ಕೆಪಿಸಿಸಿ ವಕ್ತಾರರಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇಮಕ.
ಕೆಪಿಸಿಸಿ ವಕ್ತಾರರಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇಮಕ.
Advertisement
ಮಾಜಿ ಸಚಿವ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ರವರನ್ನು ಕೆಪಿಸಿಸಿ ವಕ್ತಾರರನ್ನಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ನೇಮಕಗೊಳಿಸಿದ್ದಾರೆ.+
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ 2008 ಮತ್ತು 2013ರಲ್ಲಿ ಎರಡು ಅವಧಿಗೆ ಶಾಸಕರಾಗಿ ಆಯ್ಕೆಗೊಂಡಿದ್ದ ಕಿಮ್ಮನೆ ರತ್ನಾಕರ್ ರವರು ಸಿದ್ದರಾಮಯ್ಯ ನವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಅತ್ಯಂತ ಜನಪ್ರಿಯತೆ ಪಡೆದಿದ್ದಾರೆ. ದಶಕಗಳ ಕಾಲ ನ್ಯಾಯವಾದಿಯಾಗಿ ಹೆಸರುವಾಸಿಯಾಗಿದ್ದ ಶ್ರೀಯುತರು 1978 ಮತ್ತು 1983 ರಲ್ಲಿ ಎರಡು ಅವಧಿಗೆ ತೀರ್ಥಹಳ್ಳಿ ತಾಲೂಕು ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಹಾಗೂ 1982 ಮತ್ತು 2005ರಲ್ಲಿ ತೀರ್ಥಹಳ್ಳಿ ಬಾರ್ ಅಸೋಸಿಯೇಷನ್ ನ ಅಧ್ಯಕ್ಷರಾಗಿದ್ದರು.
ಸಾಮಾಜಿಕ ಕಳಕಳಿ, ಸರಳ ವ್ಯಕ್ತಿತ್ವ, ಜನಪರ ಚಿಂತನೆಯ, ಗಾಂಧಿ ವಾದಿ ಕಿಮ್ಮನೆಯವರು ಉತ್ತಮ ವಾಗ್ಮಿಯಾಗಿದ್ದು ಕಾಂಗ್ರೆಸ್ ಸಿದ್ದಾಂತದ ಕುರಿತು ಅಪಾರ ಜ್ಞಾನ ಮತ್ತು ಕಾಳಜಿ ಹೊಂದಿದರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಬಿಡುಗಡೆಗೊಳಿಸಿದ ಆದೇಶ ಪತ್ರದಲ್ಲಿ ಕಿಮ್ಮನೆ ರತ್ನಾಕರ್ ರವರಿಗೆ ಇರುವ ಅನುಭವ, ತಿಳುವಳಿಕೆಗಳೊಂದಿಗೆ ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯವನ್ನು ಗಮನಿಸಿ ಈ ಹುದ್ದೆಗೆ ನೇಮಕ ಮಾಡಲಾಗಿದೆ' ಎಂದು ವಿವರಿಸಲಾಗಿದೆ.