ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಹೆಚ್ಚಿನ ಅಂತರಕ್ಕಷ್ಟೆ ನಮ್ಮ ಹೋರಾಟ: ನಟರಾಜ್ ಬರಗೂರು
ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಹೆಚ್ಚಿನ ಅಂತರಕ್ಕಷ್ಟೆ ನಮ್ಮ ಹೋರಾಟ: ನಟರಾಜ್ ಬರಗೂರು
Advertisement
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಯುಕ್ತ ಶಿರಾ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು ಅವರ ಜೊತೆ www.kannadamedia.com ನಡೆಸಿದ ಸಂದರ್ಶನದ ವಿವರ.
• ಅಧ್ಯಕ್ಷರೆ, ನಿಮ್ಮ ಪ್ರಕಾರ ಈ ಬಾರಿ ಶಿರಾ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಏನಾಗಬಹುದು.
• ಫಲಿತಾಂಶ ಸ್ಪಷ್ಟವಾಗಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಖಂಡಿತವಾಗಿಯೂ ಗೆಲ್ಲಲಿದ್ದಾರೆ. ಇದೀಗ ನಮ್ಮ ಪ್ರಯತ್ನ ಏನಿದ್ದರೂ ಗೆಲುವಿನ ಅಂತರ ಹೆಚ್ಚಿಸುವುದಷ್ಟೇ ಆಗಿದೆ
•ನಿಮ್ಮ ಪ್ರಕಾರ ಎಷ್ಟು ಅಂತರದಲ್ಲಿ ಗೆಲ್ಲಬಹುದು?
• ಕಾಂಗ್ರೆಸಿಗರು ಹೋದಲ್ಲೆಲ್ಲಾ ಮತದಾರರು ನೀಡುತ್ತಿರುವ ಬೆಂಬಲ, ಅವರ ಉತ್ಸಾಹ, ಪ್ರೋತ್ಸಾಹಗಳನ್ನು ಗಮನಿಸಿದರೆ ಗೆಲುವಿನ ಅಂತರ ಕನಿಷ್ಠ 25ರಿಂದ 30ಸಾವಿರ ಖಚಿತ. ಆದರೆ ಆದಕ್ಕೂ ಹೆಚ್ಚಿನ ಅಂತರದ ಗೆಲುವಿಗಾಗಿ ನಮ್ಮ ಪ್ರಯತ್ನ ನಡೆದಿದೆ.
• ಮತದಾರರ ಉತ್ಸಾಹ, ಪ್ರೋತ್ಸಾಹಗಳನ್ನು ಹೊರತುಪಡಿಸಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜೆ ಯವರ ಗೆಲುವಿನ ಕುರಿತಾಗಿ ತಮ್ಮ ಪಕ್ಷ ಹೊಂದಿರುವ ವಿಶ್ವಾಸದ ಹಿಂದಿನ ಮಾನದಂಡವೇನು?
• ವಿಶ್ವಾಸದ ಹಿಂದಿನ ಮೊದಲನೆಯ ಮಾನದಂಡ ಜಯಚಂದ್ರರವರ ತಮ್ಮ ಅಧಿಕಾರಾವಧಿಯಲ್ಲಿ ಈ ಹಿಂದೆ ಬರದ ನಾಡಾಗಿದ್ದ ಈ ಕ್ಷೇತ್ರವನ್ನು ಜಲದ ನಾಡಾಗಿ ಪರಿವರ್ತಿಸಿದ್ದು. ಅಷ್ಟಲ್ಲದೇ ಅವರು ಈ ಹಿಂದೆ ಆಗಿಹೋದ ಯಾವುದೇ ಶಾಸಕರು, ಸಂಸದರು ಈ ಕ್ಷೇತ್ರಕ್ಕೆ ತಂದಿಲ್ಲದ ಎಲ್ಲಾ ಸವಲತ್ತುಗಳನ್ನು ಬೆಂಗಳೂರಿನಲ್ಲೆ ಕುಳಿತು ಹಠಕ್ಕೆ ಬಿದ್ದು ತಂದು ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಪರಿವರ್ತಿಸಿದ ಕೀರ್ತಿ ಅವರದ್ದಾಗಿದೆ ಈ ಸತ್ಯ ಈ ಕ್ಷೇತ್ರದ ಮತದಾರರಿಗೆ ಅರಿವಿದೆ. ಖಂಡಿತವಾಗಿಯೂ ಈ ಬಾರಿ ಮತದಾರರು ಜಯಚಂದ್ರರ ಕೈಬಿಡಲಾರರು.
• ಹಾಗಾದರೆ... ಅಷ್ಟೆಲ್ಲಾ ಕೆಲಸ ಮಾಡಿಯೂ ಅವರು ಕಳೆದ ಬಾರಿ ಸೋಲಲು ಕಾರಣವೇನು?
