ನರೇಂದ್ರ ಮೋದಿಯವರ ಸರ್ಕಾರವನ್ನು ಸದಾ ಟೀಕಿಸುವವರೆ ಇತ್ತ ಕೇಳಿ! ಇದೀಗ ಅದೇ ಸರ್ಕಾರ ಮತ್ತೊಂದು ಮಹತ್ಸಾಧನೆ ಮಾಡಿದೆ. ಇದು ಕೇಂದ್ರದ ಮೋದಿ ಸರ್ಕಾರದ ಸಚಿವ ಅನುರಾಗ್ ಸಿಂಗ್ ಲೋಕಸಬೆಗೆ ನೀಡಿರುವ ಮಾಹಿತಿ:
ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಕಳೆದ ಆರ್ಥಿಕ ವರ್ಷವೊಂದರಲ್ಲೆ (2017-18) ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಇಟ್ಟುಕೊಳ್ಳಲಾಗದ ಬಡ ಖಾತೆದಾರರಿಂದ ಮೋದಿ ಸರ್ಕಾರ ದಂಡದ ರೂಪದಲ್ಲಿ ವಸೂಲು ಮಾಡಿದ ಹಣ ಬರೋಬ್ಬರಿ 3,368.42ಕೋಟಿ ರೂಪಾಯಿ. ಹಾಗೆಯೇ ಈ ಆರ್ಥಿಕ ವರ್ಷ (2018-19)ರಲ್ಲಿ ವಸೂಲಿ ಮಾಡಿದ ಹಣ 1996.46 ಕೋಟಿ ರೂಪಾಯಿಗಳು. ಒಂದೊತ್ತಿನ ಊಟಕ್ಕೆ ಪರದಾಡುವ ಕಡುಬಡವರಿಂದ ಇಷ್ಟೊಂದು ದೊಡ್ಡ ಮೊತ್ತದ ದಂಡ ವಸೂಲಿ ಮಾಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಸರ್ಕಾರಕ್ಕೆ ಜೈ ಎನ್ನಿ!