Advertisement

ಜನವಿರೋಧಿ ಯಡಿಯೂರಪ್ಪ ಸರ್ಕಾರವನ್ನು ಜಗ್ಗಿಸುವ ಶಕ್ತಿ ಶಿರಾ ಮತದಾರರಿಗಿದೆ: ಡಿ.ಕೆ ಶಿವಕುಮಾರ್.

Advertisement

• www.kannadamedia.com ವರದಿ 'ಇಂದು ಈ ನಾಡಿನ ರೈತರ ಬಳಿ, ಕಾರ್ಮಿಕರ ಬಳಿ, ಮಹಿಳೆಯರ ಬಳಿ, ಸಣ್ಣ ವ್ಯಾಪಾರಸ್ಥರ ಬಳಿ ಹಣ ಇಲ್ಲದಂತಾಗಿದೆ. ಸಣ್ಣ ಮಧ್ಯಮ ಗಾತ್ರದ ಉದ್ದಿಮೆಗಳು ನಡೆಸಲಾಗದೆ ಮುಚ್ಚಲ್ಪಡುತ್ತಿವೆ. ಇದಕ್ಕೆ ಬಿಜೆಪಿ ಸರ್ಕಾರದ ಅನರ್ಥಕಾರಿ ಆರ್ಥಿಕ ನೀತಿಯೇ ಕಾರಣವಾಗಿದೆ. ಇಂದು ದೇಶದ ಜಿಡಿಪಿ ಮೈನಸ್ 23.9% ಗೆ ಕುಸಿಯಲು ಯಾರು ಕಾರಣ? ದೇಶದ ನಿರುದ್ಯೋಗ ಮಟ್ಟ ಕಳೆದ 45 ವರ್ಷಗಳಷ್ಟು ಹಿಂದಿನ ಮಟ್ಟಕ್ಕೆ ಕುಸಿಯಲು ಯಾರ ಆಡಳಿತ ವೈಫಲ್ಯ ಕಾರಣ ಎಂಬುವುದನ್ನು ಅರಿತುಕೊಂಡು ಶಿರಾ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿಯ ಉಪಚುನಾವಣೆಯಲ್ಲಿ ಮತದಾನ ಮಾಡಿದಲ್ಲಿ ಖಂಡಿತವಾಗಿಯೂ ರಾಜ್ಯದ ರಾಜಕಾರಣದ ದಿಕ್ಕು ಬದಲಾಗಲಿದೆ. ಆ ಮೂಲಕ ರಾಜ್ಯದ ಅಭಿವೃದ್ಧಿಗೆ ಚಾಲನೆ ಸಿಗಲಿದೆ. ಸಿದ್ದರಾಮಯ್ಯನವರು, ಜಯಚಂದ್ರರವರು ಹಾಗೂ ನಾನು ಮೂವರೂ ಒಟ್ಟಾಗಿ ವಿಧಾನಸಭೆಯಲ್ಲಿ ಕುಳಿತರೆ ಖಂಡಿತವಾಗಿಯೂ ಜನವಿರೋಧಿ ಯಡಿಯೂರಪ್ಪ ಸರ್ಕಾರವನ್ನು ಕಿತ್ತೆಸೆಯುವ ಶಕ್ತಿ ನಮಗೆ ಬರಲಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ದೇಶದಾದ್ಯಂತ 'ಬರದ ನಾಡಿನ ಭಗೀರಥ' ಎಂಬ ಖ್ಯಾತಿಯನ್ನು ಪಡೆದಿರುವ ಟಿ.ಬಿ ಜಯಚಂದ್ರರವರು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಅಪ್ರತಿಮವಾದುದು. ಕೇವಲ ಐದು ವರ್ಷಗಳ ಒಂದೇ ಅವಧಿಯಲ್ಲಿ 2500ಕೋಟಿ ರೂಪಾಯಿಗಳ ಅನುದಾನವನ್ನು ಕ್ಷೇತ್ರಕ್ಕೆ ತಂದಿರುವ ಮತ್ತೊಬ್ಬ ಶಾಸಕ ಈ ರಾಜ್ಯದಲ್ಲಿ ಇಲ್ಲ ಎಂಬ ಸತ್ಯವನ್ನು ಈ ಕ್ಷೇತ್ರದ ಮತದಾರರು ಅರಿಯಬೇಕು. ಇಂದು ಈ ತಾಲೂಕಿನ ಜನತೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದರೆ ಅದು ಜಯಚಂದ್ರರವರ ಜಲಕ್ರಾಂತಿಯ ಫಲಿತಾಂಶದ ಫಲದಿಂದಲೇ ಎಂಬುದನ್ನು ನಾವು ಅರಿಯಬೇಕಾಗಿದೆ ಎಂದವರು ಹೇಳಿದ್ದಾರೆ. ಈ ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಬಿಸಲಾಗಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖಡಿತಗೊಳಿಸಿದ ಬಡಜನರ ವಿರೋಧಿ ಸರ್ಕಾರ ಇದ್ದರೆ ಅದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಮಾಡಿದ ಜನಪರ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬಂದ ಮೇಲೆ ಒಂದೊಂದಾಗಿ ನಿಲ್ಲಿಸತೊಡಗಿದೆ. ಇಂತಹ ಜನವಿರೋಧಿ ಅಜೆಂಡಾ ಹೊಂದಿರುವ ಬಿಜೆಪಿ ಪಕ್ಷದಿಂದ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಮೂರ್ಖತನವಾದೀತು. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಭಾರತ ವಿಶ್ವದ 3ನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದ್ದರೆ ಇಂದು ಕೇವಲ 6 ವರ್ಷಗಳಲ್ಲಿ ಅದೇ ಆರ್ಥಿಕತೆಯನ್ನು ಸರ್ವನಾಶ ಮಾಡಿದ ಅಪಕೀರ್ತಿ ಬಿಜೆಪಿ ನೇತೃತ್ವದ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಶಿರಾ ವಿಧಾನಸಭಾ ಕ್ಷೇತ್ರದ ಜನತೆ ಈ ಉಪಚುನಾವಣೆಯಲ್ಲಿ ಜಯಚಂದ್ರರವರನ್ನು ಗೆಲ್ಲಿಸುವ ಮೂಲಕ ಇಡೀ ರಾಜ್ಯಕ್ಕೆ ಹಾಗೂ ದೇಶಕ್ಕೆ ಶುಭಸಂದೇಶ ರವಾನಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದವರು ಹೇಳಿದ್ದಾರೆ.

Advertisement
Advertisement
Recent Posts
Advertisement