• ಒಳ್ಳೆಯ ಪ್ರಶ್ನೆ ಕೇಳಿದ್ದೀರಿ.... ನಿಜ ಹೇಳಬೇಕೆಂದರೆ ಅದು ಕೇವಲ ಅಪಪ್ರಚಾರದಿಂದ ಆದ ಸೋಲು. ಶಾಸಕರಾಗಿ, ಸಚಿವರಾಗಿ ಈ ಕ್ಷೇತ್ರದಲ್ಲಿ ಅವರು ಸರ್ವಧರ್ಮಗಳಲ್ಲಿ ಒಗ್ಗಟ್ಟು ಮೂಡಿಸಿದ್ದರು ಆದರೆ ಬಿಜೆಪಿಗರು ಅವರ ವಿರುದ್ಧ ಹಿಂದೂಧರ್ಮದ ವಿರೋಧಿ ಎಂಬಂತೆ ಬಿಂಬಿಸಿದ್ದರು. ಅದು ನಮ್ಮ ಗಮನಕ್ಕೆ ಬರುವುದು ತಡವಾದ ಕಾರಣಕ್ಕೆ ನಮಗೆ ದೊಡ್ಡ ನಷ್ಟವಾಯಿತು.
• ಹಿಂದೂ ವಿರೋಧಿ ಎಂದರೇನು? ಅಂತಹ ವಿರೋಧ ಕಾರ್ಯವನ್ನು ಅವರೇನು ಮಾಡಿದ್ದಾರೆ.
• ಅದನ್ನು ಅಪಪ್ರಚಾರ ಮಾಡಿದವರಲ್ಲೇ ಕೇಳಬೇಕು.... ಆದರೆ ಜಯಚಂದ್ರರವರು ಶಾಸಕರಾಗಿ, ಸಚಿವರಾಗಿ ಮಾಡಿದ ಹಿಂದೂ ದರ್ಮದ ಪರವಾದ ಕೆಲಸಗಳನ್ನು ಹೇಳಿಕೊಂಡು ಪ್ರಚಾರ ಪಡೆಯುವಲ್ಲಿ ಒಂದು ರಾಜಕೀಯ ಪಕ್ಷವಾಗಿ ನಾವು ಸೋತಿದ್ದೇವು. ಬಹುಶಃ ಆ ಕೆಲಸಗಳನ್ನು ಟಿ.ಬಿ.ಜೆಯವರು ಪ್ರಚಾರ ಪಡೆಯಲಿಕ್ಕಾಗಿ ಮಾಡಿರಲಿಲ್ಲ. ಅದನ್ನು ಅವರು ರಾಜಧರ್ಮದ ಪಾಲನೆ ಎಂದುಕೊಂಡಿದ್ದರು. ಆ ನಮ್ಮ ವಿಪರೀತವಾದ ಆತ್ಮವಿಶ್ವಾಸವೇ ನಮ್ಮ ಆ ಸೋಲಿಗೆ ಕಾರಣವಾಯ್ತು.
• ಏನದು ಹಿಂದೂ ಧರ್ಮದ ಪರವಾಗಿ ಮಾಡಿರುವ ಕೆಲಸಗಳು?
• ಒಂದೇ, ಎರಡೇ? ಸಚಿವರಾಗಿ ಅವರು ಹಿಂದೂ ದೇವಸ್ಥಾನಗಳ ಅಭಿವೃದ್ಧಿಗಾಗಿ ಮಾಡಿರುವ ನೂರಾರು ಕೆಲಸಗಳ ಪಟ್ಟಿಯನ್ನೆ ನೀಡಬಲ್ಲೆವು ನಾವು. 2008ರಿಂದ 2018ರ ವರೆಗಿನ ಕೇವಲ ಹತ್ತು ವರ್ಷಗಳಲ್ಲಿ ತಾಲೂಕಿನ ಒಟ್ಟು 175 ದೇವಸ್ಥಾನಗಳ ಅಭಿವೃದ್ಧಿಗೆ 1004ಲಕ್ಷ ರೂಪಾಯಿಗಳ ಅನುದಾನವನ್ನು ಕೊಡಲಾಗಿತ್ತು. ಇದರ ಹೊರತಾಗಿಯೂ ಅವರ ಅವಧಿಯಲ್ಲಿ ನೀರಾವರಿ, ಶಿಕ್ಷಣ, ರಸ್ತೆ, ಸೇತುವೆ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು 2800ಕೋಟಿ ರೂ.ಗಳಿಗೂ ಜಾಸ್ತಿ ಅನುದಾನವನ್ನು ತಂದು ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಬಹುಶಃ ಇಷ್ಟೊಂದು ಕೆಲಸ ಮಾಡಿಯೂ ಕೂಡಾ ಸೋಲಬೇಕಾಗಿ ಬಂದದ್ದು ವಿಪರ್ಯಾಸವೇ ಸೈ.
►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com