ಇದೀಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಒಳಗೊಂಡ I.N.D.I.A ಮೈತ್ರಿಕೂಟ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಸೇರಿದಂತೆ ದೇಶದ ರಾಷ್ಟ್ರೀಯ ಮಾಧ್ಯಮಗಳ ಬರೋಬ್ಬರಿ 14 ನಿರೂಪಕರುಗಳನ್ನು ಬಹಿಷ್ಕರಿಸಿರುವ ಹಿನ್ನೆಲೆಯಲ್ಲಿ ಕನ್ನಡದ ಕೆಲವು "ಮಾರಿಕೊಂಡ ಮಾಧ್ಯಮ"ಗಳು ಕೂಡ ಬಹಿಷ್ಕಾರದ ಕರಿಛಾಯೆಯಲ್ಲಿವೆ.
ಮೇಲೆ ವಿವರಿಸಲಾದ 14 ನಿರೂಪಕರುಗಳನ್ನು ಬಹಿಷ್ಕರಿಸುವ ಕುರಿತು ಏನ್.ಸಿ.ಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಗೃಹಕಚೇರಿಯಲ್ಲಿ ನಡೆದ ಪ್ರಥಮ ಸಮನ್ವಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಸುಳ್ಳುಗಳನ್ನು ಹರಡುವ ಮೂಲಕ ದೇಶದ ಕಾನೂನು ಸುವ್ಯವಸ್ಥೆಯನ್ನು ಈ ಟಿವಿ ಆ್ಯಂಕರ್‌ಗಳು ಹಾಳುಗೆಡಹುತ್ತಿದ್ದಾರೆ ಎಂಬ ಅಭಿಪ್ರಾಯ ಈ ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಮತ್ತು ಈ 14 ಸುದ್ದಿ ನಿರೂಪಕರನ್ನು ಒಳಗೊಂಡ ಮಾಧ್ಯಮಗಳ ಒಂದು ವಿಭಾಗವು "ಏಕ ಪಕ್ಷಿಯವಾಗಿ ಸುಳ್ಳು ಸುದ್ದಿಗಳನ್ನೇ ಹರಡುತ್ತಿವೆ" ಎಂಬ ನಿರ್ಣಯಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಗುಜರಾತ್ ಮಾದರಿಯ ಭ್ರಮೆಯನ್ನು ಹುಟ್ಟಿಸಿ ನಡೆಸಲಾದ 2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಶೇಕಡಾ 39ರಷ್ಟು ಮತದಾರರು ಮಾತ್ರವೇ ಬಿಜೆಪಿ ಮತ್ತದರ ಬೆಂಬಲಿತ ಮೈತ್ರಿಕೂಟಕ್ಕೆ (NDA) ಮತ ನೀಡಿದ್ದು ಅದೇ ಚುನಾವಣೆಯಲ್ಲಿ ದೇಶದ ಬರೋಬ್ಬರಿ ಶೇಕಡಾ 61ರಷ್ಟು ಮತದಾರರು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬೆಂಬಲಿತ ಮೈತ್ರಿಕೂಟಕ್ಕೆ (ಆಗ UPA ಇದೀಗ I.N.D.I.A) ಮತ ನೀಡಿದ್ದರು.
ಆ ಕಾರಣಕ್ಕಾಗಿ ಇದೀಗ ಆ ಸುದ್ದಿ ನಿರೂಪಕರುಗಳನ್ನು ಬಹಿಷ್ಕರಿಸಿದ ನಾಯಕರುಗಳು ಅಥವಾ ಅವರುಗಳು ಪ್ರತಿನಿಧಿಸುವ ಪಕ್ಷ ಮತ್ತದರ ಪದಾದಿಕಾರಿಗಳು, ಕಾರ್ಯಕರ್ತರು, ಬೆಂಬಲಿಗರು ಅಥವಾ ಆ 61% ಮತದಾರರು ಆ 14 ಸುದ್ದಿ ನಿರೂಪಕರುಗಳು ಕೆಲಸ ಮಾಡುವ ಚಾನಲ್‌ಗಳನ್ನು ಸಬ್ಸ್‌ಕ್ರೈಬ್ ಮಾಡುವುದನ್ನೇ ಬಹಿಷ್ಕರಿಸಬಹುದು ಮುಂದೆ ಆ ನಿರ್ದಿಷ್ಟ ಚಾನಲ್‌ಗಳಿಗೆ ಜಾಹೀರಾತುಗಳನ್ನು ಕೂಡ ಬಹಿಷ್ಕರಿಸಬಹುದು. ಆಗ ಖಂಡಿತವಾಗಿಯೂ ಆ ಚಾನಲ್‌ಗಳು ಒಂದೆಡೆ ಟಿಆರ್‌ಪಿ ಇಲ್ಲದೆ ಮತ್ತೊಂದೆಡೆ ಜಾಹೀರಾತುಗಳು ಇಲ್ಲದೇ ಆರ್ಥಿಕವಾಗಿ ಸೊರಗಬಹುದು. ಆ ಮೂಲಕ ಚಾನಲ್‌ಗಳು ಬಂದ್ ಆಗಲೂ ಬಹುದು.
