ವಿಧಾನಮಂಡಲದ ಅಧಿವೇಶನವನ್ನು ಮೂರು ವಾರಗಳ ಕಾಲ ಅಂದರೆ ಅಕ್ಟೋಬರ್ 15ರ ವರೆಗೆ ವಿಸ್ತರಿಸಬೇಕೆಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷರಿಗೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಪತ್ರದ ಸಾರಾಂಶ ಇಂತಿದೆ: ಸೆಪ್ಟೆಂಬರ್ 21ರಿಂದ 30ರ ವರೆಗೆ 15ನೇ ವಿಧಾನ ಸಭೆಯ 7ನೇ ಅಧಿವೇಶನದ ಕಾರ್ಯಕಲಾಪಗಳನ್ನು ನಡೆಸಲು ಪ್ರಕಟಣೆ ಹೊರಡಿಸಲಾಗಿದೆ. ಈ ಪ್ರಕಟಣೆಯ ಪ್ರಕಾರ 21ರಿಂದ 25ರ ತನಕ ಮತ್ತು 28ರಿಂದ 30ರ ವರೆಗೆ ( ಕೇವಲ 8ದಿನ)ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ. ಸದರಿ ಅಧಿವೇಶನದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಸುಗ್ರೀವಾಜ್ಞೆಗಳನ್ನು ಒಳಗೊಂಡಂತೆ 35ಕ್ಕಿಂತ ಹೆಚ್ಚು ಮಸೂದೆಗಳನ್ನು ಮಂಡಿಸಲಾಗಿತ್ತಿದೆ ಎಂಬ ಮಾಹಿತಿ ದೊರಕಿದೆ. ಕರ್ನಾಟಕ ರಾಜ್ಯದ ಜನರು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪದೇಪದೇ ಪ್ರವಾಹಗಳು ಬಂದೆರಗುತ್ತಿವೆ. ಕಳೆದ ಮಾರ್ಚ್ ನಿಂದ ಕೋವಿಡ್- 19 ಸಾಂಕ್ರಾಮಿಕವು ಮಾರಣಾಂತಿಕವಾಗಿ ವ್ಯಾಪಿಸಿಕೊಂಡು ರಾಜ್ಯದ ಜನರ ಬದುಕನ್ನು ಹೈರಾಣಾಗಿಸಿದೆ ಮತ್ತು ಸುಮಾರು 6500ಕ್ಕಿಂತ ಹೆಚ್ಚು ಜನ ಈ ಸೋಂಕಿನಿಂದಾಗಿ ಮೃತರಾಗಿದ್ದಾರೆ. ಪದೇಪದೇ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಉಂಟಾಗುತ್ತಿವೆ. ಜೊತೆಯಲ್ಲಿ ಡ್ರಗ್ಸ್‌ನಂತಹ ಅಪಾಯಕಾರಿ ಚಟುವಟಿಕೆಗಳು ರಾಜ್ಯವನ್ನು ಆವರಿಸಿಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಅಧಿವೇಶನವನ್ನು ನಡೆಸಲಾಗುತ್ತಿದೆ. ಆದರೆ ಅಧಿವೇಶನದ ಸಮಯ ಮಾತ್ರ ಯಾವುದಕ್ಕೂ ಸಾಕಾಗುವುದಿಲ್ಲ. ಜನರ ಮೇಲೆ ಕಾಳಜಿ ಇಲ್ಲದೆ ನೆಪ ಮಾತ್ರಕ್ಕೆ ಅಧಿವೇಶನ ನಡೆಸಲು ಉದ್ದೇಶಿಸಿರುವಂತೆ ಕಾಣಿಸುತ್ತಿದೆ. ಹಲವು ಜನ ವಿರೋಧಿಯಾದ ಸುಗ್ರಿವಾಜ್ಞೆಗಳನ್ನು