ಸುದ್ದಿಯೊಂದರ ಪ್ರಕಾರ ರೆಫೆಲ್ ಯುದ್ದವಿಮಾನ ತಯಾರಿಕೆಯಲ್ಲಿ ನಾಗಪುರದ ರಿಲಯೆನ್ಸ್ ಡಿಫೆನ್ಸ್ ಗೆ ಸಹಾಯಕವಾಗಿ ಬೆಂಗಳೂರಿನ ಎಚ್‌ಎಎಲ್ ಅನ್ನು ಬಳಸಿಕೊಳ್ಳಲು ನಿರ್ಣಯಿಸಲಾಗಿದೆ.
ಮನಮೋಹನ್ ಸಿಂಗ್ ರವರ ಯುಪಿಎ ಸರ್ಕಾರದ ಅವಧಿಯಲ್ಲಿ ಯುದ್ಧ ವಿಮಾನ ತಯಾರಿಯಲ್ಲಿ ನೂರು ವರ್ಷದ ಅನುಭವ ಹೊಂದಿರುವ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ನೀಡಲಾಗಿದ್ದ ರೆಫೆಲ್ ಗುತ್ತಿಗೆಯನ್ನು ಆ ನಂತರ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ರದ್ದುಗೊಳಿಸಿ ಕೇವಲ ಇಪ್ಪತ್ತು ದಿನಗಳ ಹಿಂದಷ್ಟೆ ನೋಂದಾಯಿತವಾದ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ಮೊದಲು ಮಾಡಿಕೊಂಡ ಮೊತ್ತದ ಮೂರು ಪಟ್ಟು ಮೊತ್ತಕ್ಕೆ ಗುತ್ತಿಗೆ ನೀಡಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಹೇಗಿದೆ ನೋಡಿ ಚುನಾಯಿತ ಸರ್ಕಾರವೊಂದು ಖಾಸಗಿ ಕಂಪೆನಿಯೊಂದರ ಉದ್ಧಾರಕ್ಕಾಗಿ ಸರ್ಕಾರಿ ಕಂಪನಿಯೊಂದನ್ನು ದುರುಪಯೋಗ ಪಡಿಸಿಕೊಳ್ಳುವ ರೀತಿಯನ್ನು? ಇದು ದೇಶಪ್ರೇಮವೇ?