ನವೋ ಭಾರತದ ನವ ಕಥೆ: ಆಶ್ಚರ್ಯ ಆದರೂ ಸತ್ಯ!

ನಾ ಖಾವೋಂಗಾ, ನಾ ಖಾನೆದೋಂಗಾ ಅಂದರೆ ಏನು?

ಇದು ನಮೋ ಭಾರತದ ನವ ಕಥೆ: ಆಶ್ಚರ್ಯ ಆದರೂ ಸತ್ಯ!

•2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದಿಂದ ಇಳಿಯುವ ಹೊತ್ತಿಗೆ ರಾಜ್ಯ ಸರ್ಕಾರದ ಸಾಲ: ಕೇವಲ 2.42ಲಕ್ಷ ಕೋಟಿ ರೂಪಾಯಿ (ಕಳೆದ 70ವರ್ಷಗಳ ಎಲ್ಲಾ ಸಾಲವೂ ಸೇರಿ)

•2023ರಲ್ಲಿ ಇದೀಗ ಬಸವರಾಜ ಬೊಮ್ಮಾಯಿಯವರ ಸರ್ಕಾರದ ಕೊನೆಯಲ್ಲಿ ರಾಜ್ಯ ಸರ್ಕಾರದ ಸಾಲ: ಬರೋಬ್ಬರಿ 5.40 ಲಕ್ಷ ಕೋಟಿ ರೂಪಾಯಿ (ಹಿಂದಿನ ಸಾಲವೂ ಸೇರಿ)

•ಬಿಜೆಪಿಯ ಆಡಳಿತದಲ್ಲಿ ಏರಿಕೆಯಾದ ರಾಜ್ಯ ಸರ್ಕಾರದ ಸಾಲ: ಬರೋಬ್ಬರಿ 2.98ಲಕ್ಷ ಕೋಟಿ ರೂಪಾಯಿ.

•ಹಾಗೆಯೇ, 2014ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅಧಿಕಾರದಿಂದ ಇಳಿಯುವ ಹೊತ್ತಿಗೆ ಕೇಂದ್ರ ಸರ್ಕಾರದ ಸಾಲ: ಕೇವಲ 53ಲಕ್ಷ ಕೋಟಿ ರೂಪಾಯಿ (ಕಳೆದ 70ವರ್ಷಗಳ ಎಲ್ಲಾ ಸಾಲವೂ ಸೇರಿ)

•2023ರಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿಯವರ 9ವರ್ಷಗಳ ಆಡಳಿತದ ಬಳಿಕ ದೇಶದ ಒಟ್ಟು ಸಾಲ: ಬರೋಬ್ಬರಿ 155 ಲಕ್ಷ ಕೋಟಿ ರೂಪಾಯಿ. (ಹಿಂದಿನ ಸಾಲವೂ ಸೇರಿ)

•ಮೋದಿ ಆಡಳಿತಾವಧಿಯಲ್ಲಿ ಏರಿಕೆಯಾದ ದೇಶದ ಸಾಲ: ಬರೋಬ್ಬರಿ 98ಲಕ್ಷ ಕೋಟಿ ರೂಪಾಯಿ

•2019 ರಲ್ಲಿ ಪ್ರಧಾನಿ ಮೋದಿಯವರ ಆಪ್ತ ಗೌತಮ್ ಅದಾನಿಯವರ ಸಂಪತ್ತು: ಕೇವಲ 1ಲಕ್ಷ ಕೋಟಿ ರೂಪಾಯಿ.

•ಇದೀಗ 2023ರಲ್ಲಿ ಅದಾನಿಯವರ ಸಂಪತ್ತು ಬರೋಬ್ಬರಿ13ಲಕ್ಷ ಕೋಟಿ ರೂಪಾಯಿ.

•ಕೇವಲ ನಾಲ್ಕು ವರ್ಷಗಳಲ್ಲಿ ಉಧ್ಯಮಿ ಅದಾನಿಯವರ ಏರಿಕೆಯಾದ ಆದಾಯ: 12ಲಕ್ಷ ಕೋಟಿ ರೂಪಾಯಿ

•ಮನಮೋಹನ್ ಸಿಂಗ್ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ದೇಶದ ರೈತರ ಬರೋಬ್ಬರಿ 72 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ.

•ಸಿದ್ದರಾಮಯ್ಯ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ 22 ಲಕ್ಷ ರೈತರ, 8,165 ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ.

•ಮೋದಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಅಂಬಾನಿ, ಅದಾನಿಯಂತಹ ಉಧ್ಯಮಿಗಳ ಬರೋಬ್ಬರಿ 14 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ಹಾಗೆಯೇ, ದೇಶದ ರೈತರ ಚಿಕ್ಕಾಸು ಸಾಲವನ್ನೂ ಮನ್ನಾ ಮಾಡಿಲ್ಲ.

ಇದು ನಮೋ ಭಾರತದ ನವ ಕಥೆ!

•ಬರಹ: ಚಂದ್ರಶೇಖರ ಶೆಟ್ಟಿ