ಬರಹ: ದಿನೇಶ್ ಅಮಿನ್ ಮಟ್ಟು (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು)
►►ಇದನ್ನೂ ಓದಿ: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
“ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ ಹಾಗೂ ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು’’ ಎಂದು ಹೇಳಿದ ರಾಹುಲ್ ಗಾಂಧಿ ಮಾತು ಹೊಸತೇನಲ್ಲ, ಇದರಿಂದ ಆಶ್ಚರ್ಯ ಚಕಿತರಾಗಬೇಕಾದ ಅಗತ್ಯವೂ ಇಲ್ಲ. ಸಂಘ ಪರಿವಾರವನ್ನು ರಾಹುಲ್ ಗಾಂಧಿಯವರ ರೀತಿಯಲ್ಲಿ ಸೈದ್ದಾಂತಿಕ ಸ್ಪಷ್ಟತೆಯಿಂದ ವಿರೋಧಿಸುತ್ತಾ ಬಂದಿರುವ ಮತ್ತೊಬ್ಬ ಕಾಂಗ್ರೆಸ್ ನಾಯಕ ನಮಗೆ ರಾಷ್ಟ್ರಮಟ್ಟದಲ್ಲಿ ಕಾಣುವುದಿಲ್ಲ. ಆರ್ ಎಸ್ ಎಸ್ ಸಿದ್ದಾಂತದ ವಿರುದ್ಧ ಮಾತನಾಡಿದ ಕಾರಣಕ್ಕೆ ನ್ಯಾಯಾಲಯದಲ್ಲಿ ಕಟ್ಲೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷದ ಏಕೈಕ ಹಿರಿಯ ನಾಯಕ ರಾಹುಲ್ ಗಾಂಧಿ ಮಾತ್ರ ಇರಬೇಕು.
ರಾಹುಲ್ ಗಾಂಧಿಯವರಿಗೆ ಇರುವ ಸೈದ್ಧಾಂತಿಕ ಸ್ಪಷ್ಟತೆ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಮಂದಿಗೆ ಇದೆ ಎನ್ನುವುದು ಪ್ರಶ್ನೆ. ಮೊನ್ನೆ ಮೊನ್ನೆ ನಮ್ಮೂರಿನ ಮಾಜಿ ಶಾಸಕರು ಸ್ಥಳೀಯ ಟಿವಿ ಚಾನೆಲ್ ಸಂದರ್ಶನದಲ್ಲಿ ಆರ್ ಎಸ್ ಎಸ್ ಒಂದು ಶಿಸ್ತಿನ ಸಂಘಟನೆ ಎಂದು ಹಾಡಿ ಹೊಗಳಿದ್ದರು. ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರ ಮಾತನ್ನು ಒಪ್ಪುವುದಾದರೆ ಮೊದಲು ಈ ಮಾಜಿ ಶಾಸಕರಿಗೆ ಶೋಕಾಸ್ ನೊಟೀಸಾದರೂ ನೀಡಬೇಕಾಗಿತ್ತು.
