Advertisement

ಸುಧಾ ಭಾರದ್ವಾಜ್ ಅವರ 'Personal Liberty' ಯಾವ ನ್ಯಾಯಾಲಯಕ್ಕೂ ಕಾಣಿಸುತ್ತಿಲ್ಲವೇ? ಜನರ ಪರವಾಗಿ ದಶಕಗಟ್ಟಲೆ ಹೋರಾಡಿದ ಈಕೆ ಇನ್ನೆಷ್ಟು ವರ್ಷ ಜೈಲಿನಲ್ಲಿರಬೇಕು?

Advertisement

ಬರಹ: ದಿನೇಶ್ ಕುಮಾರ್ ಎಸ್.ಸಿ ಇವರು ಸುಧಾ ಭಾರದ್ವಾಜ್. ಜಾರ್ಖಂಡ್ ನಲ್ಲಿ ಮೂರು ದಶಕಗಳ ಕಾಲ ಟ್ರೇಡ್ ಯೂನಿಯನ್ ಗಳಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದವರು. ಕಾರ್ಮಿಕರಿಗಾಗಿಯೇ ಕಾನೂನು ಪದವಿ ಪಡೆದು ನ್ಯಾಯಾಲಯಗಳಲ್ಲಿ ನೂರಾರು ಪ್ರಕರಣಗಳಲ್ಲಿ ವಾದಿಸಿದವರು. ಭೀಮಾ ಕೋರೆಗಾವ್ ಪ್ರಕರಣದ ನಂತರ ಪುಣೆ ಪೊಲೀಸರು ಸುಧಾ‌ ಅವರನ್ನು ಆಗಸ್ಟ್ 28, 2017ರಂದು ಬಂಧಿಸಿದರು. ಆರ್ ಎಸ್ ಎಸ್ ನಿಕಟವರ್ತಿ ತುಷಾರ್ ಎಂಬಾತ ದಾಖಲಿಸಿದ್ದ FIR ನಲ್ಲಿ ಎಲ್ಗಾರ್ ಪರಿಷತ್ ನಲ್ಲಿ ನಡೆದ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ನಡೆಸಿ ಗಲಭೆಗೆ ಕುಮ್ಮಕ್ಕು ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ವಿಚಿತ್ರವೆಂದರೆ ಸುಧಾ ಭಾರದ್ವಾಜ್ ಎಲ್ಗಾರ್ ಪರಿಷತ್ ಸಭೆಯಲ್ಲಿ ಭಾಗವಹಿಸಿಯೇ ಇರಲಿಲ್ಲ. ಸುಧಾ ಅವರು ನೀಡಿದ್ದರೆನ್ನಲಾದ ಮರಾಠಿ ಭಾಷೆಯಲ್ಲಿದ್ದ ಪತ್ರಿಕಾ ಹೇಳಿಕೆಯ ಪ್ರತಿಯನ್ನೇ ಇಟ್ಟುಕೊಂಡು ಸುಧಾ ಅವರನ್ನು ಜೈಲಿಗೆ ತಳ್ಳಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಮೂರು ವರ್ಷಗಳವರೆಗೆ ಅವರಿಗೆ ಜಾಮೀನು ದೊರೆತಿಲ್ಲ. ರೋಮಿಲಾ ಥಾಪರ್ ಮತ್ತಿತರರು ಸುಪ್ರೀಂ ಕೋರ್ಟ್ ಮೊರೆಹೋಗಿ ಸುಧಾ ಮತ್ತಿತರ ಮಾನವಹಕ್ಕು ಹೋರಾಟಗಾರರು,‌ಕಾರ್ಮಿಕ ಹೋರಾಟಗಾರರು, ಪತ್ರಕರ್ತರು, ದಲಿತ ಪರ ಚಳವಳಿಗಾರರ ಬಂಧನವನ್ನು ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಪೀಠ ಬಹುಮತದ ತೀರ್ಪಿನಲ್ಲಿ ಅರ್ಜಿಯನ್ನು ವಜಾಗೊಳಿಸಿತು. ಆಗ ಒಬ್ಬರೇ ಒಬ್ಬ ನ್ಯಾಯಾಧೀಶರು ಭಿನ್ನಮತದ ತೀರ್ಪು ಬರೆದು ಹೋರಾಟಗಾರರ ಬಿಡುಗಡೆಗೆ ಆದೇಶಿಸಿದ್ದರು. ಅವರು ಮತ್ಯಾರೂ ಅಲ್ಲ, ಅರ್ನಾಬನಿಗೆ ಜಾಮೀನು ನೀಡಿದ ಪೀಠದಲ್ಲಿದ್ದ ಜಸ್ಟಿಸ್ ಡಿ.ವೈ.ಚಂದ್ರಚೂಡ್. ಸುಧಾ ಭಾರದ್ವಾಜ್ ಬಂಧನಕ್ಕೊಳಗಾಗಿ ಒಂಭತ್ತು ತಿಂಗಳ‌ ನಂತರ ಹಾರ್ವಾರ್ಡ್ ಲಾ ಸ್ಕೂಲ್ ಸುಧಾ ಅವರೂ ಸೇರಿದಂತೆ ಜಗತ್ತಿನ 21 ಮಹಿಳೆಯರನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಗೌರವಿಸಿತು. ಇದರಿಂದಾಗಿ ಮುಜುಗರಕ್ಕೆ ಒಳಗಾದ, ಆಗ ತಾನೇ ಅಧಿಕಾರಕ್ಕೆ ಬಂದ ಉದ್ಧವ್ ಠಾಕ್ರೆ ಸರ್ಕಾರ, ಸುಧಾ ಅವರ ಮೇಲಿನ ಕೇಸು ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ NIA ಗೆ ಪ್ರಕರಣ ವಹಿಸಿತು. NIA ಆನಂದ್ ತೇಲ್ತುಂಬ್ಡೆ ಸೇರಿದಂತೆ ಇನ್ನಷ್ಟು ಮಂದಿಯನ್ನು ಜೈಲಿಗೆ ತಳ್ಳಿ ಕೊನೆಗೆ ಕಳೆದ ತಿಂಗಳು ಹತ್ತು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತು. ಸುಧಾ ಜೈಲಿನಲ್ಲಿದ್ದಾಗಲೇ ಅವರ ತಂದೆ ತೀರಿಹೋದರು.‌ ಸುಧಾ ಡಯಾಬಿಟಿಸ್ ಮತ್ತು ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇಷ್ಟೇ ಅಲ್ಲದೆ pulmonary tuberculosis ನಿಂದ ಜರ್ಝರಿತರಾಗಿದ್ದಾರೆ. ಇಷ್ಟೆಲ್ಲ ಆರೋಗ್ಯ ಸಮಸ್ಯೆಗಳು ಇರುವ ಕಾರಣ ಕೋವಿಡ್ ಸೋಂಕಿಗೆ ಒಳಗಾದರೆ ಅವರು ಮಾರಣಾಂತಿಕ ಸಮಸ್ಯೆ ಎದುರಿಸಬಹುದು. ಇದೇ ಕಾರಣವಿಟ್ಟುಕೊಂಡು ಸುಧಾ NIA ಕೋರ್ಟ್, ಬಾಂಬೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಕದ ತಟ್ಟಿದರು. ಯಾವ ಕೋರ್ಟೂ ಬೇಲ್ ಕೊಡಲಿಲ್ಲ. ಕೊನೇದಾಗಿ ಸುಪ್ರೀಂ ಕೋರ್ಟ್ ಸುಧಾ ಅವರ ಜಾಮೀನು ಅರ್ಜಿ ವಜಾಗೊಳಿಸುವಾಗ ಹೇಳಿದ್ದು ಏನು ಗೊತ್ತೆ? ಸುಧಾ ಅವರ ಮೇಲಿನ ಕೇಸಿನ ಆಧಾರದಲ್ಲೇ ಜಾಮೀನು ಪಡೆಯಲು ಸಾಕಷ್ಟು ಮೆರಿಟ್ ಇರುವಾಗ ನೀವು ಯಾಕೆ ಮೆಡಿಕಲ್ ಗ್ರೌಂಡ್ ಮೇಲೆ ಜಾಮೀನಿಗೆ ಅರ್ಜಿ ಹಾಕುತ್ತೀರಿ? ಕೆಳನ್ಯಾಯಾಲಯದಲ್ಲಿ ಜಾಮೀನಿನಾಗಿ ಪ್ರಯತ್ನಿಸಿ. ಈಗ ಹೇಳಿ, ಸುಧಾ ಅವರ 'Personal Liberty' ಯಾವ ನ್ಯಾಯಾಲಯಕ್ಕೂ ಕಾಣಿಸುತ್ತಿಲ್ಲವೇ? ಜನರ ಪರವಾಗಿ ದಶಕಗಟ್ಟಲೆ ಹೋರಾಡಿದ ಈ ಹೆಣ್ಣುಮಗಳು ಇನ್ನೆಷ್ಟು ವರ್ಷ ಜೈಲಿನಲ್ಲಿರಬೇಕು? ___________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement