸಿಗೆ ಕರೆ

ದಿನಾಂಕ 8-2 - 2023 ಬುಧವಾರ ಬೆಳಿಗ್ಗೆ 9 ಗಂಟೆಗೆ ಹೆಗ್ಗುಂಜೆ ಮೈರಕೊಮೆ ಸರ್ಕಲ್ ಬಳಿ , 11 ಗಂಟೆಗೆ ಕೋಟಾ ಮಾಂಗಲ್ಯ ಕಲ್ಯಾಣ ಮಂಟಪ ಬಳಿ , ಮಧ್ಯಾಹ್ನ 3 ಗಂಟೆಗೆ ಬಿದ್ದಲ್ ಕಟ್ಟೆ ಪೇಟೆಯಲ್ಲಿ , ಸಂಜೆ 4 ಗಂಟೆಗೆ ಕುಂದಾಪುರ ತಾಲೂಕು ಪಂಚಾಯತ್ ಬಳಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ರೋಝಿ ಎಂ ಜಾನ್ , ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ ಬಿ.ಕೆ. ಹರಿಪ್ರಸಾದ್ , ಕೆಪಿಸಿಸಿ ಕಾರ್ಯದ್ಯಕ್ಷ ಆರ್ ದ್ರುಮನಾರಾಯಣ , ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ , ಪ್ರಜಾಧ್ವನಿ ಕಾರ್ಯಕ್ರಮದ ಉಸ್ತುವಾರಿಗಳಾದ ಶ್ರೀ ಆರ್ ವಿ ದೇಶಪಾಂಡೆ , ಅಭಯಚಂದ್ರ ಜೈನ್ , ಶ್ರೀ ಮಂಜುನಾಥ ಭಂಡಾರಿ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಅಶೋಕ ಕುಮಾರ ಕೊಡವೂರ, ಮಾಜಿ ಸಚಿವರಾದ ಶ್ರೀ ವಿನಯಕುಮಾರ ಸೊರಕೆ , ಮಾಜಿ ಶಾಸಕರಾದ ಶ್ರೀ ಗೋಪಾಲ ಪೂಜಾರಿ ಮತ್ತು ಜಿಲ್ಲೆಯ ಹಿರಿಯ ನಾಯಕರು ಉಪಸ್ಥಿತರಿರಲಿದ್ದಾರೆ.

ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ ಮತ್ತು ಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಶಂಕರ ಕುಂದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.