ಮನುಷ್ಯ ಜೀವನದಲ್ಲಿ ಬದಲಾವಣೆ ಎಂಬುದು ತೀರಾ ಸಹಜ ಭಾರತದ ಚರಿತ್ರೆಯಲ್ಲಿ ಇದಕ್ಕೆ ಅನೇಕ ಪುರಾವೆಗಳು ಸಿಗುತ್ತವೆ ಚಂಡಾಲ ಅಶೋಕ ದೇವನಾಂಪ್ರಿಯ ಅಶೋಕ ಆದದ್ದೂ ಇದೇ ನೆಲದಲ್ಲಿ, ದರೋಡೆಕೋರ ರತ್ನಾಕರ ವಾಲ್ಮೀಕಿ ಯಾಗಿ ಬದಲಾಗುತ್ತಾರೆ. ಕಳ್ಳತನ ಮಾಡಿದ ಮೋಹನ್ ದಾಸ ಮುಂದೆ ಮಹಾತ್ಮ ಗಾಂಧಿ ಯಾಗಿ ಬದಲಾಗುತ್ತಾನೆ, ಅರಮನೆಯ ಭೋಗ ಲೋಲುಪತೆಯಲ್ಲಿ ಇದ್ದಂತಹ ಸಿದ್ಧಾರ್ಥ ಮುಂದೆ ಬುದ್ಧನಾಗಿ ಬದಲಾಗುತ್ತಾನೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಬದಲಾವಣೆಯೆಂಬುದು ಅನಿವಾರ್ಯ ಹೀಗಾಗಿಯೇ ಸ್ವಾಮಿ ವಿವೇಕಾನಂದರು ಹೇಳಿದ್ದರು EVERY SAINT HAD A PAST , EVERY SINNER HAS A FUTURE , (ಪ್ರತಿ ಸಂತನಿಗು ಒಂದು ಭೂತ ಕಾಲವಿದೆ ಮತ್ತು ಪಾಪಿಗೂ ಮುಂದೆ ಭವಿಷ್ಯವಿದೆ)
ಈ ಮಾತು ಅನೇಕರ ಜೀವನದಲ್ಲಿ ಖಂಡಿತವಾಗಿ ಸತ್ಯವಾಗಿರುತ್ತದೆ ನನ್ನ ಬದುಕಿನಲ್ಲಿ ಕೂಡ ಇದು ಸತ್ಯ...
ಕುವೆಂಪು ಮತ್ತು ಗಾಂಧಿಯನ್ನು ಓದುವ ಮುನ್ನ ನನಗೂ ಕೂಡ ಕೋಮುವಾದದ ಪಿತ್ತ ನೆತ್ತಿಗೇರಿತ್ತು ಮತ್ತು ಹಲವಾರು ಹುಚ್ಚುತನಗಳನ್ನು ತಲೆಕೆಡಿಸಿಕೊಂಡವನಿದ್ದೆ ಆದರೆ ಒಮ್ಮೆ ಕುವೆಂಪು, ಗಾಂಧಿ ಇವರು ನನ್ನ ಬದುಕನ್ನು ಹೊಕ್ಕಿದಾಗ ನನಗೆ ಅರ್ಥವಾಯಿತು ನಿಜವಾದ ಹಿಂದೂ ಧರ್ಮದ ಪ್ರತಿಪಾದಕರು ಎಂದರೆ ಶ್ರೀರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಗಾಂಧೀಜಿಯವರ ಬದುಕು, ರಮಣ ಮಹರ್ಷಿಗಳು, ನಮಗೆ ಧರ್ಮಗುರುಗಳೇ ಹೊರತು ಧರ್ಮದ ಬಗ್ಗೆ ವಿಷದ ಬೀಜವನ್ನು ಬಿತ್ತುವವರಲ್ಲ ಎಂದು .
ಹಿಂದೂ ಧರ್ಮ ಎಂದರೆ ಸತ್ಯಾ , ಅಸ್ಥೆಯ ,ಅಪರಿಗ್ರಹ , ಯಮ, ನಿಯಮ ,ಆಸನ, ಪ್ರಾಣಾಯಾಮ, ಜಪ, ಧ್ಯಾನಗಳೇ ಹೊರತು ಯಾವುದೇ ಕೋಮುವಾದಿ ವಿಚಾರಗಳು ಅಥವಾ ಮುಸ್ಲಿಮರನ್ನು, ಕ್ರಿಸ್ತರನ್ನು ದ್ವೇಷಿಸುವುದಾಗಲಿ ಧರ್ಮದ ಲಕ್ಷಣವಲ್ಲ ಎಂಬುದು ಸ್ಪಷ್ಟವಾಗಿ ಅರಿವಾಯಿತು
ಇಂದು ಎಷ್ಟು ಜನ ಹಿಂದೂ-ಮುಸ್ಲಿಂ ಎಂದು ಹೊಡೆದಾಡಿ ವಾದಿಸುವುದು ನೋಡಿದಾಗ ಅದರ ಬಗ್ಗೆ ನನಗೆ ಒಂದು ರೀತಿಯ ಅಸಹ್ಯ ಉಂಟಾಗುತ್ತದೆ , ನನ್ನ ಮನಸಿನಲ್ಲಿ ಬೇಸರ ಆಗುತ್ತದೆ ಆದರೆ ಒಂದು ಕಾಲದಲ್ಲಿ ನನ್ನ ಅಜ್ಞಾನದಿಂದ ಮತ್ತು ಕೋಮುವಾದವೇ ಧರ್ಮ ಎಂಬ ಭ್ರಮೆಯಿಂದ ಅನೇಕ ಬಾರಿ ಅನ್ಯಧರ್ಮೀಯರ ಟೀಕಿಸಿದ್ದೆ ಮತ್ತು ಭಾಷಣಗಳನ್ನು ಮಾಡಿದ್ದೆ !!
ಆದರೆ , ಕುವೆಂಪು ವಿವೇಕಾನಂದ ಗಾಂಧಿ ವಿಚಾರದಿಂದ ಪ್ರಭಾವಿತನಾಗಿ ಮುಂದೆ ಪ್ರತಿ ಜೀವದಲ್ಲಿಯೂ ಶಿವನಿದ್ದಾನೆ ( ಸರ್ವಂ ಖಲ್ವಿದಂ ಬ್ರಹ್ಮ) ಎಂಬ ಮೂಲ ಸತ್ಯವನ್ನೇ ತಿಳಿದೆ, ಬದಲಾದೆ ಮತ್ತು ನನ್ನಲ್ಲಿ ಈ ಅದ್ವೈತ ಜ್ಞಾನ ಮೂಡಲು ಕಾರಣ ರಮಣ್ ಮಹರ್ಷಿಗಳ ನಾನು ಯಾರು ? ಎಂಬ ಪುಸ್ತಕ ಅದನ್ನು ಓದಿದ ದಿನದಿಂದ ನನಗೆ ಪ್ರತಿ ಮುಸ್ಲಿಮನು ,ಪ್ರತಿ ಹಿಂದೂ, ಪ್ರತಿ ಕ್ರಿಶ್ಚಿಯನ್ ಹಾಗೂ ಪ್ರತಿ ಜೀವವು ಕೂಡ ಭಗವದ್ ಅಂಶಗಳಂತೆ ಕಾಣುತ್ತಾರೆ ಎಲ್ಲ ಜೀವಿಗಳು ದೇವರ ಮಕ್ಕಳೆಂಬ ಭವ ಮೂಡಿದರೆ ಅವನು ಹಿಂದೂವೂ ಮುಸಲ್ಮಾನನೋ ಅಥವಾ ಇನ್ನೂ ಯಾವುದೋ ಜಾತಿಯವನೂ ಅವರನ್ನು ಕಂಡಾಗ ನಿಮ್ಮ ಹೃದಯದಲ್ಲಿ ದ್ವೇಷ ಹೇಗೆ ಬರಲು ಸಾಧ್ಯ ? ಆದ್ದರಿಂದಲೇ ಅಲ್ಲವೇ ನಮ್ಮ ಕವಿಗಳು" ಮನುಷ್ಯ ಕುಲ ತಾನೊಂದೆ ವಲಂ" ಎಂದು ಸಾರಿದ್ದು
If u cannot see God in man know that you are not in the path of truth ಎಂಬ ಸ್ವಾಮಿ ವಿವೇಕಾನಂದರ ಮಾತು ಆದರ್ಶ ಆಯ್ತು ಕುವೆಂಪು ಅವರ "ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರ ಬನ್ನಿ" ಎಂದು ಕರೆ ನನ್ನ ಹೃದಯ ಹೊಕ್ಕಿದಂದು ಎಲ್ಲ ಕೋಮುಭಾವನೆ ಮತ್ತು ಮತಮೌಢ್ಯ ಗಳು ನನ್ನಿಂದ ಕಳಚಿಬಿದ್ದವು