ಶಿರಾ ವಿಧಾನಸಭಾ ಕ್ಷೇತ್ರದಾದ್ಯಂತ 121 ಬ್ಯಾರೇಜುಗಳನ್ನು ನಿರ್ಮಿಸಿ ಕೆರೆಗೆ ನೀರು ತುಂಬಿಸಿದ ಪರಿಣಾಮ ಸುತ್ತಮುತ್ತಲಿನ ಅಂತರ್ಜಲ ಮಟ್ಟ ವೃದ್ದಿಯಾಯಿತು. ಅಂತಹ ಕೆಲಸ ಮಾಡಿದ ಓರ್ವ ಆಧುನಿಕ ಭಗಿರಥನನ್ನು ಅಪಪ್ರಚಾರ ಮಾಡಿ, ತೇಜೋವಧೆ ಮಾಡಿ ಸೋಲಿಸಲಾಯಿತು. ಆದರೆ ಆ ಸೋಲಿನಿಂದ ನಷ್ಟವಾದದ್ದು ಇಡೀ ಶಿರಾ ವಿಧಾನಸಭಾ ಕ್ಷೇತ್ರದ ಜನರಿಗೆ ಹೊರತೂ ಜಯಚಂದ್ರರಿಗಲ್ಲ. ಮತ್ತೊಮ್ಮೆ ಶಿರಾ ಕ್ಷೇತ್ರದ ಕೂಗು ವಿಧಾನಸಭೆಯಲ್ಲಿ ಪ್ರತಿಧ್ವನಿಸಬೇಕಿದ್ದರೆ ಜಯಚಂದ್ರ ಗೆಲ್ಲಬೇಕು. ಮುಂದಿನ ಬಾರಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತೆ. ಶಿರಾ ವಿಧಾನಸಭಾ ಕ್ಷೇತ್ರದ ಜನ ಜಯಚಂದ್ರರವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರ ಜನವಿರೋಧಿ ಕೆಲಸ ಮಾಡುತ್ತಿದೆ ಎಂಬ ಸಂದೇಶವನ್ನು ಇಡೀ ರಾಜ್ಯಕ್ಕೆ ನೀಡಬೇಕು. ಜಯಚಂದ್ರರವರು ಮತ್ತೆ ಆಯ್ಕೆಯಾಗುವ ಮೂಲಕ ಶಿರಾ ಕ್ಷೇತ್ರದ ಅಭಿವೃದ್ಧಿ ಮತ್ತೆ ಆರಂಭಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.