ಚರ್ಚೆಯನ್ನೆ ನಡೆಸದೆ ಅಂಗೀಕಾರ ಪಡೆಯಲು ಪ್ರಯತ್ನಿಸುತ್ತಿರುವುದು ಅತ್ಯಂತ ಜನದ್ರೋಹಿಯಾದ, ಬೇಜವಬ್ದಾರಿಯುತವಾದ ಮತ್ತು ದುಷ್ಟತನದ ಪರಮಾವಧಿಯಂತೆ ಕಾಣುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಅತ್ಯಂತ ಅಸಾಂವಿಧಾನಿಕವಾಗಿ ನಡೆದುಕೊಳ್ಳುತ್ತಿದೆ. ಕರ್ನಾಟಕ ವಿಧಾನ ಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005ರ ಸೆಕ್ಷನ್ 3 ರಂತೆ ಕಡ್ಡಾಯವಾಗಿ 60 ದಿನಗಳ ವರೆಗೆ ಕಡಿಮೆ ಇಲ್ಲದಂತೆ ಪ್ರತಿ ವರ್ಷ ಅಧಿವೇಶನಗಳನ್ನು ನಡೆಸಬೇಕು ಎಂದಿದೆ. ಸೆಕ್ಷನ್ 4ರ ಪ್ರಕಾರ ವರ್ಷದಲ್ಲಿ ಒಟ್ಟು 4 ಅಧಿವೇಶನ ನಡೆಸಬೇಕು. ಜನವರಿಯಲ್ಲಿ 15ದಿನ, ಮಾರ್ಚ್ ನಲ್ಲಿ 20ದಿನ, ಜುಲೈನಲ್ಲಿ 15ದಿನ, ಮತ್ತು ನವೆಂಬರ್‌ನಲ್ಲಿ 10ದಿನ ಅಧಿವೇಶನವನ್ನು ನಡೆಸಬೇಕಾಗುತ್ತದೆ. ಕರ್ನಾಟಕ ವಿಧಾನ ಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005ರ ಸೆಕ್ಷನ್ 3 ರಂತೆ ಕಡ್ಡಾಯವಾಗಿ 60 ದಿನಗಳ ವರೆಗೆ ಕಡಿಮೆ ಇಲ್ಲದಂತೆ ಪ್ರತಿ ವರ್ಷ ಅಧಿವೇಶನಗಳನ್ನು ನಡೆಸಬೇಕು ಎಂದಿದೆ. ಸೆಕ್ಷನ್ 4ರ ಪ್ರಕಾರ ವರ್ಷದಲ್ಲಿ ಒಟ್ಟು 4 ಅಧಿವೇಶನ ನಡೆಸಬೇಕು. ಜನವರಿಯಲ್ಲಿ 15ದಿನ, ಮಾರ್ಚ್ ನಲ್ಲಿ 20ದಿನ, ಜುಲೈನಲ್ಲಿ 15ದಿನ, ಮತ್ತು ನವೆಂಬರ್‌ನಲ್ಲಿ 10ದಿನ ಅಧಿವೇಶನವನ್ನು ನಡೆಸಬೇಕಾಗುತ್ತದೆ. ಆದರೆ ಬಿಜೆಪಿ ಆಡಳಿತದ ಸರ್ಕಾರವು ಸಂಸದೀಯ ವ್ಯವಸ್ಥೆಯನ್ನು ನಿರಂತರವಾಗಿ ಹಾಳುಗೆಡಹುತ್ತಿದೆ. ಅಧಿವೇಶನಗಳನ್ನು ಕರೆದು ಚರ್ಚೆ ನಡೆಸುವುದನ್ನು ನಾಮಕಾವಸ್ಥೆ ಕೆಲಸವೆಂದು ಭಾವಿಸಿ ವರ್ತಿಸುತ್ತಿದೆ. ಕೇವಲ 8 ದಿನಗಳಲ್ಲಿ ಇಷ್ಟೊಂದು ಮಹತ್ವದ ವಿಚಾರಗಳನ್ನು ಚರ್ಚಿಸಲು ಸಾಧ್ಯವಿಲ್ಲ. ಹಾಗಾಗಿ ಈ ಅಧಿವೇಶನವನ್ನು ಕನಿಷ್ಠ 3ವಾರಗಳ ಕಾಲ ಅಂದರೆ ಅಕ್ಟೋಬರ್ 15ರ ವರೆಗೆ ವಿಸ್ತರಿಸಬೇಕೆಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.