Advertisement

ಅಯೋದ್ಯೆ ವಿವಾದ ಬಗೆಹರಿಯಿತು ಎಂದರೆ ಮಥುರಾ ವಿವಾದ ಆರಂಭಿಸುತ್ತಿದೆಯೇ ಬಿಜೆಪಿ?

Advertisement

ಅಯೋದ್ಯೆಯ ರಾಮ ಜನ್ಮಭೂಮಿ ವಿವಾದವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡ ಕಾರಣಕ್ಕೆ ನಿಖರವಾಗಿ 1992ರಿಂದೀಚೆಗೆ ದೇಶಾದ್ಯಂತ ನೂರಾರು ಕೋಮು ಗಲಭೆಗಳು ನಡೆದು ಸಾವಿರಾರು ಜನರ ಸಾವಿಗೆ ಕಾರಣವಾದದ್ದು ಮತ್ತದು ದೇಶದೊಳಗಿನ ಸೌಹಾರ್ಧತೆ, ಶಾಂತಿಯ ಸಂಪೂರ್ಣ ನಾಶಕ್ಕೆ ಕಾರಣವಾದ ವಿಚಾರ ದೇಶದ ಪ್ರಜ್ಞಾವಂತರೆಲ್ಲರಿಗೂ ತಿಳಿದುದೆ ಆಗಿದೆ. ಆ ಕಾರಣಕ್ಕಾಗಿಯೇ ಸುಪ್ರೀಂ ಕೋರ್ಟ್ ರಾಮಮಂದಿರ ತೀರ್ಪಿನ ವೇಳೆ "ಈ ಪ್ರಕರಣದ ಹೊರತಾಗಿ ಮಥುರಾ, ಕಾಶಿ ಮುಂತಾದ ದೇಶದ ಯಾವುದೇ ಪ್ರದೇಶಗಳಲ್ಲಿ ಧರ್ಮದ ಹೆಸರಿನಲ್ಲಿ ಅಯೋದ್ಯೆ ಮಾದರಿಯ ವಿವಾದ ಸೃಷ್ಟಿಸಬಾರದು. ತಕರಾರುಗಳೇನಿದ್ದರೂ ಸ್ಥಳೀಯವಾಗಿ ಬಗೆಹರಿಸಿಕೊಳ್ಳಬೇಕು" ಎಂದು ಸ್ಪಷ್ಟವಾಗಿ ಸೂಚಿಸಿತ್ತು. ಆದರೆ ಅಷ್ಟರ ಹೊರತಾಗಿಯೂ, ಇದೀಗ ಶ್ರೀಕೃಷ್ಣ ಜನ್ಮಸ್ಥಳದ ಹೆಸರಿನಲ್ಲಿ ಮಥರಾದಲ್ಲಿ ಹೊಸ ವಿವಾದವನ್ನು ಸೃಷ್ಟಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹಾಗೆ ಅಂತಹ ಪ್ರಶ್ನೆ ಮೂಡಲು ಕಾರಣವಾದ ಘಟನೆ ಮಥುರಾ ಕೋರ್ಟಿನಲ್ಲಿ 'ಭಗವಾನ್ ಶ್ರೀ ಕೃಷ್ಣ ವಿರಾಜಮಾನ್' ಎಂಬ ಸಂಘಟನೆಯ ಪರವಾಗಿ ವಿಷ್ಣು ಜೈನ್ ಹಾಗೂ ಹರಿಶಂಕರ್ ಎಂಬ ವಕೀಲರುಗಳು ಸಿವಿಲ್ ದಾವೆ ಹೂಡಿರುವ ಪ್ರಕರಣ ಮತ್ತು ಅಲ್ಲಿನ ಪುರಾತನ ದೇಗುಲದ ಹತ್ತಿರದಲ್ಲಿ ಈ ತನಕ ಸೌಹಾರ್ಧತೆಯ ಪ್ರತೀಕವಾಗಿ ತಲೆಯೆತ್ತಿ ನಿಂತಿದ್ದ ಶಾಹಿ ಈದ್ಗಾ ಮಸೀದಿಯನ್ನು "ಅದು ಜೌರಂಗಜೇಬನ ಕಾಲದಲ್ಲಿ ದೇವಸ್ಥಾನವನ್ನು ಕೆಡವಿ ಅಕ್ರಮವಾಗಿ ನಿರ್ಮಿಸಿದ ಮಸೀದಿಯಾಗಿದೆ ಆ ಕಾರಣಕ್ಕಾಗಿ ಅದನ್ನು ತೆರವು ಮಾಡಬೇಕು, ದೇವಸ್ಥಾನದ ಪಾರ್ಶ್ವದ 13.37ಎಕರೆ ಜಾಗವನ್ನು ಸಂಪೂರ್ಣವಾಗಿ ದೇವಸ್ಥಾನದ ಆಡಳಿತ ಮಂಡಳಿಯ ಸುಪರ್ದಿಗೆ ಹಸ್ತಾಂತರಿಸಬೇಕು" ಎಂಬ ಬೇಡಿಕೆಯನ್ನು ಆ ಅರ್ಜಿಯ ಮೂಲಕ ಮಂಡಿಸಲಾಗಿರುವ ಪ್ರಕರಣ ಮತ್ತು ಅದರ ಬೆನ್ನಿಗೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳಾಗಿವೆ ಅಯೋದ್ಯೆ ರಾಮ ಮಂದಿರ ವಿವಾದ ಕೋರ್ಟಿನ ಕಟಕಟೆಯಲ್ಲಿದ್ದ ಸಂಧರ್ಭದಲ್ಲಿ ಬಿಜೆಪಿ ಅದನ್ನು ರಾಜಕೀಯಕ್ಕೆ ಬಳಸಿಕೊಂಡು ದೇಶಾದ್ಯಂತ ರಥಯಾತ್ರೆ ಏರ್ಪಡಿಸಿ, ಸ್ವಾತಂತ್ರ್ಯಾ ನಂತರ ನಿರ್ಮಾಣಗೊಂಡಿದ್ದ ಹಿಂದೂ ಮುಸಲ್ಮಾನರ ನಡುವಿನ ಸೌಹಾರ್ಧತೆಯನ್ನು ದೇಶದಾದ್ಯಂತ ಅಲ್ಲಸಲ್ಲದ ವದಂತಿಗಳನ್ನು ಹರಡುವ ಮೂಲಕ ನಾಶಗೊಳಿಸಿ, ಕೋಮು ಗಲಭೆಗೆ ಕಾರಣವಾದ ಸಂಧರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ "ದೇಶದ ಕಾನೂನನ್ನು ಗೌರವಿಸುವಂತೆ ಮತ್ತು ಅಯೋದ್ಯೆ ಕುರಿತಾದ ಕೋರ್ಟ್ ತೀರ್ಪು ಪ್ರಕಟಗೊಳ್ಳುವ ತನಕ ಕಾಯುವಂತೆ, ಬಿಜೆಪಿ ಮತ್ತದರ ಸಹ ಸಂಘಟನೆಗಳು ಹರಡುವ ದುರುದ್ದೇಶ ಪೂರಿತವಾದ ವದಂತಿಗಳನ್ನು ನಂಬದಂತೆ ಮತ್ತು ಆ ಮೂಲಕ ದೇಶದೊಳಗಿನ ಶಾಂತಿ, ಸೌಹಾರ್ಧತೆಯನ್ನು ಕಾಪಾಡುವಂತೆ" ಪರಿಪರಿಯಾಗಿ ವಿನಂತಿಸಿತ್ತು. ಹಾಗೆಯೇ ಅಯೋದ್ಯೆಯ ಸ್ಥಳೀಯ ರಾಮ ಮಂದಿರ ನಿರ್ಮಾಣ ಸಮಿತಿ ಮತ್ತು ಅಲ್ಲಿನ ಬಾಬರಿ ಮಸೀದಿಯ ಆಡಳಿತ ಸಮಿತಿ ಸಹಾ ಜಂಟಿಯಾಗಿ "ಅಯೋದ್ಯೆ ವಿವಾದವನ್ನು ಬರಲಿರುವ ಕೋರ್ಟ್ ತೀರ್ಪಿನ ಆದಾರದ ಮೇಲೆ ಸ್ಥಳೀಯವಾಗಿ ಬಗೆಹರಿಸಿಕೊಳ್ಳುವುದಾಗಿ ಮತ್ತು ಇದನ್ನು ಯಾವುದೇ ಕಾರಣಕ್ಕೂ ದೇಶಾದ್ಯಂತ ಕೋಮು ಗಲಭೆಗೆ ಕಾರಣವಾಗಿಸಬಾರದು" ಎಂದು ಕೂಡ ಆ ಕಾಲದಲ್ಲೇ ದೇಶದ ಜನರಲ್ಲಿ ವಿನಂತಿಸಿತ್ತು. ಆದರೆ ಅಂತಹ ಸಾಮಾಜಿಕ ಕಾಳಜಿಯ ಯಾವುದೇ ವಿನಂತಿಗಳಿಗೆ ಸೊಪ್ಪು ಹಾಕದ ಬಿಜೆಪಿ ಮತ್ತದರ ಸಹ ಸಂಘಟನೆಗಳು 'ಕಾಂಗ್ರೆಸ್ ಪಕ್ಷ ರಾಮಮಂದಿರ ನಿರ್ಮಾಣಕ್ಕೆ ವಿರೋಧವಾಗಿದೆ. ಅದು ಮುಸ್ಲಿಮರ ಮತಗಳಿಗಾಗಿ ಅವರ ಓಲೈಕೆಯಲ್ಲಿ ತೊಡಗಿದೆ' ಎಂಬಂತಹ ಕಪೋಲಕಲ್ಪಿತ ಸುದ್ದಿಯನ್ನು ದೇಶಾದ್ಯಂತ ಹರಡುವಲ್ಲಿ ಯಶಸ್ವಿಯಾಗಿತ್ತು ಮತ್ತು ಆ ಮೂಲಕ ಅಧಿಕಾರಕ್ಕೂ ಬಂದಿತ್ತು. ಆದರೆ ಇತ್ತೀಚೆಗೆ ಅಯೋದ್ಯೆ ಕುರಿತಾದ ಕೋರ್ಟ್ ತೀರ್ಪು ಪ್ರಕಟವಾದ ಸಂದರ್ಭದಲ್ಲಿ ಕಾಂಗ್ರೆಸ್ ಆ ತೀರ್ಪನ್ನು ಸ್ವಾಗತಿಸಿತ್ತು ಮತ್ತು