ಇದು ಅವರೊಬ್ಬರ ಸೈದ್ಧಾಂತಿಕ ಭ್ರಷ್ಟತೆ ಅಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೂ ಆರ್ ಎಸ್ ಎಸ್ ವಿರುದ್ಧ ನೇರಾನೇರವಾಗಿ ಸೈದ್ಧಾಂತಿಕ ದಾಳಿ ನಡೆಸುತ್ತಿದ್ದರು. ಇದಕ್ಕೆಲ್ಲ ಮಾಧ್ಯಮ ಸಲಹೆಗಾರನಾಗಿದ್ದ ನಾನೇ ಕಾರಣವೆಂಬಂತೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಗೊಣಗಾಡಿದ್ದುಂಟು. ನನ್ನ ವಿರುದ್ಧ ಆಗಾಗ ಮುಖ್ಯಮಂತ್ರಿಗಳ ಕಿವಿ ಊದಿದ್ದೂ ಉಂಟು. ಚುನಾವಣೆ ಕಾಲದಲ್ಲಿಯೂ ಸಿದ್ದರಾಮಯ್ಯನವರು ಆರ್ ಎಸ್ ಎಸ್ ವಿರುದ್ಧ ಮಾತ್ರವಲ್ಲ ನರೇಂದ್ರಮೋದಿಯವರ ವಿರುದ್ಧವೂ ಹೆಚ್ಚು ಮಾತನಾಡಬಾರದು, ಸರ್ಕಾರದ ಸಾಧನೆಯ ಬಗ್ಗೆ ಹೇಳಿಕೊಂಡರೆ ಸಾಕಲ್ಲವೇ? ಎಂದು ನನಗೆ ಬುದ್ದಿ ಮಾತು ಹೇಳಿ ಅದನ್ನು ಸಿದ್ದರಾಮಯ್ಯನವರಿಗೆ ತಲುಪಿಸಲು ಹೇಳಿದ್ದೂ ಉಂಟು.
ಈಗಲೂ ನೀವು ಗೂಗಲ್‌ನಲ್ಲಿ ಸರ್ಚ್ ಮಾಡಿ ಯಾವ ಯಾವ ನಾಯಕರು ಆರ್ ಎಸ್ ಎಸ್ ಪರವಾಗಿ ಮತ್ತು ವಿರುದ್ಧವಾಗಿ ಮಾತನಾಡಿದ್ದಾರೆ ಹಾಗೂ ಯಾರ‌್ಯಾರೆಲ್ಲಾ ಈ ಬಗ್ಗೆ ತುಟಿಯನ್ನೆ ಬಿಚ್ಚಿಲ್ಲ ಎನ್ನುವ ಮಾಹಿತಿ ಸಿಗುತ್ತದೆ.
ಕಳೆದ ವಿಧಾನಸಭಾ ಚುನಾವಣಾ ಕಾಲದಲ್ಲಿ ಯಾವ ಯಾವ ಕಾಂಗ್ರೆಸ್ ಅಭ್ಯರ್ಥಿಗಳು ಹನುಮಾನ್ ಚಾಲೀಸ್ ಪಠಿಸಿದ್ದರು, ಕೇಸರಿ ಶಾಲು ಹೊದ್ದುಕೊಂಡಿದ್ದರು, ಗೋವುಗಳ ದಾನ ಮಾಡಿದ್ದರು, ಕೇಸರಿ ನಾಮ ಹಾಕಿಕೊಂಡಿದ್ದರು, ಆರ್ ಎಸ್ ಎಸ್ ಸಂಘಟನೆಯನ್ನು ಹೊಗಳಿದ್ದರು ಎನ್ನುವುದನ್ನು ರಾಹುಲ್ ಗಾಂಧಿಯವರು, ಜಿಲ್ಲೆಗಳಿಂದ ವರದಿ ತರಿಸಿದರೆ ಯಾರನ್ನು ಪಕ್ಷದದಲ್ಲಿ ಇಟ್ಟುಕೊಳ್ಳಬೇಕು, ಯಾರನ್ನು ಹೊರಗೆ ಕಳುಹಿಸಬೇಕು ಎನ್ನುವುದನ್ನು ಸುಲಭದಲ್ಲಿ ನಿರ್ಧರಿಸಲು ಸಾಧ್ಯವಿದೆ.
ನನ್ನ ಪ್ರಕಾರ ಹನುಮಾನ್ ಚಾಲೀಸ್, ಕೇಸರಿ ಶಾಲು , ಗೋದಾನ, ಕುಂಕುಮ ಯಾವುದೂ ತಪ್ಪಲ್ಲ. ಅವುಗಳೆಲ್ಲ ವೈಯಕ್ತಿಕ ನಂಬಿಕೆ-ಆಚರಣೆಗಳು, ಮನೆಯೊಳಗೆ ನಡೆಯಬೇಕಾಗಿರುವುದು. ಅವುಗಳನ್ನು ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಳ್ಳುವುದು ಸಂವಿಧಾನಕ್ಕೆ ವಿರುದ್ದ ಮಾತ್ರವಲ್ಲ ನಿಜವಾದ ಹಿಂದೂ ಧರ್ಮಕ್ಕೆ ಮಾಡುವ ಅಪಚಾರವೂ ಹೌದು.
