Advertisement

ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಎಂಬ 'ಕೊಡಗಿನ ವೀರ'!

Advertisement

ಬರಹ: ಕಮಲಾಕರ ಕಾರಣಗಿರಿ. ಎಐಸಿಸಿ ವಕ್ತಾರರಾಗಿ ಪ್ರಖರ ವಾಗ್ಮಿ, ಸಮಾಜಮುಖಿ ಚಿಂತಕ ಬ್ರಿಜೇಶ್ ಕಾಳಪ್ಪ ಅವರನ್ನು ಮುಂದುವರಿಕೆ ಮಾಡಲಾಗಿರುವ ಕುರಿತು ವರದಿಯಾಗಿರುವ ಹಿನ್ನಲೆಯಲ್ಲಿ ಒಂದು ಲೇಖನ. 2013 ರಿಂದಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ವಕ್ತಾರರಾಗಿ ಇಂಗ್ಲಿಷ್, ಹಿಂದಿ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ತೀಕ್ಷ್ಣವಾದ ಮತ್ತು ಸತ್ಯದ ತಲೆಯ ಮೇಲೆ ಹೊಡೆದಂತೆ ವಾದಿಸುವ ಬ್ರಿಜೇಶ್ ರವರ ವಿಶಿಷ್ಠ ಶೈಲಿ ಬಹು ಕುತೂಹಲಕಾರಿ ಹಾಗೂ ಜನಪ್ರಿಯವಾದುದು. ಸುಪ್ರೀಂ ಕೋರ್ಟ್‌ನ ಖ್ಯಾತ ನ್ಯಾಯವಾದಿಯೂ ಆಗಿರುವ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಇದೀಗ ಶ್ರೀಯುತರು ಹೊಂದಿರುವ ಪಕ್ಷ ನಿಷ್ಠೆ, ಸೈದ್ಧಾಂತಿಕ ಬದ್ದತೆ, ವಿಷಯ ಜ್ಞಾನವನ್ನು ಗುರುತಿಸಿ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಕೆ ಮಾಡಿರುವ ಸುದ್ದಿ ಕರ್ನಾಟಕ ಕಾಂಗ್ರೆಸ್ ನ ಪ್ರಗತಿಪರರಲ್ಲಿ ಉತ್ಸಾಹದ ವಾತಾವರಣವನ್ನು ಸೃಷ್ಟಿಸಿದೆ. ಮೂಲತಃ ಕರ್ನಾಟಕದ ಕೊಡಗಿನವರಾದ ಬ್ರಿಜೇಶ್ ಕಾಳಪ್ಪನವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯ ಸಚಿವ ಸ್ಥಾನಮಾನದೊಂದಿಗೆ ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು ಹಾಗೂ ಅವರು ಹರಿಯಾಣದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೂಡ ಹೌದು. ತನ್ನ ವಿದ್ಯಾರ್ಥಿ ದಿನಗಳಿಂದಲೂ ಸಾಮಾಜಿಕ ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶ್ರೀಯುತರು ಕಾನೂನು ಪದವಿ ಮುಗಿದ ಬಳಿಕ ಕೆಲಕಾಲ ಜನಪ್ರಿಯ 'ದಿ ಎಶಿಯನ್ ಏಜ್' ಇಂಗ್ಲಿಷ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೂಡ ಕೆಲಸ ಮಾಡಿದ್ದರು. ಕಾವೇರಿ, ಮಹದಾಯಿ ಹಾಗೂ ಕೃಷ್ಣ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್‍ ನಲ್ಲಿ ರಾಜ್ಯ ಸರ್ಕಾರವನ್ನು ಸುಮಾರು ಹದಿನೈದು ವರ್ಷಗಳಿಂದಲೂ ಪ್ರತಿನಿಧಿಸುತ್ತಿದ್ದ ಬ್ರಿಜೇಶ್ ರವರನ್ನು ಸಿದ್ದರಾಮಯ್ಯ ರವರು 2015ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕಾನೂನು ಸಲಹೆಗಾರರಾಗಿ ನೇಮಕ ಮಾಡಿದ್ದರು. ಈ ಸಂಧರ್ಭದಲ್ಲಿ ಕೇವಲ ಜಲ ವಿವಾದಗಳು ಮಾತ್ರವಲ್ಲದೆ ರಾಜ್ಯದ ಗಡಿ, ಭಾಷೆ ಸೇರಿದಂತೆ ಸರ್ಕಾರಕ್ಕೆ ಹಲವಾರು ಸಂದರ್ಭಗಳಲ್ಲಿ ಸೂಕ್ತ ಕಾನೂನು ಸಲಹೆ ಹಾಗೂ ನಿರ್ದೇಶನಗಳನ್ನು ಇವರು ನೀಡಿದ್ದರು. 2007 ರಲ್ಲಿ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣದಿಂದ ಅಂತಿಮ ತೀರ್ಪು ಬಂದ ಸಂದರ್ಭದಲ್ಲಿಯೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರವನ್ನು ಪ್ರಶ್ನಿಸುವಂತೆ ಸಲಹೆ ನೀಡಿದ್ದವರು ಇದೇ ಬ್ರಿಜೇಶ್ ಕಾಳಪ್ಪರವರಾಗಿದ್ದಾರೆ. ಇವರು ಕರ್ನಾಟಕಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಆಸ್ತಿ ಎಂದರೆ ಅದು ಖಂಡಿತವಾಗಿಯೂ ಅತಿಶಯೋಕ್ತಿಯಾಗಲಾರದು. ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಓದಿರಿ: www.kannadamedia.com ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

Advertisement
Advertisement
Recent Posts
Advertisement