ಈ ವಿಚಾರದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಸೌಹಾರ್ದ ಕಾಪಾಡುವಂತೆ ದೇಶದ ಜನರಿಗೆ ಕರೆ ಕೊಡುವ ಮೂಲಕ ದೇಶದ ಕಾನೂನು ಪರಿಪಾಲನೆ ನಮ್ಮ ಆದ್ಯ ಕರ್ತವ್ಯ ಎಂಬ ಸ್ಪಷ್ಟವಾದ ಸಂದೇಶ ಸಾರಿತ್ತು. ಹಾಗೆಯೇ ಅಯೋದ್ಯೆ ವಿವಾದ ಸುಖಾಂತ್ಯಗೊಂಡ ಹಿನ್ನೆಲೆಯಲ್ಲಿ ದೇಶದ ಪ್ರಜ್ಞಾವಂತ ಹಿಂದೂ ಮತ್ತು ಮುಸಲ್ಮಾನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಆದರೆ 'ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಲಿ' ಎಂಬಂತೆ ಬಿಜೆಪಿ ಇದೀಗ ಈ ಮೂಲಕ ಮತ್ತೊಂದು ವಿವಾದವನ್ನು ಸೃಷ್ಟಿಸ ಹೊರಟಿದೆ. ಅದಕ್ಕೆ ಸಾಕ್ಷಿ ಎಂಬಂತೆ ‌ಬಿಜೆಪಿ ಮುಖಂಡ ವಿನಯ್ ಕಟಿಯಾರ್ "ಮಥುರಾದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಈದ್ಗಾ ಮಸೀದಿಯನ್ನು ಕೆಡವಲು ಮತ್ತು ಶ್ರೀ ಕೃಷ್ಣ ಜನ್ಮಭೂಮಿಯನ್ನು ಮರಳಿ ಪಡೆಯಲು ಅಗತ್ಯವಿದ್ದಲ್ಲಿ ಹೋರಾಟ ನಡೆಸಲಾಗುವುದು" ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಈ ಪ್ರಕರಣವನ್ನು ಬಿಜೆಪಿ ವಿವಾದವಾಗಿಸಲು ಹೊರಟಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಇಲ್ಲಿ ಪ್ರಶ್ನೆ ಇರುವುದು, ಹಿಗೆಯೇ ಮುಂದುವರಿಯುತ್ತಾ ಹೋದರೆ ಸೃಷ್ಟಿಯಾಗುವ ಕಲುಷಿತ ವಾತಾವರಣದಲ್ಲಿ ದೇಶದೊಳಗೆ ಮತ್ತೆ ಎಂದಾದರೂ 1992ಕ್ಕೂ ಮುಂಚಿನ ಶಾಂತಿ, ಸೌಹಾರ್ಧತೆ ಮೂಡಲು ಸಾಧ್ಯವಿದೆಯೇ? ಶಾಂತಿ ನೆಲಸದೆ, ಸೌಹಾರ್ಧತೆ ಮೂಡದೆ ಇಲ್ಲಿನ ಜನತೆ ಅಭಿವೃದ್ಧಿ ಹೊಂದಲು ಸಾಧ್ಯವೇ? ದೇಶದ ಜನ ಶೈಕ್ಷಣಿಕವಾಗಿ, ಜೌದ್ಯೋಗಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದದೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ? ಅಥವಾ ಇಂತಹ ದೇಶ ವಿರೋಧಿ ರಾಜಕಾರಣಕ್ಕೆ ಕೊನೆಯೆಂಬುವುದೇ ಇಲ್ಲವೇ? ಕೊನೆ ಹಾಡುವುದು ಬೇಡವೇ ಎಂಬುವುದಾಗಿದೆ. ನಿಮಗೆ ಈ ಬರಹ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement