Advertisement

ಟಿ.ಬಿ ಜಯಚಂದ್ರರವರು ಬರದ ಸೀಮೆಯಲ್ಲಿ ಹೇಮಾವತಿ ಹರಿಸಿದ ಭಗೀರಥ: ಬಿ.ಕೆ ಹರಿಪ್ರಸಾದ್

Advertisement

ಜನತೆ ಕುಡಿಯುವ ನೀರಿಗೂ ಪರದಾಡುತಿದ್ದ ಬರದ ನಾಡು ಶಿರಾ ತಾಲೂಕಿಗೆ ಹೇಮಾವತಿಯ ನೀರು ತಂದು ಹಲವಾರು ಬ್ಯಾರೇಜ್ ಮತ್ತು ಚೆಕ್ ಡ್ಯಾಮ್ ನಿರ್ಮಿಸುವ ಮೂಲಕ ಟಿ.ಬಿ ಜಯಚಂದ್ರರವರು ತಾಲೂಕಿನಲ್ಲಿ ಹಸಿರುಕ್ರಾಂತಿ ಮಾಡಿದ್ದಾರೆ. ಆ ಮೂಲಕ ರೈತರ ಬದುಕನ್ನು ಹಸನಾಗಿಸಿದ್ದಾರೆ. ಇದರ ಜೊತೆ ಜೊತೆಗೆ ಶಿರಾ ತಾಲೂಕಿನಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಐಟಿಐ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ. ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ವಸತಿ ಶಾಲೆಗಳು, ವಾಜಪೇಯಿ ವಸತಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಅವರು ಶಿರಾದ ಕಾಂಗ್ರೆಸ್ ಕಚೇರಿಯಲ್ಲಿ www.kannadamedia.com ನ ವರದಿಗಾರರ ಜೊತೆ ಮಾತನಾಡುತ್ತಿದ್ದರು. ಟಿ.ಬಿ ಜಯಚಂದ್ರ ರವರು ಶಿರಾ ತಾಲೂಕಿನಲ್ಲಿ 'ತಾಯಿ ಮಗುವಿನ ಆರೈಕೆಗಾಗಿ ಪ್ರತ್ಯಕ್ಷ ಆರೋಗ್ಯ ಘಟಕ' ಸ್ಥಾಪನೆ. 500ಕ್ಕೂ ಮೀರಿದ ಸಂಪರ್ಕ ರಸ್ತೆ, ಸೇತುವೆ, ಬ್ಯಾರೇಜ್‌ಗಳ ನಿರ್ಮಾಣ. ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಿಡಗನಹಳ್ಳಿ, ಮೂಗನಹಳ್ಳಿ, ವೀರಬೊಮ್ಮನ ಹಳ್ಳಿ, ತೊಗರುಗುಂಟೆ, ಯಾದಲಡಕು, ಲಕ್ಕನಹಳ್ಳಿ, ಗೋಣಿಹಳ್ಳಿ, ತಾಳಗುಂದ, ಹುಳಿಗೆರೆ ಯಾತ್ರಿನಿವಾಸಗಳಿಗೆ ಯಥೇಚ್ಛ ಅನುದಾನ ನೀಡುವ ಮೂಲಕ ಜಯಚಂದ್ರರವರು ಅಭಿವೃದ್ಧಿಯ ಹರಿಕಾರರೆನ್ನಿಸಿದ್ದಾರೆ. ಈ ಹಿಂದಿನ ಅವರ ಶಾಸಕತ್ವದ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ 2800ಕೋಟಿ ರೂ.ಗಳಷ್ಟು ಅನುದಾನವನ್ನು ಶಿರಾ ತಾಲೂಕಿಗೆ ತಂದು ಅಲ್ಲಿನ ಕೃಷಿ, ಶಿಕ್ಷಣ, ನೀರಾವರಿ, ಆರೋಗ್ಯ, ಚರಂಡಿ ನಿರ್ಮಾಣ, ಶೌಚಾಲಯಗಳ ನಿರ್ಮಾಣ,ಕುಡಿಯುವ ನೀರು, ಪಶುಸಂಗೋಪನೆ, ರೇಷ್ಮೆ ಮುಂತಾದವುಗಳಿಗೆ ಪ್ರೋತ್ಸಾಹ ನೀಡಿದ ಓರ್ವ ಸಾಧಕ ಟಿ.ಬಿ ಜಯಚಂದ್ರ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement