Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯದಿಂದಾಗಿ ಕೊರೊನಾ ಹರಡುವಿಕೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಟು ಸ್ಥಾನಕ್ಕೆ ಏರಿದೆ: ಸಲೀಂ ಅಹಮದ್

Advertisement

Kannada Media News. Udupi: ಕೊರೊನಾ ನಿಯಂತ್ರಣದಲ್ಲಿ ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಯಡಿಯೂರಪ್ಪ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಆ ವೈಫಲ್ಯದ ಪರಿಣಾಮದಿಂದಾಗಿ ಕೊರೊನಾ ಹರಡುವಿಕೆಯಲ್ಲಿ ವಿಶ್ವದಲ್ಲೇ ನಂಬರ್ ಟು ಸ್ಥಾನಕ್ಕೆ ಭಾರತ ಜಿಗಿದಿದೆ. ಕೊರೊನಾ ಸಂಕಷ್ಟದ ಸಮಯವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯದ ಯಡಿಯೂರಪ್ಪ ಸರಕಾರ ಕೊರೊನಾ ಸಾಮಗ್ರಿಗಳ ಖರೀದಿಯಲ್ಲಿ ಕನಿಷ್ಠ ಎರಡು ಸಾವಿರ ಕೋಟಿ ರೂ.ಗಳ ಭ್ರಷ್ಟಾಚಾರ ನಡೆಸಿದೆ. ಆ ಕುರಿತು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ರಾಜ್ಯಾದ್ಯಂತ ಲೆಕ್ಕ ಕೊಡಿ, ಉತ್ತರ ಕೊಡಿ ಮುಂತಾದ ಅಭಿಯಾನ ನಡೆಸಿದರೂ ಸರಕಾರ ಆ ಕುರಿತು ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಅವರು ಆದಿತ್ಯ ವಾರ ಉಡುಪಿಯ ಅಜ್ಜರಕಾಡುವಿನ ರಾಜೀವ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಸದಾ ಕೊರೊನಾ, ನೆರೆ ಮುಂತಾದ ಜನರ ಕಷ್ಟಗಳಿಗೆ ಸ್ಪಂಧನೆ ನೀಡುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿಯೂ ಕೂಡಾ ಕಾಂಗ್ರೆಸ್ ರಾಜ್ಯಾದ್ಯಂತ ಅಕ್ಕಿ, ಬೇಳೆ ಮುಂತಾದ ಸಾಮಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ಕಡುಬಡವರನ್ನು ಗುರುತಿಸಿ ವಿತರಿಸಿತ್ತು ಮತ್ತು ಇದೀಗ ಆರೋಗ್ಯ ಹಸ್ತ ಕಾರ್ಯಕ್ರಮದಡಿಯಲ್ಲಿ ಜನರ ಆರೋಗ್ಯ ತಪಾಸಣೆಗೆ ಕಾಂಗ್ರೆಸ್ ಮುಂದಾಗಿದೆ. ಈ ಕುರಿತು ನಾಲ್ಕು ನೂರು ಜನ ತಜ್ಞ ವೈಧ್ಯರ ದೊಡ್ಡ ತಂಡ ತಪಾಸಣೆ ನಿರತ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದೆ. ಆ ಪ್ರಕ್ರಿಯೆಯ ಭಾಗವಾಗಿ ಈಗಾಗಲೇ 150ಕ್ಕೂ ಹೆಚ್ಚು ವಿಧಾನ ಸಭಾ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಮನೆಮನೆಗೆ ತೆರಳಿ ತಪಾಸಣೆ ನಡೆಸಿ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ ಎಂದವರು ಹೇಳಿದರು. ಡ್ರಗ್ಸ್ ಮಾಫಿಯಾದಲ್ಲಿ ತನಿಖೆಗೊಳಗಾಗಿ ಬಂಧಿತಳಾಗಿರುವ ಸಿನೇಮಾ ನಟಿ ರಾಗಿಣಿ ಬಿಜೆಪಿಯ ಸಕ್ರೀಯ ಕಾರ್ಯಕರ್ತೆ ಹಾಗೂ ಸ್ಟಾರ್ ಪ್ರಚಾರಕಿಯಾಗಿದ್ದಾರೆ. ಆಕೆಯ ಜೊತೆ ಈ ಪ್ರಕರಣದಲ್ಲಿ ಮತ್ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವುದು ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಾಗಿದೆ. ಈ ಪ್ರಕರಣ ಮತ್ತು ಡಿಜೆ ಹಳ್ಳಿ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಎದ್ದುತೋರುತ್ತಿದೆ. ಇಷ್ಟಾಗಿಯೂ ಯಾವುದೇ ಆಧಾರ ಇಲ್ಲದಿದ್ದರೂ ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಹೆಸರನ್ನು ಎಳೆದು ತಂದು ಅವರ ಕೆಡಿಸುವ ಕುಕೃತ್ಯದಲ್ಲಿ ಬಿಜೆಪಿಯ ಕೆಲ ನಾಯಕರುಗಳು ನಿರತರಾಗಿದ್ದಾರೆ ಆ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ. ನಿಷ್ಪಕ್ಷಪಾತ ತನಿಖೆಗೆ ಕಾಂಗ್ರೆಸ್ ಬೆಂಬಲ ನೀಡಲಿದೆ. ಯಾವುದೇ ಅಪರಾಧಿಯನ್ನು ಕಾಂಗ್ರೆಸ್ ಎಂದೂ ರಕ್ಷಣೆ ಮಾಡಿಲ್ಲ ಮುಂದೆಯೂ ಮಾಡಲಾರದು ಎಂದವರು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ನೆರೆ ಹಾವಳಿಯಿಂದ ಕಳೆದ ವರ್ಷ 50 ಸಾವಿರ ಕೋಟಿ ನಷ್ಟವುಂಟಾಗಿದ್ದರೆ ಈ ಬಾರಿ 10ಕೋಟಿ ನಷ್ಟವುಂಟಾಗಿದೆ ಎಂದು ಮುಖ್ಯಮಂತ್ರಿ ಗಳೆ ಹೇಳಿಕೊಂಡಿದ್ದಾರೆ. ಆದರೆ ಕೇಂದ್ರದಿಂದ ಪರಿಹಾರ ತರುವಲ್ಲಿ ಅಥವಾ ನಮ್ಮದೇ ಹಕ್ಕಿನ ಜಿಎಸ್‌ಟಿ ಪಾಲನ್ನು ತರಲು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ ಎಂ.ಪಿಗಳು ಮತ್ತು ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಹುಲಿಗಳಂತೆ ವರ್ತಿಸುವ ಬಿಜೆಪಿಯ ಈ 25 ಎಂ.ಪಿ ಗಳು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನವರು ದೆಹಲಿಯಲ್ಲಿ ಯಾಕೆ ಇಲಿಗಳಂತೆ ಇರುತ್ತಾರೆ ಎಂದವರು ಪ್ರಶ್ನಿಸಿದ್ದಾರೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ 21ನೆ ತಾರೀಖು ಆರಂಭವಾಗಲಿರುವ ವಿಧಾನಮಂಡಲ ಅಧಿವೇಶದಲ್ಲಿ ಕೇಳಲು ರಾಜ್ಯ ಸರ್ಕಾರದ ವೈಫಲ್ಯ, ಭೂಸ್ವಾದೀನ ಕಾಯ್ದೆ, ಏಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಮತ್ತು ಸಾವಿರಾರು ಕೋಟಿ ಕಿರೊನಾ ಕಿಟ್ ಖರೀಧಿ ಅವ್ಯವಹಾರಗಳ ಕುರಿತು 1300 ಪ್ರಶ್ನೆಗಳನ್ನು ಸಿದ್ದಗೊಳಿಸಿದೆ. ಆದರೆ ಅಧಿವೇಶನವನ್ನು ಕೇವಲ ಎಂಟು ದಿನಗಳಿಗೆ ಸೀಮಿತಗೊಳಿಸುವ ಮೂಲಕ ಯಡಿಯೂರಪ್ಪ ಸರ್ಕಾರ ಪಲಾಯನ ವಾದ ಸೂತ್ರ ಅನುಸರಿಸಿತ್ತಿದೆ ಎಂದವರು ಹೇಳಿದರು. ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು, ಕೆಪಿಸಿಸಿ ಪ್ರ. ಕಾರ್ಯದರ್ಶಿ ಗಫೂರ್, ಮುಖಂಡರುಗಳಾದ ಕಳ್ಳಿಗೆ ತಾರನಾಥ ಶೆಟ್ಟಿ, ನಾಗೇಶ್ ಉದ್ಯಾವರ, ಕೀರ್ತಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ವರೋನಿಕಾ ಕರ್ನಾಲಿಯೋ, ಡಾ. ಸುನಿತಾ ಶೆಟ್ಟಿ, ರೋಷನಿ ಒಲಿವೆರಾ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement
Recent Posts
Advertisement