ಮಾಜಿ ಸಚಿವ, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್ ರವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಆದೇಶ ಹೊರಡಿಸಿದ್ದಾರೆ.
'ಆದೇಶ ಪತ್ರದಲ್ಲಿ ಯು.ಟಿ ಖಾದರ್ ರವರಿಗೆ ಇರುವ ಅನುಭವ, ತಿಳುವಳಿಕೆಗಳೊಂದಿಗೆ ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯವನ್ನು ಗಮನಿಸಿ ಈ ಹುದ್ದೆಗೆ ನೇಮಕ ಮಾಡಲಾಗಿದೆ' ಎಂದು ವಿವರಿಸಲಾಗಿದೆ.
ಸತತ ನಾಲ್ಕನೆಯ ಅವಧಿಗೆ ಶಾಸಕರಾಗಿ ಆಯ್ಕೆಯಾಗಿರುವ ಯುಟಿ ಖಾದರ್‌ರವರು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಯು.ಟಿ ಫರೀದ್ ರವರ ಪುತ್ರರಾಗಿರುತ್ತಾರೆ. 2013 ರಿಂದ 2018 ರ ವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಜನಪ್ರಿಯತೆ ಪಡೆದಿದ್ದ ಶ್ರೀಯುತರು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದಲ್ಲಿಯೂ ಕೂಡಾ ಸಚಿವರಾಗಿದ್ದರು.
ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಓದಿರಿ: www.kannadamedia.com News