ಭೂ ಸುಧಾರಣಾ ತಿದ್ದುಪಡಿ ವಿದೇಯಕ ಸೇರಿ ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ 'ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ' ಸೆಪ್ಟೆಂಬರ್ 25 ರಂದು ಭಾರತ ಬಂದ್ ಗೆ ಕರೆ ನೀಡಿದೆ.
ರೈತ ಮತ್ತು ಕಾರ್ಮಿಕ ವಿರೋಧಿ ಅಂಶಗಳನ್ನು ಒಳಗೊಂಡಿರುವ ಭೂಸುಧಾರಣಾ ಕಾಯ್ದೆ (ತಿದ್ದುಪಡಿ) , ಕೈಗಾರಿಕಾ ಕಾಯ್ದೆ (ತಿದ್ದುಪಡಿ) , ಎಪಿಎಂಸಿ ಕಾಯ್ದೆಗಳನ್ನು ವಾಪಾಸು ಪಡೆಯುವಂತೆ ಒತ್ತಾಯಿಸಿ ಈ ಬಂದ್ ಅನ್ನು ಕರೆಯಲಾಗಿದೆ. ಈ ತಿದ್ದುಪಡಿ ವಿದೇಯಕಗಳಲ್ಲಿ ಆ ಕಾಯ್ದೆಗಳ ಮೂಲ ಆಶಯಗಳನ್ನು ನಾಶಗೊಳಿಸಲಾಗಿದೆ. ಇವುಗಳು ಈ ದೇಶದ ರೈತರನ್ನು ಹಾಗೂ ಕಾರ್ಮಿಕರನ್ನು ಬಂಡವಾಳಶಾಹಿಗಳ ಗುಲಾಮಗಿರಿಗೆ ತಳ್ಳುವ ಷಡ್ಯಂತ್ರದ ಭಾಗವಾಗಿವೆ. ಇದನ್ನು ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜ್ಞಾವಂತ ಪ್ರಜೆಗಳಾದ ನಾವು ಒಕ್ಕೊರಲಿನಿಂದ ವಿರೋಧಿಸುತ್ತೇವೆ. ಪ್ರತಿಭಟನಾರ್ಥವಾಗಿ ನಡೆಯಲಿರುವ ಬಂದ್‌ನ ನಂತರವೂ ಸರಕಾರ ನಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ ಬೇಡಿಕೆಗಳು ಈಡೇರುವ ತನಕವೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಓದಿರಿ: www.kannadamedia.com News