Advertisement

'ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ ಏಕೆಂದರೆ, ನನ್ನ ಹೆಸರು ನರೇಂದ್ರ ಮೋದಿಯಲ್ಲ': ರಾಹುಲ್ ಗಾಂಧಿ!

Advertisement

'ನಾನು ನಿಮಗೆ ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಏಕೆಂದರೆ ನನ್ನ ಹೆಸರು ನರೇಂದ್ರ ಮೋದಿಯಲ್ಲ ನಾನು ರಾಹುಲ್ ಗಾಂಧಿ. ಪ್ರಧಾನಿ ಮೋದಿಯವರು ದಿನದ 24 ಗಂಟೆಗಳ ಕಾಲವೂ ಸುಳ್ಳು ಹೇಳುತ್ತಲೇ ಇರುತ್ತಾರೆ' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರದಾನಿ ಮೋದಿಯವರ ಸುಳ್ಳುಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಅಸ್ಸಾಂ ಚುನಾವಣಾ ಪ್ರಚಾರದಲ್ಲಿರುವ ಅವರು ಬುಧವಾರ ನಡೆದ ರ‌್ಯಾಲಿಯಲ್ಲಿ ಬಿಜೆಪಿ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು. 'ನಾನು ಸುಳ್ಳು ಹೇಳುವ ನರೇಂದ್ರ ಮೋದಿಯಲ್ಲ, ಸತ್ಯವನ್ನು ಕೇಳಲು ಇಷ್ಟಪಡುವಿರಾದರೆ ನನ್ನ ಮಾತುಗಳನ್ನು ಕೇಳಿ. ಅಸ್ಸಾಂ, ರೈತರು ಅಥವಾ ದೇಶದ ಇನ್ಯಾವುದೇ ವಿಷಯದ ಕುರಿತು ಸುಳ್ಳು ಹೇಳುವುದನ್ನು ಕೇಳಲು ಬಯಸುವಿರಾದರೆ, ಮನೆಗೆ ತೆರಳಿ ಟಿವಿ ಆನ್ ಮಾಡಿ, ಪ್ರಧಾನಿ ಮೋದಿಯವರು ದಿನದ 24 ಗಂಟೆಯೂ ಸುಳ್ಳು ಹೇಳುತ್ತಾರೆ ಇರುತ್ತಾರೆ' ಎಂದವರು ಹೇಳಿದರು. ಮುಂದುವರಿದು ಮಾತನಾಡಿದ ಅವರು 'ಕಾಂಗ್ರಸ್ ನೀಡಿದ ಭರವಸೆಯಂತೆ, ಛತ್ತೀಸ್‌ಗಢದಲ್ಲಿ ಅಧಿಕಾರ ವಹಿಸಿಕೊಂಡ ಕೇವಲ ಆರು ಗಂಟೆಗಳಲ್ಲಿ ಕೃಷಿ ಸಾಲವನ್ನು ಮನ್ನಾ ಮಾಡಿದ್ದೇವೆ, ಈ ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ರೈತರ 70,000 ಕೋಟಿ ರೂ.ಗಳ ಕೃಷಿ ಸಾಲವನ್ನು ಮನ್ನಾ ಮಾಡಿದೆ' ಎಂದವರು ಹೇಳಿದ್ದಾರೆ. 'ವಿವಿಧ ಜನಾಂಗಗಳ, ವಿವಿಧ ಭಾಷೆಗಳ, ಮತ್ತು ವಿವಿಧ ಸಿದ್ಧಾಂತಗಳ ಜನರು ನನ್ನ ಮಾತುಗಳನ್ನು ಶಾಂತಿಯುತವಾಗಿ ಆಲಿಸುತ್ತಿದ್ದಾರೆ, ಏಕೆಂದರೆ ಇದು ಅಸ್ಸಾಂ!.. ಆದರೆ ಬಿಜೆಪಿಯ ನಾಯಕರು ಒಬ್ಬರ ವಿರುದ್ದ ಇನ್ನೊಬ್ಬರನ್ನು ಎತ್ತಿ ಕಟ್ಟಿ ಸದಾ ಹೊಡೆದಾಡಿಕೊಳ್ಳುತ್ತಲೇ ಇರುವಂತೆ ಮಾಡುತ್ತಾರೆ ಮತ್ತು ದ್ವೇಷವನ್ನು ಹರಡುತ್ತಲೇ ಇರುತ್ತಾರೆ. ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸ್ಥಳೀಯ ಮತ್ತು ಜನರ ಭಾವನೆಗಳಿಗೆ ಸ್ಪಂದಿಸುವ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ ಮತ್ತು ಅಸ್ಸಾಂ ರಾಜ್ಯವನ್ನು ಎಂದಿಗೂ ನಾಗ್ಪುರ (ಆರ್‌ಎಸ್‌ಎಸ್‌ ಪ್ರಧಾನ ಕಚೇರಿ) ಅಥವಾ ದೆಹಲಿಯಿಂದ ನಿಯಂತ್ರಿಸಲು ಬಿಡಲಾರೆವು' ಎಂದವರು ಹೇಳಿದ್ದಾರೆ. 39 ವಿಧಾನಸಭಾ ಕ್ಷೇತ್ರಗಳ ಅಸ್ಸಾಂ ವಿಧಾನಸಭಾ ಚುನಾವಣೆಗೆ ಎಪ್ರಿಲ್ 1 ರಂದು ಗುರುವಾರ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 6 ರಂದು ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿವೆ. __________________________________ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement