ಬಿಜೆಪಿ ಸೋಲಿನ ಭಯದಿಂದ ಯತೀಂದ್ರ ಸಿದ್ದರಾಮಯ್ಯ ಕುರಿತು ಅಪಪ್ರಚಾರ ನಡೆಸುತ್ತಿದೆಯೇ?
ಬಿಜೆಪಿ ಸೋಲಿನ ಭಯದಿಂದ ಯತೀಂದ್ರ ಸಿದ್ದರಾಮಯ್ಯ ಕುರಿತು ಅಪಪ್ರಚಾರ ನಡೆಸುತ್ತಿದೆಯೇ?
Advertisement
ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಕುರಿತು 'ಯತೀಂದ್ರ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಆಪ್ತಮಿತ್ರರು ಆ ಕಾರಣಕ್ಕಾಗಿ ಯತೀಂದ್ರ ರವರು ರಾಜೇಶ್ ಪರ ನಿಂತಿದ್ದಾರೆ' ಎಂದು ಬಿಜೆಪಿ ಪಕ್ಷ ಬೂತ್ ಮಟ್ಟದಲ್ಲಿ ವ್ಯವಸ್ಥಿತವಾದ ಅಪಪ್ರಚಾರದಲ್ಲಿ ತೊಡಗಿದ್ದು ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಆ ಕುರಿತು ಯತೀಂದ್ರರವರು ಸ್ಪಷ್ಟೀಕರಣವನ್ನು ನೀಡಿದ್ದಾರೆ.
'ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರು ನನ್ನ ಸ್ನೇಹಿತರಾಗಿದ್ದರು ಹಾಗಾಗಿ ನಾನು ರಾಜೇಶ್ ಗೌಡರ ಪರ ನಿಂತಿದ್ದೇನೆ , ನಮ್ಮ ಪಕ್ಷದ ಅಭ್ಯರ್ಥಿ ಟಿ ಬಿ ಜಯಚಂದ್ರ ಅವರ ಪರ ಇಲ್ಲ' ಎಂಬ ರೀತಿಯಲ್ಲಿ ಬಿಜೆಪಿಗರು ಅಪಪ್ರಚಾರ ನಡೆಸುತ್ತಿದ್ದು ಅದು ನೂರಕ್ಕೆ ನೂರು ಸತ್ಯಕ್ಕೆ ದೂರವಾದ ವಿಚಾರವಾಗಿದೆ, ಈ ರೀತಿಯ ಅಪಪ್ರಚಾರಕ್ಕೆ ಯಾರೂ ಮಹತ್ವ ನೀಡಬೇಡಿ. ಇದು ಅವರು ಸೋಲಿನ ಭಯದಿಂದ ಮಾಡುತ್ತಿರುವ ಒಂದು ತಂತ್ರಗಾರಿಕೆಯಾಗಿದೆ. ಈಗಾಗಲೇ ನಾನು ಹಲವು ಬಾರಿ ಸ್ಪಷ್ಟನೆಯನ್ನು ನೀಡಿದ್ದೇನೆ, ಈಗಲೂ ಮತ್ತೊಮ್ಮೆ ಎಲ್ಲರಿಗೂ ಹೇಳುತ್ತಿದ್ದೇನೆ ರಾಜೇಶ್ ಗೌಡ ಅವರ ತಂದೆ ನಮ್ಮ ಪಕ್ಷದಲ್ಲಿದ್ದರು ಆ ಕಾರಣದಿಂದ ಅವರು ನನ್ನ ಸ್ನೇಹಿತರಾಗಿದ್ದರು. ಆದರೆ ಈಗ ರಾಜೇಶ್ ಗೌಡ ಬಿಜೆಪಿ ಸೇರಿದ್ದಾರೆ.
ನನಗೆ ನಮ್ಮ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳೇ ಮುಖ್ಯ ಹೊರತು ಬೇರೆಲ್ಲವೂ ನಗಣ್ಯ ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿ ಟಿ ಬಿ ಜಯಚಂದ್ರ ಅವರಿಗೆ ನನ್ನ ಸಂಪೂರ್ಣ ಬೆಂಬಲ, ಸಹಕಾರ ನೀಡುತ್ತಿದ್ದೇನೆ. ನಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ ಜಯಚಂದ್ರ ಅವರನ್ನು ಗೆಲ್ಲಿಸಲು ಶ್ರಮಿಸುತ್ತಿದ್ದೇನೆ. ದಯಮಾಡಿ ಯಾರು ಕೂಡ ಬಿಜೆಪಿಯವರ ಈ ಅಪಪ್ರಚಾರವನ್ನು ನಂಬಬೇಡಿ. ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಗರ್ವವನ್ನು ಅಡಗಿಸಬೇಕಾದರೆ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕು ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೂಡ ತಮ್ಮ ಶಕ್ತಿಮೀರಿ ಶ್ರಮಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಕಾಳಿದಾಸ ನಗರ, ಗೌಡಗೆರೆ, ಬೇವಿನಹಳ್ಳಿ, ಚಂಗಾವರ, ದಾಸರಕುಂಟೆ ಮುಂತಾದೆಡೆ ರೋಡ್ ಶೋ ನಡೆಸಿದ ಅವರು ಅಲ್ಲಲ್ಲಿ ಸೇರಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
►► ನಿಮಗೆ ಈ ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com