ರಾಜಕೀಯವಾಗಿಯೂ ಈ ಅಸ್ತ್ರ ಪ್ರಯೋಗ ಬಿಜೆಪಿಗಷ್ಟೇ ಲಾಭ ತಂದುಕೊಡಲು ಸಾಧ್ಯ, ಕಾಂಗ್ರೆಸ್ ಪಕ್ಷಕ್ಕೆ ಈ ಅಸ್ತ್ರ ಪ್ರಯೋಗದಿಂದ ಲಾಭ ಕೂಡಾ ಇಲ್ಲ ನಷ್ಟ ಮಾತ್ರ. ಮೆದು ಹಿಂದುತ್ವ ಎನ್ನುವುದು ನಕಲಿ ಹಿಂದುತ್ವ ಎಂಬ ಟೀಕೆಗೆ ಆಹ್ಹಾನ ನೀಡಿದಂತಾಗುತ್ತದೆ ಅಷ್ಟೆ.
ದೇಶಕ್ಕೆ ಇಂದು ಬೇಕಾಗಿರುವುದು ರಾಜಕೀಯ ಪಕ್ಷದ ಬದಲಾವಣೆ ಅಲ್ಲ, ರಾಜಕೀಯ ಸಿದ್ಧಾಂತದ ಬದಲಾವಣೆ. ರಾಹುಲ್ ಮಾತಿನಲ್ಲಿ ಈ ಆಶಯದ ದನಿ ಇದೆ.
ರಾಹುಲ್ ಗಾಂಧಿ ತಮ್ಮ ಮಾತನ್ನು ತಾವೇ ಗಂಭೀರವಾಗಿ ಸ್ವೀಕರಿಸುವುದಾದರೆ ಅವರು ಮೊದಲು ಒಂದು ಸವಾಲಿನ ನಿರ್ಧಾರ ಕೈಗೊಳ್ಳಬೇಕು. ಮುಂದಿನ ಚುನಾವಣೆಯ ಗೆಲುವಿಗಾಗಿ ಪಕ್ಷವನ್ನು ಕಟ್ಟಲು ಹೋಗದೆ, ಮುಂದಿನ ಹತ್ತು ವರ್ಷಗಳ ಅವಧಿಯನ್ನು ಗುರಿಯಾಗಿಟ್ಟುಕೊಂಡು ಸೈದ್ದಾಂತಿಕವಾಗಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಪ್ರಾರಂಭಿಸಬೇಕು.
ಮುಂದಿನ ಚುನಾವಣೆಯ ಗೆಲುವು ರಾಹುಲ್ ಗಾಂಧಿಯವರ ಉದ್ದೇಶ ಅಲ್ಲ ಎಂದು ಗೊತ್ತಾದರೆ ಅವರ ಸುತ್ತ ಜೈಕಾರ ಹಾಕುತ್ತಿರುವ ಮುಕ್ಕಾಲು ಪಾಲು ನಾಯಕರು ಜಾಗ ಖಾಲಿ ಮಾಡುತ್ತಾರೆ. ಆಗ ಹೊಸರಕ್ತದ ಪ್ರವೇಶಕ್ಕೂ ಅನುಕೂಲವಾಗುತ್ತದೆ. ಅವರ ಪಕ್ಷವೂ ಉಳಿಯುತ್ತದೆ, ದೇಶವೂ ಉಳಿಯುತ್ತದೆ.
►►ಇದನ್ನೂ ಓದಿ:
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?