Advertisement

ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ?

Advertisement

ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ ಎಂಬ ಕುರಿತು ಸಂಕ್ಷಿಪ್ತವಾಗಿ ಹೇಳುವುದಾದರೆ, ಇಂದು ಈ ದೇಶದಲ್ಲಿ ಏನೇನೆಲ್ಲ ಇದೆಯೋ ಅದೆಲ್ಲವೂ ಕಾಂಗ್ರೆಸ್‌ನ ಕೊಡುಗೆಗಳೇ ಆಗಿವೆ.

ಹಾಗೆಯೇ ಸ್ವಲ್ಪ ವಿವರಿಸಿ ಹೇಳುವುದಾದರೆ, ಕಾಂಗ್ರೆಸ್ ಈ ದೇಶಕ್ಕೆ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ತಂದುಕೊಟ್ಟಿರುವ ಪಕ್ಷ. ಇಲ್ಲಿನ ಅಷ್ಟೂ ಸಂಪನ್ಮೂಲಗಳು ಈ ದೇಶದ ಅಷ್ಟೂ ಜನರಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಚಿಂತನೆಯಡಿಯಲ್ಲಿ ಇಲ್ಲಿ "ಪ್ರಜಾಪ್ರಭುತ್ವ" ವ್ಯವಸ್ಥೆಯನ್ನು ಜಾರಿಗೊಳಿಸಿದ ಪಕ್ಷ. "ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು" ಸಿದ್ದಾಂತದ ಅಂಬೇಡ್ಕರ್ ಸಂವಿಧಾನವನ್ನು ತನ್ನ ಅವಧಿಯಲ್ಲಿ ರಚಿಸಿ, ಜಾರಿಗೊಳಿಸಿ ಮನುವಾದಿಗಳ ಶತಶತಮಾನಗಳ ಶೋಷಣೆಯಿಂದ ಈ ದೇಶದ ಬಡಜನರಿಗೆ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಪಕ್ಷ.

ಆದರೆ ಇದೀಗ ತೆರೆಮರೆಯಲ್ಲಿ ಆಡಳಿತದ ಚುಕ್ಕಾಣಿಯನ್ನು‌ ಹಿಡಿದಿರುವ ಮನುವಾದಿಗಳು, ಕಾಂಗ್ರೆಸ್ ಕಳೆದ ಅರವತ್ತು ವರ್ಷಗಳ ಆಡಳಿತದಲ್ಲಿ ದೇಶಕ್ಕೇನು ಕೊಟ್ಟಿತು? ಎಂದು ಪ್ರಶ್ನಿಸುವ ಮೂಲಕ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಹಾಗೆಯೇ ಆ ಕುರಿತು ಉತ್ತರಿಸುವುದು ನಮ್ಮ ಕರ್ತವ್ಯವಾಗಿದೆ.

ನಿಜ ಹೇಳಬೇಕೆಂದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಅಂದು ಕಾಂಗ್ರೆಸ್ ನೇತೃತ್ವದಲ್ಲಿ ಇಡೀ ದೇಶದ ಜನತೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ವೇಳೆಯಲ್ಲಿ ಇದೇ "ಮನುವಾದಿ"ಗಳ ಮಾತೃಸಂಘಟನೆಯ ನಾಯಕರುಗಳು ಅದೇ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧವಾಗಿ ಮಾಹಿತಿದಾರರಾಗಿ ಕೆಲಸ ಮಾಡಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಕಠಿಣ ಶಿಕ್ಷೆಯನ್ನು ಕೊಡಿಸಿದ್ದರು. ಅದೇ ಸ್ವಾತಂತ್ರ್ಯ ಹೋರಾಟದ ವಿರುದ್ಧದ ಹೋರಾಟಕ್ಕಾಗಿ ದೇಶದ ಬಡವರ ಮನೆಯ ಮಕ್ಕಳಿಗೆ ಅಮಿಷ ಒಡ್ಡಿ ಅವರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರ್ಪಡೆಗೊಳಿಸುವ ಕೆಲಸವನ್ನು ಮಾಡಿದ್ದರು ಎಂಬುದನ್ನು ಹೇಳದಿದ್ದರೆ ಅದು ಇತಿಹಾಸಕ್ಕೆ ನಾವು ಮಾಡುವ ದ್ರೋಹವಾಗುತ್ತದೆ.

ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ವೇಳೆಗೆ, ಬ್ರಿಟೀಷರು ತಮ್ಮ ಮಕ್ಕಳ ಹಾಗೂ ಕುಟುಂಬಿಕರ, ಸಿಬ್ಬಂದಿಗಳ ಸೌಕರ್ಯಕ್ಕಾಗಿ ಅಲ್ಲೊಂದು, ಇಲ್ಲೊಂದು ಎಂಬಂತೆ ರಾಜಧಾನಿಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ನಿರ್ಮಿಸಿಕೊಂಡಿದ್ದ ಸರಕಾರಿ ಶಾಲೆ, ಆಸ್ಪತ್ರೆ, ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಸೇತುವೆ ಮುಂತಾದವುಗಳು ಬಿಟ್ಟರೆ ದೇಶದ ಇತರೆಡೆಗಳಲ್ಲಿ ಅಂದರೆ ದೇಶದ 95% ಗೂ ಹೆಚ್ಚು ಭಾಗದಲ್ಲಿ ಮೂಲಭೂತ ಸೌಕರ್ಯಗಳೇ ಇದ್ದಿರಲಿಲ್ಲ.

ಆದರೆ ಅಂತಹ ಭಾರತವನ್ನು ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ಕಾಂಗ್ರೆಸ್ ಅತಿ ಕಡಿಮೆ ಅವಧಿಯಲ್ಲಿ ಅಭ್ಯುದಯದ ಪಥದತ್ತ ಕೊಂಡೊಯ್ದು "ನವಭಾರತ" ನಿರ್ಮಿಸಿತು ಎಂದರೆ ಅದು ಅತಿಶಯೋಕ್ತಿಯಾಗಲಾರದು.

ನವಭಾರತ ಎಂದೊಡನೆ ನಮಗೆ ನೆನಪಿಗೆ ಬರಲೇ ಬೇಕಾದುದು ದೇಶದಾದ್ಯಂತ ಹಳ್ಳಿಹಳ್ಳಿಗಳಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು, ವ್ಯವಸ್ಥಿತವಾದ ರಸ್ತೆಗಳು, ಹೆದ್ದಾರಿಗಳು, ಸೇತುವೆಗಳು, ಸರಕಾರಿ ಕಾರ್ಖಾನೆಗಳು, ಸರ್ಕಾರಿ ಬಸ್ಸುಗಳು, ಮನೆಮನೆಗೆ ವಿದ್ಯುತ್ ಸೇವೆ, ವೈಜ್ಞಾನಿಕ ಅವಿಷ್ಕಾರಗಳು, ಆಧುನಿಕ ಸೌಲಭ್ಯಗಳು ಮುಂತಾದವುಗಳಾಗಿವೆ.

ಈ ಮೇಲೆ ವಿವರಿಸಿದವುಗಳು ಖಚಿತವಾಗಿಯೂ ಈ ದೇಶವನ್ನು ಆಳಿದ ನೆಹರೂ, ಶಾಸ್ತ್ರೀ, ಇಂದಿರಾ, ಪಿವಿಎನ್, ರಾಜೀವ್, ಮನಮೋಹನ್ ಸಿಂಗ್ ಮುಂತಾದ ನಾಯಕರುಗಳ ಮುಂದಾಲೋಚನೆಯ ಯೋಜನೆಗಳ ಪರಿಣಾಮವಾಗಿ ದೊರೆತವುಗಳಾಗಿವೆ. ಅದರ ಫಲ ಎಂಬಂತೆ ಭಾರತ 2012ರ ಹೊತ್ತಿಗೆ ವಿಶ್ವದ ಮೂರನೆಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತು ಎಂದರೆ ಅದು ನಿಜಕ್ಕೂ ಹೆಮ್ಮೆ ಪಡಲೇಬೇಕಾದ ವಿಚಾರವಾಗಿದೆ.

