ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ನಮ್ಮನ್ನಗಲಿದ ಟಿ. ಶಶಿಧರ್ ಅವರೊಬ್ಬ ಸಮಾಜಮುಖಿ ಚಿಂತಕರಾಗಿದ್ದರು. ಜನಪರ ಚಿಂತನೆಯ ಅವರ ಬರಹಗಳು ಕಾಂಗ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿದ್ದವು. ಇಂದು ಶೋಷಿತವರ್ಗದ ಮೇಲೆ ದೇಶದಾದ್ಯಂತ ಹೆಚ್ಚುತ್ತಿರುವ ದೌರ್ಜನ್ಯ, ಹಿಂಸೆಗಳ ಕುರಿತು ಚಿಂತಿತರಾಗಿದ್ದರು, ಮಾತಿಗೆ ಸಿಕ್ಕಾಗಲೆಲ್ಲ ಆ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದರು. ಈ ದುಷ್ಟ ಶಕ್ತಿಗಳನ್ನು ಕಾಲಕಾಲಕ್ಕೆ ಹೆಡೆಮುರಿ ಕಟ್ಟದೆ ಬೆಳೆಯಲು ಬಿಟ್ಟ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ನಡೆಯುತ್ತಿರುವ ಅನ್ಯಾಯ, ಅನಾಚಾರಗಳ ಕುರಿತು ನೊಂದಿದ್ದರು... ಇದು ಹಿಗೇಯೇ ಮುಂದುವರಿದರೆ ಭವಿಷ್ಯದ ಭಾರತಕ್ಕೆ ಆಪತ್ತು ಶತಸಿದ್ದ ಎಂಬ ಕುರಿತು ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಬಹುಶಃ ಇನ್ನು ಕನಿಷ್ಠ 25-30ವರ್ಷಗಳ ಕಾಲ ಬದುಕಿರಬಹುದಾಗಿದ್ದ ಶಶಿದರ್ ಇನ್ನಿಲ್ಲ ಎಂದರೆ ಖಂಡಿತವಾಗಿಯೂ ನಂಬಲು ಸಾಧ್ಯವಾಗುತ್ತಿಲ್ಲ.
"ಒಂದು ದಿನ ತೂಫಾನ್ ಮಳೆಯಲ್ಲಿ ನೆನೆಸಿಕೊಂಡೆ. ನಾಲ್ಕು ದಿನ ತೂಫಾನ್ ಗಾಳಿ ಮೂಗಿಗೆ ಬಡಿಸಿಕೊಂಡೆ. ಎರಡು ಗ್ರಾಮಗಳಲ್ಲಿ ಮಹಾನಾಯಕ ಪ್ರಚಾರ ಫಲಕ ಉದ್ಘಾಟಿಸಿ ಮಾತನಾಡಿದೆ. ನನಗೆ ಒಗ್ಗದ ಮಿನೆರಲ್ ವಾಟರ್ ಕುಡಿದೆ. ನೆಗಡಿ ಕೆಮ್ಮು ಆಯಾಸ ಶುವಾಯಿತು. ಆದರೆ ನಾನು ಎದೆಗುಂದಲಿಲ್ಲ. ಯಾಕೆಂದರೆ ನನಗೆ ಅಲರ್ಜಿ ಇರುವ ಕಾರಣ ಸಾಮಾನ್ಯವಾಗಿ ವರ್ಷದಲ್ಲಿ ಎರಡು ಮೂರು ಸಾರಿ ಈ ರೋಗ ಬರುವುದು ಸರ್ವೇ ಸಾಮಾನ್ಯ. ಇಪ್ಪತ್ತು ವರ್ಷಗಳಿಂದ ಈ ರೀತಿ ಯಾಗುತ್ತಿದ್ದರೂ ಯಾವತ್ತೂ ಆಸ್ಪತ್ರೆಗೆ ಹೋದವನಲ್ಲ. ಮನೆ ಮದ್ದಿನ ಮೂಲಕವೇ ಒಂದು ವಾರದಲ್ಲಿ ಸರಿಪಡಿಸಿಕೊಂಡಿದ್ದೇನೆ. ಆದರೆ ಈ ಸಲವೂ ನಾಲ್ಕು ದಿನಗಳ ಕಾಲ ಮನೆ ಮದ್ದಿಗೆ ಶರಣಾದೆ. ಯಾವುದೇ ಪರಿಣಾಮಕಾರಿ ಬದಲಾವಣೆ ಕಾಣಲಿಲ್ಲ. ಅನಿವಾರ್ಯವಾಗಿ ಆಸ್ಪತ್ರೆಗೆ ಹೋಗಲೇಬೇಕಾಯಿತು. ನಿರೀಕ್ಷಿತವಾಗಿ ಕೊರೋನ +ve ಎಂದು ದೃಢಪಟ್ಟಿತು. ಖಾಸಗಿ ಆಸ್ಪತ್ರೆಯ ವೈದ್ಯರು ಖಾಸಗಿಯಾಗಿ ದಾಖಲಾಗುತ್ತೀರೋ? ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುತ್ತೀರೋ? ಎಂಬ ಆಯ್ಕೆ ನಿಮಗೆ ಬಿಟ್ಟ ವಿಚಾರ ಎಂದು ಹೇಳಿದರು. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರೆ ಪ್ರತಿದಿನಕ್ಕೆ 25000/- ಬೆಡ್ ಚಾರ್ಜ್ + ಔಷಧೀಯ ಖರ್ಚು ಪ್ರತ್ಯೇಕವೆಂದು ತಿಳಿಸಿದರು. ಅಷ್ಟೊಂದು ದುಬಾರಿ ಖರ್ಚಿನಲ್ಲಿ ಚಿಕಿತ್ಸೆ ಪಡೆಯುವ ಖಾಯಿಲೆ ಇದಲ್ಲವೆಂದು ಭಾವಿಸಿ, ಯಾದಗಿರಿಯ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಇನ್ನೊಂದು ವಿಷಯವೇನಂದರೆ ಪ್ರತಿದಿನಕ್ಕೆ ಅಷ್ಟೊಂದು ದುಬಾರಿ ಶುಲ್ಕ ಪಡೆಯುವ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಗುಣಮುಖರಾಗಿ ಹೊರ ಬಂದ ಉದಾಹರಣೆಗಿಂತ ಹೆಣವಾಗಿ ಹೊರ ಬಂದ ಉದಾಹರಣೆಗಳೆ ಹೆಚ್ಚು ಸಿಗುತ್ತವೆ. ಆದ್ದರಿಂದಲೇ ನಾನು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಕಫ ಗಟ್ಟಿಯಾಗುವಿಕೆ ದಮ್ಮು ಕೆಮ್ಮು ಉಸಿರಾಟದ ತೊಂದರೆ ಬಿಟ್ಟರೆ ಉಳಿದೆಲ್ಲ ತೊಂದರೆ ಮಾಯವಾಗಿವೆ. ಯಾವದಕ್ಕೂ ನನ್ನನ್ನು ಇಷ್ಟಪಡುವ ಸ್ನೇಹಿತರ ಗಮನಕ್ಕೆ ಇರಲಿ ಎಂಬ ಕಾರಣಕ್ಕೆ ಹೇಳುವ ಅಗತ್ಯವಿದೆ ಎಂದು ಭಾವಿಸಿ ಇಷ್ಟೆಲ್ಲ ಹೇಳಬೇಕಾಯಿತು. ದಯವಿಟ್ಟು ಸ್ನೇಹಿತರು ಕ್ಷಮಿಸಬೇಕು. ನಾನು ಮಾತನಾಡುವ ಸ್ಥಿತಿಯಲ್ಲಿಲ್ಲ ಯಾಕೆಂದರೆ ಆಕ್ಸಿಜನ್ ಕನ್ನೆಕ್ಷನ್ ನೀಡಿರುವ ಕಾರಣ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಆಕ್ಸಿಜನ್ ತೆಗೆದರೆ ಕೆಮ್ಮು ಜಾಸ್ತಿಯಾಗಿ ಮಾತನಾಡಲು ಆಗುತ್ತಿಲ್ಲ. ಒಂದೆರಡು ದಿನಗಳ ನಂತರ ಎಲ್ಲ ಸ್ನೇಹಿತರಿಗೆ ನಾನೇ ಮಾತನಾಡುತ್ತೇನೆ.
ಆದ್ದರಿಂದ ಯಾರೂ ಫೋನ್ ಮಾಡಬಾರದೆಂದು ಮನವಿ ಮಾಡುತ್ತೇನೆ. ಅನ್ಯತಾ ಭಾವಿಸಬಾರದು. - ನಿಮ್ಮ ಟಿ.ಶಶಿಧರ್.
(ಇದು ಟಿ.ಶಶಿಧರ್ ಅವರು ಸೆಪ್ಟೆಂಬರ್ 25ರ ಸಂಜೆ 6.44ಕ್ಕೆ ತನ್ನ ಫೇಸ್‌ಬುಕ್ ವಾಲ್‌ಗೆ ಅಪ್‌ಲೋಡ್ ಮಾಡಿದ ಅವರ ಜೀವನದ ಕೊನೆಯ ಪೋಸ್ಟ್.)
ಅಗಲಿದ ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ದೊರೆಯಲಿ ಎಂದು kannadamedia.com ತಂಡದ ಪರವಾಗಿ ಪ್ರಾರ್ಥಿಸುತ್ತೇವೆ.
ಇವರ ಅಗಲಿಕೆಯ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಹೆಸ್.ಸಿ ಮಹದೇವಪ್ಪ ಹಾಗೂ ಹಿರಿಯ ಪತ್ರಕರ್ತರೂ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೂ ಆಗಿದ್ದ ದಿನೇಶ್ ಅಮಿನ್ ಮಟ್ಟು,ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಎ.ಎನ್ ನಟರಾಜ ಗೌಡ ಸಂತಾಪ ಸೂಚಿಸಿದ್ದಾರೆ.
ಅಪಾರ ಸಾಮಾಜಿಕ ಕಳಕಳಿಯ ನಮ್ಮ ಪಕ್ಷದ ಕ್ರಿಯಾಶೀಲ ಕಾರ್ಯಕರ್ತ ಟಿ.ಶಶಿಧರ್ ಸಾವು ನನ್ನನ್ನು ದಿಗ್ಭ್ರಾಂತನನ್ನಾಗಿ ಮಾಡಿದೆ. ಅನಾರೋಗ್ಯದ ಸುದ್ದಿ...
ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com