ಹಾಗೆಯೇ ಕನ್ನಡದ ಹಲವು ಮಾರಿಕೊಂಡ ಆ್ಯಂಕರ್‌ಗಳು ಮತ್ತು ಚಾನಲ್ ಗಳನ್ನು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸ್ಥಳೀಯ ಚಾನಲ್‌ಗಳನ್ನು ಬಹಿಷ್ಕರಿಸುವ ಕುರಿತು ಕೂಡ ಆಯಾಯ ರಾಜ್ಯಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು ಬಹುಶಃ ಇದು ನಿರೀಕ್ಷಿತ ವಿಚಾರವಾಗಿದೆ.
ಇದೀಗ ಬಂದ ಸುದ್ದಿ: I.N.D.I.A ಮೈತ್ರಿಕೂಟದ ಪಕ್ಷಗಳ ನೇತೃತ್ವದ ಮೈತ್ರಿ ಸರ್ಕಾರಗಳು (ಕಾಂಗ್ರೆಸ್, ಜೆಡಿಯು, ಆರ್ ಜೆಡಿ, ಡಿಎಂಕೆ) ಅಧಿಕಾರದಲ್ಲಿರುವ 14 ರಾಜ್ಯಗಳ ಪೈಕಿ 9 ರಾಜ್ಯ ಸರಕಾರಗಳು "ಮಾರಿಕೊಂಡ ಮಾಧ್ಯಮ"ಗಳಿಗೆ ಜಾಹೀರಾತು ನಿಷೇಧಕ್ಕೆ ಒಪ್ಪಿಗೆ ನೀಡಿವೆ.
ಬಹುಶಃ ಇನ್ನಾದರೂ ಈ ಬಹಿಷ್ಕಾರಕ್ಕೊಳಗಾದ ಆ್ಯಂಕರ್‌ಗಳು ಕೆಲಸ ಮಾಡುವ ಚಾನಲ್‌ಗಳು ಮತ್ತು ಮುಂದೆ ಬಹಿಷ್ಕಾರಕ್ಕೆ ಒಳಗಾಗುವ ಲೀಸ್ಟ್‌ನಲ್ಲಿರುವ ಚಾನಲ್‌ಗಳ ಆಡಳಿತ ಮಂಡಳಿ ತಮ್ಮ ಚಾನಲ್‌ನ ಅಳಿವು ಉಳಿವಿನ ಕುರಿತು ಯೋಚಿಸಿ ಸೂಕ್ತ ಜನಪರವಾದ ಬದಲಾವಣೆಗಳ ಕುರಿತು ತೀರ್ಮಾನಕ್ಕೆ ಬರಬೇಕಾಗಿದೆ ಮತ್ತು "ಕೆಲವರನ್ನು ಎಲ್ಲಾ ಸಮಯದಲ್ಲಿಯೂ ಮೂರ್ಖರನ್ನಾಗಿಸಬಹುದು. ಎಲ್ಲರನ್ನೂ ಕೆಲವು ಸಮಯ ಮೂರ್ಖರನ್ನಾಗಿಸಬಹುದು ಆದರೆ ಎಲ್ಲರನ್ನೂ, ಎಲ್ಲಾ ಸಮಯದಲ್ಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ" ಎಂಬ ನಾಣ್ಣುಡಿಯನ್ನು ನೆನಪಿಸಿಕೊಳ್ಳಬೇಕಾಗಿದೆ.. ಏನಂತೀರಿ?
ಇಂಡಿಯಾ ಮೈತ್ರಿಕೂಟದಿಂದ ಬಹಿಷ್ಕಾರಕ್ಕೊಳಗಾದ ಟಿವಿ ಆ್ಯಂಕರ್‌ಗಳ ಹೆಸರುಗಳು ಇಂತಿವೆ: 1) ಅಮನ್ ಚೋಪ್ರಾ 2) ಪ್ರಾಚಿ ಪರಾಶರ್ 3) ರೂಬಿಕಾ ಲಿಯಾಕತ್ 4)ಚಿತ್ರಾ ತ್ರಿಪಾಠಿ 5)ಸುದೀರ್ ಚೌದುರಿ 6)ಅಮಿಶ್ ದೇವಗನ್ 7)ಅರ್ನಬ್ ಗೋಸ್ವಾಮಿ 8)ನಾವಿಕಾ ಕುಮಾರ್ 9)ಆನಂದ್ ನರಸಿಂಹನ್ 10)ಗೌರವ್ ಸಾವಂತ್ 11)ಅದಿತಿ ತ್ಯಾಗಿ 12)ಸುಶಾಂತ್ ಸಿನ್ಹಾ 13)ಅಶೋಕ್ ಶ್ರಿವಾಸ್ತವ್ 14)ಶಿವ್ ಅವೂರ್
ಬುಧವಾರ ನಡೆದ I.N.D.I.A ಒಕ್ಕೂಟದ ಸಭೆಯ ನಂತರ, ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ 12 ಸದಸ್ಯ ಪಕ್ಷಗಳು ಭಾಗವಹಿಸಿದ್ದವು ಎಂದು ತಿಳಿದುಬಂದಿದೆ.