ಅದಿರಲಿ... ಮುಖ್ಯ ವಿಚಾರಕ್ಕೆ ಬರುವುದಾದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಡಳಿತದಲ್ಲಿ ಕ್ರೈಸ್ತರುಗಳ ತಮ್ಮ ಚರ್ಚ್‌ಗಳ ನೇತೃತ್ವದಲ್ಲಿ ಆರಂಭಿಸಿದ್ದ ಸೀಮಿತ ಸಂಖ್ಯೆಯ ಕಾನ್ವೆಂಟ್ ಗಳು ಹಾಗೂ ಮಠಗಳ ನೇತೃತ್ವದಲ್ಲಿ ಬ್ರಾಹ್ಮಣ ವಟುಗಳ ವೇದಾಧ್ಯಯನಕ್ಕಾಗಿ ಇದ್ದ ವೇದಪಾಠ ಶಾಲೆಗಳು ಬಿಟ್ಟರೆ ದೇಶದ ಬಡವರ ಮನೆಯ ಮಕ್ಕಳಿಗೆ ವಿದ್ಯೆ ಕಲಿಯಲು ಅವಕಾಶಗಳೇ ಇರಲಿಲ್ಲ. ಅವರುಗಳು ಹುಟ್ಟಿದಂದಿನಿಂದ ಸಾಯುವ ತನಕ ತಮ್ಮ ಕುಲಕಸುಬಾದ ಕುಂಬಾರಿಕೆ, ಚಮ್ಮಾರಿಕೆ, ಮೀನುಗಾರಿಕೆ, ಕ್ಷೌರಗಾರಿಕೆ ಮುಂತಾದ ಸಾಕಷ್ಟು ವರಮಾನ ಇಲ್ಲದ ಚಾಕರಿಗಳನ್ನೆ ಮಾಡಿ ಜೀವನ ಸಾಗಿಸಬೇಕಿತ್ತು.

ಹಾಗೆ ನೋಡಿದರೆ... ಈ ದೇಶದಲ್ಲಿ ಹಿಂದೂ ಧರ್ಮದ ಬಡವರ ಮಕ್ಕಳಿಗೆ ಒಂದು ಹಂತದಲ್ಲಿ ಅಂದರೆ ಬ್ರಿಟೀಷರ ಆಳ್ವಿಕೆಯ ಕೊನೆಯ ಭಾಗದಲ್ಲಿ ಮತ್ತು ಸ್ವಾತಂತ್ರ್ಯಾ ನಂತರವೂ ಕೂಡ ಪ್ರಾಮಾಣಿಕವಾಗಿ ವಿದ್ಯೆ ನೀಡಿದ್ದು ಕ್ರೈಸ್ತ ಚರ್ಚುಗಳ ನೇತೃತ್ವದ ಅದೇ ಸೀಮಿತ ಸಂಖ್ಯೆಯ ಕಾನ್ವೆಂಟ್‌ಗಳು ಎಂದು ನಾವು ಬಹು ಕೃತಜ್ಞತಾ ಭಾವದಿಂದ ಹೇಳಿಕೊಳ್ಳಬಹುದಾಗಿದೆ.