ಅಲ್ಲಿಯವರೆಗೂ ಕೆಲವು ಕೋಮುವಾದಿ ನಿಲುವುಗಳನ್ನು ಸಮರ್ಥಿಸುತ್ತಿದ್ದ ಮತ್ತು ಭಾಷಣ ಮಾಡುತ್ತಿದ್ದ ನಾನು ವಿಶ್ವಮಾನವತೆಯ ಮತ್ತು ಜೀವ-ಭಾವ ಶಿವ ಸೇವಾ ಎಂಬ ಗಾಂಧಿ ಕುವೆಂಪು ವಿವೇಕಾನಂದರ ಮಾರ್ಗದಿಂದ ಸ್ಪೂರ್ತಿ ಪಡೆದೆ ಅದಾದ ನಂತರ ಒಂದು ಕಾಲೇಜಿನಲ್ಲಿ ಪ್ರಾಂಶುಪಾಲ ಆಗಿ ಸುಮಾರು ಮೂರು ವರ್ಷಗಳ ಕಾಲ ಯಾವುದೇ ರಾಜಕೀಯ ಹಾಗೂ ಸಾರ್ವಜನಿಕ ಭಾಷಣ ಹೋರಾಟ ಇವೆಲ್ಲದರಿಂದಲೂ ದೂರವಿದ್ದು ಅಂತರ್ಮುಖಿ ಯಾಗಲು ಪ್ರಯತ್ನಿಸಿದೆ ಮತ್ತು ಕುರಾನ್, ಬೈಬಲ್ ,ಉಪನಿಷತ್ತು ಭಗವದ್ಗೀತಾ ಗ್ರಂಥಗಳನ್ನು ಕೇವಲ ಓದುವುದಲ್ಲ ಅದರಂತೆ ಬದುಕಲು ಪ್ರಯತ್ನಿಸಿದೆ ಮತ್ತು ಭಾರತ ದೇಶದ ಇತಿಹಾಸವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಲಾರಂಭಿಸಿದೆ ಆಗಲೇ ನನಗೆ ತಿಳಿದದ್ದು ಇಲ್ಲಿವರೆಗೂ ನಾನು ಕೇಳಿದ ಮತ್ತು ಹೇಳಿದ್ದ ಇತಿಹಾಸದ ಕಥೆಗಳನೇಕವು ಸುಳ್ಳು ಎಂದು .....
ಮತ್ತು ಈ ನಡುವೆ ಮಂಗಳೂರು ಚರ್ಚ್ ಅಟ್ಯಾಕ್ ಆದಿಯಾಗಿ ಅನೇಕ ಹೋರಾಟಗಳು ಹಾಗೂ ಬಜರಂಗದಳ ಎಂಬ ಸಂಘಟನೆಯನು ರಾಜ್ಯದಲ್ಲಿ ಕಟ್ಟಿ ಮೆರೆದಿದ್ದ ಮಹೇಂದ್ರಕುಮಾರ್ ಇದೆಲ್ಲವೂ ತಪ್ಪು ಎಂದು ತಿಳಿದು ಎಲ್ಲ ಮನುಷ್ಯರಂತೆ ಎಲ್ಲರನ್ನು ಪ್ರೀತಿಸುತ್ತಾ ಬದುಕುವುದೇ ದೊಡ್ಡದು ಎಂದು ತಿಳಿದು ಹೊರಬಂದಿದ್ದರು ಅವರ ಒಡನಾಟ ನನ್ನ ತಲೆಯಲ್ಲಿದ್ದ ಮೋದಿ ಎಂಬ ಅವತಾರ ಪುರುಷನಿಂದ ಮಾತ್ರ ಭಾರತದ ಉದ್ಧಾರ ಎಂಬ ನನ್ನ ಭ್ರಮಾ ಲೋಕದ ಕಲ್ಪನೆ ಗಳು ಪಟಪಟನೆ ಮುರಿದು ನೆಲಕ್ಕುರುಳಿ ಹೋದವು ಮತ್ತು ಎಲ್ಲಾ ಪಕ್ಷಗಳು ರಾಜಕಾರಣವನ್ನೇ ಮಾಡುತ್ತವೆ ಕೆಲವು ಜಾತಿ ಹೆಸರಿನಲ್ಲಿ ಮತ್ತು ಕೆಲವು ಧರ್ಮದ ಹೆಸರಿನಲ್ಲಿ ಮತ್ತು ಮನುಷ್ಯರ ಭಾವನೆಗಳನ್ನು ಕೆರಳಿಸಿ ಆಟವಾಡುತ್ತಿದೆ ಎಂಬುದು ನನಗೆ ಬೆಳಕಿನಷ್ಟು ಸ್ಪಷ್ಟವಾಗಿ ಕಂಡಿತ್ತು ಆದ್ದರಿಂದಲೇ ನಾನು ವೈಚಾರಿಕವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಲೇ ಬಂದೆ 2018ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಅಂತೂ ನಾನು ಮತ್ತು ಮಹೇಂದ್ರ ಕುಮಾರ್ ಕಾಂಗ್ರೆಸ್ ಪಕ್ಷದ ಪರವಾಗಿ ಬಹಿರಂಗವಾಗಿ ಪ್ರಚಾರ ಮಾಡಿದೇವು