ಸಭೆಯಲ್ಲಿ ನಿರ್ಣಯಕ್ಕೆ ಬರಲಾದ ಪ್ರಮುಖ ಅಂಶಗಳು ಇಂತಿವೆ:
1) ದೇಶದ ವಿವಿಧ ಭಾಗಗಳಲ್ಲಿ ಜಂಟಿ ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದು ಎಂದು ಸಮಿತಿಯು ನಿರ್ಧರಿಸಿತು. ಅದರಲ್ಲಿ ಮೊದಲ ಸಾರ್ವಜನಿಕ ಸಭೆಯು ಅಕ್ಟೋಬರ್ ಮೊದಲ ವಾರದಲ್ಲಿ ಭೋಪಾಲ್‌ನಲ್ಲಿ ನಡೆಯಲಿದೆ. ಇದರಲ್ಲಿ, ಬಿಜೆಪಿ ಆಡಳಿತದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿಷಯವನ್ನು I.N.D.I.A ಮೈತ್ರಿಕೂಟ ಪ್ರಸ್ತಾಪಿಸುತ್ತದೆ.
2) ಜಾತಿ ಗಣತಿ ವಿಷಯವನ್ನು ಪ್ರಸ್ತಾಪಿಸಲು ಎಲ್ಲಾ ಪಕ್ಷಗಳು ಒಪ್ಪಿಕೊಂಡಿವೆ.
3) I.N.D.I.A ಮೈತ್ರಿಕೂಟದ ಯಾವುದೇ ಸದಸ್ಯ ಪಕ್ಷವು ತನ್ನ ಪ್ರತಿನಿಧಿಗಳನ್ನು ಕಳುಹಿಸುವ ಕಾರ್ಯಕ್ರಮಗಳಿಗೆ ಆ್ಯಂಕರ್‌ಗಳ ಹೆಸರನ್ನು ನಿರ್ಧರಿಸಲು I.N.D.I.A ಮೈತ್ರಿಕೂಟದ ಸಮನ್ವಯ ಸಮಿತಿಗೆ ಅಧಿಕಾರ ನೀಡಿದೆ.
ಜನಪರ ಪತ್ರಕರ್ತ ರವೀಶ್ ಕುಮಾರ್ ಅವರಿಗೂ ಬಿಜೆಪಿ ಬಹಿಷ್ಕಾರ ಹಾಕಿತ್ತು.
ಆದಾಗ್ಯೂ, ಇದು ಆ್ಯಂಕರ್ ಬಹಿಷ್ಕಾರದ ಮೊದಲ ಪ್ರಕರಣವಲ್ಲ, ಇದಕ್ಕೂ ಮೊದಲು ಬಿಜೆಪಿ ಪಕ್ಷವು, ಜನಪರ ಪತ್ರಕರ್ತ, ಮಾಜಿ ಎನ್‌ಡಿಟಿವಿ ವರದಿಗಾರ ಮತ್ತು ಆ್ಯಂಕರ್ ರವೀಶ್ ಕುಮಾರ್ ಅವರನ್ನು ಇದೇ ರೀತಿಯಲ್ಲಿ ಬಹಿಷ್ಕರಿಸಿದೆ. ರವೀಶ್ ಅವರ ಪ್ರೈಮ್ ಟೈಮ್ ಶೋನಲ್ಲಿ ಮತ್ತು ಅವರು ಆ್ಯಂಕರಿಂಗ್ ಮಾಡಿದ ಯಾವುದೇ ಬುಲೆಟಿನ್‌ನಲ್ಲಿ ಬಿಜೆಪಿ ತನ್ನ ವಕ್ತಾರರನ್ನು ಕಳುಹಿಸಲಿಲ್ಲ. ಅಷ್ಟೇ ಅಲ್ಲ, ಬಿಜೆಪಿಯ ಯಾವ ನಾಯಕರೂ ರವೀಶ್ ಕುಮಾರ್‌ಗೆ ಸಂದರ್ಶನ ನೀಡುವುದಿಲ್ಲ.