ಆದರೆ ಸ್ವಾತಂತ್ರ್ಯಾ ನಂತರ ಆಡಳಿತ ನಡೆಸಿದ ಕಾಂಗ್ರೆಸ್ ದೇಶದ ಮೂಲೆಮೂಲೆಗಳಲ್ಲಿ ಶಾಲೆಗಳನ್ನು ಆರಂಭಿಸಿ, ಶಿಕ್ಷಣವನ್ನು ಕಡ್ಡಾಯಗೊಳಿಸಿ ಸಾಮೂಹಿಕವಾಗಿ ವಿದ್ಯೆ ನೀಡಿ, ಉದ್ಯೋಗ ನೀಡಿ ದೇಶದ ನೂರಕ್ಕೆ ನೂರರಷ್ಟು ಸಂಖ್ಯೆಯ ಜನರನ್ನು ಮುಖ್ಯಭೂಮಿಕೆಗೆ ಕರೆದು ತಂದು ದೇಶವನ್ನು ಅಭ್ಯುದಯದ ಪಥದತ್ತ ಕೊಂಡೊಯ್ದಿತು ಮತ್ತು ಈಗಿನ ನವಭಾರತವನ್ನು ಬಹು ಶ್ರದ್ಧೆಯಿಂದ ನಿರ್ಮಿಸಿತು ಎಂದು ಕಾಂಗ್ರೆಸಿಗರಾದ ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ವೇಳೆಗೆ ಅಖಂಡ ಭಾರತದ ಕಲ್ಪನೆಯೇ ಮಾಡುವಂತಿರಲಿಲ್ಲ ಏಕೆಂದರೆ ಅದು ತುಂಡು ತುಂಡು ಸ್ವತಂತ್ರ ರಾಜ್ಯಗಳಾಗಿದ್ದವು ಮತ್ತು ಅವುಗಳು ಬ್ರಿಟಿಷರ ಜೊತೆ ಸಖ್ಯದಿಂದಿದ್ದ ಸಣ್ಣಸಣ್ಣ ಅರಸರುಗಳ ಆಳ್ವಿಕೆಯಲ್ಲಿ ಇದ್ದವು. ಆದರೆ ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕದ ಮೇಲೆ ಹೇಳಿದಂತಹ ಬರೋಬ್ಬರಿ 562+ ರಾಜ್ಯಗಳ ಅರಸರುಗಳ ಮನ‌ ಒಲಿಸಿ ಈಗಿನ ನವಭಾರತದ ನಿರ್ಮಾಣಕ್ಕೆ ಕಾರಣವಾಗುತ್ತದೆ.

ಆದರೆ ಇದೀಗ, ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಸ್ಥಾಪಿಸಿದ್ದ ರೈಲ್ವೇ, ವಿಮಾನಯಾನ, ಬ್ಯಾಂಕ್, ಬಂದರುಗಳು, ಕಲ್ಲಿದ್ದಲು ಗಣಿ, ಏರ್ ಇಂಡಿಯಾ ಮುಂತಾದ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಸರಕಾರಿ ಆಸ್ತಿಗಳನ್ನು ಗುಜರಾತಿ ಮಾರ್ವಾಡಿಗಳಿಗೆ ಮೂರುಕಾಸಿಗೆ ಮಾರಾಟ ಮಾಡುತ್ತಿರುವ ಆಡಳಿತ ಬಿಜೆಪಿ ಸರ್ಕಾರದ ಪದಾದಿಕಾರಿಗಳು, ಸಚಿವರುಗಳು ಈ ದೇಶಕ್ಕೆ ಕಾಂಗ್ರೆಸ್‌ನ ಕೊಡುಗೆ ಏನು ಎಂದು ಪ್ರಶ್ನಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಈ ಮೇಲೆ ಹೇಳಿದಂತೆ ಅದೇ ಕಾಂಗ್ರೆಸ್ ಸಾಮಾಜಿಕ ನ್ಯಾಯದ ಚಿಂತನೆಯಡಿಯಲ್ಲಿ ವಿದ್ಯೆ, ಆರೋಗ್ಯ, ಉದ್ಯೋಗದ ಜೊತೆಜೊತೆಯಲ್ಲಿ ದರಖಾಸ್ತು, ಡಿಕ್ಲರೇಷನ್ ಕಾನೂನು, ಅಕ್ರಮ ಸಕ್ರಮ ಮುಂತಾದ ಯೋಜನೆಗಳ ಮೂಲಕ ಸರಕಾರಿ ಭೂಮಿಗಳನ್ನು ಜನಸಾಮಾನ್ಯರಿಗೆ ಹಂಚಿಕೆ ಮಾಡಿತ್ತು. ಆ ಮೂಲಕ ಈ ದೇಶದ ಕೋಟ್ಯಾಂತರ ಕುಟುಂಬಗಳು ಜೀವನ ಕಟ್ಟಿಕೊಂಡು ಐಷಾರಾಮಿ ಬದುಕು ಸಾಗಿಸಲು ಕಾರಣವಾಗಿದೆ.

ಆಹಾರದ ಕೊರತೆ ಉಂಟಾಗಬಾರದು, ಆಹಾರಕ್ಕಾಗಿ ಭಾರತ ಇನ್ನೊಂದು ದೇಶದ ಮುಂದೆ ಕೈಯೊಡ್ಡುವಂತಾಗಬಾರದು ಎಂಬ ಕಾರಣಕ್ಕಾಗಿ "ಜೈ ಜವಾನ್- ಜೈ ಕಿಸಾನ್" ಎಂಬ ಘೋಷಣೆಯಡಿ "ರೈತರು ಈ ದೇಶದ ಬೆನ್ನೆಲುಬು" ಎಂದು ಘೋಷಿಸಿ ನಿರಂತರವಾಗಿ ರೈತ ಪರ ಯೋಜನೆಗಳನ್ನು ಜಾರಿಗೊಳಿಸಿತು. ವೈಜ್ಞಾನಿಕ ಪದ್ಧತಿಯ ಕೃಷಿಗೆ ಬೆಂಬಲಿಸುವ ಮೂಲಕ, ಕೃಷಿ ಪರಿಕರಗಳು, ಬೀಜ, ಗೊಬ್ಬರ ಮುಂತಾದವುಗಳಿಗೆ ನಿರಂತರವಾಗಿ ಸಬ್ಸಿಡಿ ನೀಡುವ ಮೂಲಕ ನೆರೆ, ಬರವನ್ನು ಆಧರಿಸಿ ರೈತರ ಸಾಲಮನ್ನಾ ಮಾಡುವ ಮೂಲಕ ಕೃಷಿಗೆ ಹೆಚ್ಚಿನ ಒತ್ತು ನೀಡಿ ಕೃಷಿಯ ಮೂಲಕ ಭಾರತವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ತಲೆ ಎತ್ತಿ ನಿಲ್ಲಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ‌.

ಹಾಗೆಯೇ ಕಾಂಗ್ರೆಸ್ 1947ರಿಂದ 2014ರವರೆಗೆ ದೇಶದಲ್ಲಿನ ಸಾರ್ವಜನಿಕ ಆಸ್ಪತ್ರೆ, ಶಾಲಾ ಕಾಲೇಜುಗಳು, ಅಣೆಕಟ್ಟುಗಳು, ಸಾರ್ವಜನಿಕ ರಸ್ತೆಗಳು, ನೂರಾರು ಸರ್ಕಾರಿ ಸಂಘ, ಸಂಸ್ಥೆಗಳನ್ನ ಸ್ಥಾಪಿಸಿ ದೇಶದ ಸರ್ವತೋಮುಖ ಅಭಿವೃದ್ಧಿ ಮಾಡಿಯೂ ಆಗ ಇದ್ದ ಸಾಲ ಕೇವಲ 53ಲಕ್ಷ ಕೋಟಿ ರೂಪಾಯಿಗಳು!

ಆದರೆ, 2014 ರಿಂದ 2023ರವರೆಗೆ ಮೋದಿ ಸರ್ಕಾರ ಏನಂದರೆ ಏನೂ ಮಾಡದೆ ಅಂದರೆ ಒಂದೇ ಒಂದು ಜನಪರ ಯೋಜನೆಗಳನ್ನ ಜಾರಿಗೊಳಿಸದೇ ಕಾಂಗ್ರೆಸ್ ಅವಧಿಗಳಲ್ಲಿ ನಿರ್ಮಾಣಗೊಂಡ ಸಂಸ್ಥೆಗಳನೆಲ್ಲಾ ಮಾರಾಟ ಮಾಡಿ ಪ್ರತಿನಿತ್ಯ GST ಹೆಸರಿನಲ್ಲಿ, ಬೆಲೆಯೇರಿಕೆ ಹೆಸರಲ್ಲಿ, ಪೆಟ್ರೋಲ್ - ಡೀಸಲ್ ನಿಂದ, ಅಡುಗೆ ಅನಿಲದ ಮೂಲಕ ಲಕ್ಷಾಂತರ ಕೋಟಿ ಕೊಳ್ಳೆ ಹೊಡೆದೂ ಸಹಾ ಮಾಡಿರುವ ಸಾಲ ಬರೋಬ್ಬರಿ 197ಲಕ್ಷ ಕೋಟಿ ರೂಪಾಯಿ!

ಕಾಂಗ್ರೆಸ್‌ ಪಕ್ಷದ ಬರೋಬ್ಬರಿ 60+ ವರ್ಷಗಳ ಆಡಳಿತಾವಧಿದಲ್ಲಿ ದೇಶದ ಒಟ್ಟು ಸಾಲ 53ಲಕ್ಷ ಕೋಟಿ ರೂಪಾಯಿಗಳಾದರೆ, ಬಿಜೆಪಿಗರ ಕೇವಲ 9 ವರ್ಷಗಳ ಆಡಳಿತದಲ್ಲಿ ದೇಶದ ಸಾಲ 197 ಲಕ್ಷ ಕೋಟಿಗೂ ದಾಟಿದೆ.. ಅಂದರೆ ನಾಲ್ಕು ಪಟ್ಟಿಗೂ ಹೆಚ್ಚು!

ಅಂದರೆ ಕಾಂಗ್ರೆಸ್ ಆಡಳಿತದ ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚು ಸಾಧಿಸಿದ ಭಾರತ ಇದೀಗ ಈ ಮೇಲೆ ವಿವರಿಸಿದಂತೆ ಮನುವಾದಿಗಳ ನೇತೃತ್ವದಲ್ಲಿ ವಿನಾಶದತ್ತ ದಾಪುಗಾಲಿಡುತ್ತಿದೆ.

ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಗರಿಷ್ಠ 10.8% ಇದ್ದ ಜಿಡಿಪಿ ಇತ್ತೀಚೆಗೆ ನರೇಂದ್ರ ಮೋದಿಯವರ ಆಡಳಿತದಲ್ಲಿ ಕನಿಷ್ಠ ಮೈನಸ್ 23.9% ಗೆ ತಲುಪಿದ್ದು ಖೇದಕರವಾದ ವಿಚಾರವಾಗಿದೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ದೇಶದ ಯುವಕರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ಅದೇ ಸರ್ಕಾರದ ಅವಧಿಯಲ್ಲಿ ದೇಶದ ನಿರುದ್ಯೋಗದ ಮಟ್ಟ ಕಳೆದ 47 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದದ್ದು ಕೂಡ ಯೋಚಿಸ ಬೇಕಿರುವ ವಿಚಾರವಾಗಿದೆ.

ಅವೆಲ್ಲಕ್ಕೂ ಮಿಗಿಲಾಗಿ ಈ ಬಿಜೆಪಿಯ ಕೆಲ ನಾಯಕರುಗಳು ಕೇವಲ ಅಧಿಕಾರಕ್ಕಾಗಿ ದೇಶದ ಕೋಮು ಸಾಮರಸ್ಯ ಕೆಡಿಸುತ್ತಿರುವುದು, ಸಾಮರಸ್ಯ ಕದಡುವ ವದಂತಿಗಳನ್ನು ಹರಡುವ ಮೂಲಕ ಬಡವರ ಮನೆಯ ಯುವಕರನ್ನು ಹಿಂಸೆಗೆ ಪ್ರಚೋದಿಸುತ್ತಿರುವುದು ಆ ಮೂಲಕ ಆ ಯುವಕರು ಹೊಡೆದಾಟ, ಬಡಿದಾಟಗಳಲ್ಲಿ ಭಾಗಿಯಾಗಿ ಆಸ್ಪತ್ರೆ- ಜೈಲು- ಸ್ಮಶಾನ ಸೇರುವುದಕ್ಕೆ ಕಾರಣವಾಗಿರುವುದು ನಿಜಕ್ಕೂ ಖೇದಕರವಾದ ವಿಚಾರವಾಗಿದೆ.