ತದನಂತರ 2019ರ ಲೋಕಸಭಾ ಚುನಾವಣೆಯಲ್ಲೂ ಕೂಡ ನಮ್ಮ ಸೈದ್ಧಾಂತಿಕ ಬದ್ಧತೆಯನ್ನು ಅರಿತಿದ್ದ ಶ್ರೀಮಾನ್ ಎಚ್ ಕೆ ಪಾಟೀಲರು ನಮ್ಮನ್ನು ಕರೆದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಪೂರ್ಣ ಜವಾಬ್ದಾರಿಯನ್ನು ಕೊಟ್ಟರು ನಾನು ಅದನ್ನು ಅತ್ಯುತ್ತಮವಾಗಿ ನಿಭಾಯಿಸಿದ ಎಂದು ಬೆನ್ನುತಟ್ಟಿದ್ದರು
ಆ ಸಂದರ್ಭದಲ್ಲಿಯೇ ನನ್ನ ವೈಚಾರಿಕತೆ ಸಾಮಾಜಿಕ ನಿಲುವುಗಳು ಗಳನ್ನು ಕಂಡು ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಕೂಡ ಮೆಚ್ಚಿಕೊಂಡರು ಮತ್ತು ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕೊಟ್ಟರು ನನಗೆ ಆಶ್ಚರ್ಯವಾಗುವುದೆನೆಂದರೆ ಹಿಂದೆ ಅನೇಕಬಾರಿ ಕಾಂಗ್ರೆಸ್ ಪಕ್ಷವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದೆ ಒಂದು ಕಾಲದಲ್ಲಿ ನಾನು ರಾಹುಲ್ ಗಾಂಧಿಯನ್ನು ಪಪ್ಪು ಪಪ್ಪೂ ಎಂದಿದ್ದೆ.
ಸಾರ್ವಜನಿಕವಾಗಿಯೇ ಶ್ರೀಮಾನ್ ಸಿದ್ದರಾಮಯ್ಯ ಮನಮೋಹನಸಿಂಗ್ ಶ್ರೀಮತಿ ಸೋನಿಯಾಗಾಂಧಿ ಅಂತಹ ನಾಯಕರನ್ನು ಟೀಕಿಸಿದೆ ಆದರೆ ನನ್ನ ಬಲಪಂಥೀಯಪೂರ್ವಾಶ್ರಮದ ತಪ್ಪುಗಳನ್ನು ಎಂದಿಗೂ ನೆನಪಿನಲ್ಲಿಡದೆ its past don't worry ಬದಲಾವಣೆ ಜಗದ ನಿಯಮ ಎಂದು ಬೆಂಬಲಿಸುತ್ತಾರೆ.
ಮನುಷ್ಯ-ಮನುಷ್ಯರು , ಅವರು ಯಾವುದೇ ಜಾತಿಯಾಗಿದ್ದರೂ , ಅವನು ಯಾವುದೇ ಧರ್ಮ ವಾದರು ಸಮಾನವಾಗಿ ಕಾಣಬೇಕು ಪ್ರೀತಿಸಬೇಕು ಇದೆ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಈ ಭಾವವನ್ನು ಯಾರು ಒಪ್ಪುತ್ತರೋ ಅವರೆಲ್ಲ ನಮ್ಮವರು ಎಂದು ಬೆನ್ನುತಟ್ಟಿದ್ದು ಇದೇ ಕಾಂಗ್ರೆಸ್,ಇದೇ ಕಾಂಗ್ರೆಸ್ ...
ಗೆಳೆಯರೇ ನನ್ನಂಥ ಅನೇಕ ಜನರಿಗೆ ಕಾಲೇಜು ಕಾಲದಲ್ಲಿ ನೆತ್ತಿಗತ್ತಿದ್ದ ಧರ್ಮದ ಅಫಿಂ ಇಳಿದು
ಇಳಿದು .... ಬಿಜೆಪಿಯ ಹುಸಿ ದೇಶಭಕ್ತಿ, ಸುಳ್ಳು, ದ್ವಂದ್ವಗಳು ಸಾಕಾಗಿದೆ...
ಬದಲಿಗೆ ಹೊಟ್ಟೆಗೆ ಅನ್ನ ಮತ್ತು ಉದ್ಯೋಗ ಕೊಡಿ ಎಂದು ಕೈ ಚಾಚುವಾಗ ಜ್ಞಾನೋದಯ ಆಗುತ್ತದೆ .... ಆದರೆ ಆದರೆ ಇಂಥ ಅನೇಕ ಜನ ಬಹಿರಂಗವಾಗಿ ಕಾಂಗ್ರೆಸ್ಸಿನ ಕಡೆಗೆ ಬರುವುದಿಲ್ಲ ಏಕೆಂದರೆ ತಮ್ಮ ಪೂರ್ವಾಶ್ರಮದಲ್ಲಿ ಕೋಮುವಾದಿ ಅಥವಾ ಮೋದಿ ಭ್ರಮೆ ಇದ್ದವರು ಅದರಿಂದ ಬೆಸತ್ತಿ ಕಾಂಗ್ರೆಸ್ ಸೆರುದಕ್ಕು ಇಚ್ಛೆ ಇರುತ್ತೆ, ಆದ್ರೆ ಕಾಂಗ್ರೆಸ್ ಸೇರಲು ತಮ್ಮ ಪೂರ್ವಾಶ್ರಮದ ಬಗ್ಗೆ ಇರುವ ಅಳುಕಿನಿಂದಲೇ ಇತ್ತ ಬಾರದೆ ಹೋಗುವುದು ಕಂಡಿರುವೆ ಹೀಗಾಗಿ ನಿಮಗೆಲ್ಲ ಒಂದು ಕಿವಿಮಾತು ,. ನಿಮ್ಮಲ್ಲಿ ಪ್ರಾಮಾಣಿಕತೆ, ಜಾತ್ಯತೀತ ಸಿದ್ಧಾಂತದ ಬದ್ಧತೆ , talent ಮತ್ತು ಕಾಂಗ್ರೆಸ್ ನ ಮಾನವತಾ ವಾದದಲ್ಲಿ ನಂಬಿಕೆ ಇದ್ದವರು ಧಾರಾಳವಾಗಿ ಬನ್ನಿ.
ಮಗು ಚಿಕ್ಕಾದಿದ್ದಗ ತಾಯಿ ಮಡಿಲಲ್ಲಿ ಮಲ ವಿಸರ್ಜನೆ ಮಾಡಿರುತ್ತಾನೆ ಆದ್ರೆ ಒಮ್ಮೆ ಬುದ್ದಿ ಬಂದಮೇಲೆ ಹಾಗೆ ಮಾಡಲಾರನು ಅಲ್ಲವೇ ? ಹಾಗೆಯೇ ಎಂದೋ ನೀವು ಮಾಡಿದ ತಪ್ಪಿಗೆ ಇಂದು ಕೊರಗುತ್ತಾ ದೂರ ಕೂರಬೇಡಿ "ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ " ಪ್ರಾಮಾಣಿಕವಾಗಿ ಭಾರತದ ಸಂವಿಧಾದ ಬಗ್ಗೆ ಗೌರವ ಇಟ್ಟುಕೊಂಡು ಕಾಂಗ್ರೆಸ್ ಪ್ರತಿಪಾದಿಸುವ ಮಾನವೀಯ ಸರ್ವಧರ್ಮ ಸಮ ಭಾವದ ಸಿದ್ಧಾಂತ ಒಪ್ಪುವಿರಾದ್ರೆ ಕಾಂಗ್ರೆಸ್ ಬಾಗಿಲು ನಿಮಗೆ ಮುಕ್ತವಾಗಿದೆ ಎಂಬುದಕ್ಕೆ ಇಲ್ಲಿ ನನಗೆ ಮತ್ತು ಸುಧೀರ್ ಕುಮಾರ್ ಮುರೋಲಿ ಅವರಿಗೆ ಮಾನ್ಯ ಅಧ್ಯಕ್ಷರಾದ ಡಿ ಕೆ ಶಿಕುಮಾರ್ ಅವರು ಬದಲಾದ ನಮ್ಮ ವಿಚಾರಗಳಿಗೆ ಮನ್ನಣೆ ನೀಡಿ ನಮ್ಮಂಥವರು ಅನೇಕರಿಗೆ ಯೋಗ್ಯ ಅವಕಾಶ ಮತ್ತು ಜವಾಬ್ದಾರಿ ನೀಡಿರುವ ಉದಾಹರಣೆಗಳಿವೆ.