ಈಗ ಹೇಳಿ ಸ್ನೇಹಿತರೇ, ಕಾಂಗ್ರೆಸ್ ಈ ದೇಶಕ್ಕೆ ಮತ್ತು ದೇಶದ ಜನರಿಗೇನು ಕೊಟ್ಟಿತ್ತು ಮತ್ತು ಬಿಜೆಪಿ ಏನು ಕೊಟ್ಟಿತೆಂದು?

*ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ...

ನಿರುದ್ಯೋಗಿ ಪದವಿಧರರಿಗೆ ಉದ್ಯೋಗವನ್ನು ಕೊಡುತ್ತದೆ ಮತ್ತು ಯುವನಿಧಿ ಯೋಜನೆಯಡಿಯಲ್ಲಿ ಮಾಸಿಕ 3000 ರೂಪಾಯಿ ನಿರುದ್ಯೋಗ ಭತ್ಯೆಯನ್ನೂ ಕೊಡುತ್ತದೆ.

ಅಕ್ಕಿ, ಬೇಳೆ, ಮೆಣಸು ಮುಂತಾದ ಅಗತ್ಯ ದಿನಸಿ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡುತ್ತದೆ ಮತ್ತು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನತಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಸಹಾಯಧನ ಕೊಡುತ್ತದೆ.

ಪೆಟ್ರೋಲ್, ಡಿಸೇಲ್, ಗ್ಯಾಸ್ ಮುಂತಾದವುಗಳ ಮೇಲಿನ ತೆರಿಗೆ ಇಳಿಸುತ್ತದೆ ಮತ್ತು ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ತನಕದ ವಿದ್ಯುತ್ ಅನ್ನು ಪ್ರತಿ ಮನೆಗೆ ಉಚಿತವಾಗಿ ಕೊಡುತ್ತದೆ.

ಇದೆಲ್ಲವುದರ ಜೊತೆಗೆ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆ.ಜಿ ಯಷ್ಟು ಅಕ್ಕಿಯನ್ನು ಉಚಿತವಾಗಿ ಕೊಡುತ್ತದೆ.

ಆ ಮೂಲಕ ಉತ್ತಮವಾದ ಬದುಕನ್ನು ರೂಪಿಸುತ್ತದೆ.

ಆದರೆ ಅಕಸ್ಮಾತ್ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ರಾಜ್ಯದಲ್ಲಿ ಹಿಜಾಬ್ ಹೆಸರಲ್ಲಿ, ಹಲಾಲ್ ಹೆಸರಲ್ಲಿ, ಅಝಾನ್ ಹೆಸರಲ್ಲಿ ಮತ್ತು ಲವ್ ಜಿಹಾದ್ ಹೆಸರಲ್ಲಿ ರಾಜ್ಯದ ಜನರ ನಡುವಿನ ಸೌಹಾರ್ಧತೆಯನ್ನು ಕೆಡಿಸುತ್ತದೆ. ಕಾಲೇಜಿಗೆ ಹೋಗುವ ಬಡವರ ಮನೆಯ ಮಕ್ಕಳನ್ನು ಹೊಡೆದಾಟಕ್ಕೆ ಪ್ರೇರೇಪಿಸುತ್ತದೆ. ಬದುಕನ್ನು ನಾಶಗೊಳಿಸುತ್ತದೆ.

ದೇಶ ನಿಮ್ಮದು, ಬದುಕು ನಿಮ್ಮದು, ಭವಿಷ್ಯ ನಿಮ್ಮದು, ಆಯ್ಕೆಯೂ ನಿಮ್ಮದೇ!

ಸಾಹೇಬರ ನಿರುಂಕುಶ ಪ್ರಭುತ್ವದ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ:

Advertisement
Advertisement
Recent Posts
Advertisement