ಕಳೆದ ಆರು ವರ್ಷಗಳ ಹಿಂದೆ ಕುಂದಾಪುರದಲ್ಲಿ ಆರಂಭಗೊಂಡ ಕಾರ್ಟೂನು ಹಬ್ಬ ಇಂದು ದೇಶಾದಾದ್ಯಂತ ಪ್ರಸಿದ್ದಗೊಂಡಿದೆ. ಅದಕ್ಕೆ ಸಾಕ್ಷಿಯೆಂಬಂತೆ ವರ್ಷದಿಂದ ವರ್ಷಕ್ಕೆ ಜನಸಾಗರ ಹೆಚ್ಚುತ್ತಿದೆ. ಕಾರ್ಟೂನು ಹಬ್ಬ ಕಾರ್ಯಕ್ರಮಕ್ಕಾಗಿಯೇ ದೇಶದ ವಿವಿಧ ಭಾಗಗಳಿಂದ ಕಾರ್ಟೂನು ಪ್ರಿಯರು, ಪ್ರಸಿದ್ದ ಚಿಂತಕರು, ಲೇಖಕರು, ಪತ್ರಕರ್ತರು ಕುಂದಾಪುರಕ್ಕೆ ಆಗಮಿಸುತ್ತಿದ್ದಾರೆ.
ಈ ಬಾರಿ 'ಕೊರೊನಾ' ಕಾರಣಕ್ಕಾಗಿ ಸ್ಯಾನಿಟೈಜೇಷನ್, ಸೋಷಿಯಲ್ ಡಿಸ್ಟೆನ್ಸ್ ಮತ್ತು ಮಾಸ್ಕ್ ಒಟ್ಟಾರೆಯಾಗಿ ಸಂಪೂರ್ಣವಾಗಿ ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಯಲಿದೆ.
ಈ ಬಾರಿಯ ಕಾರ್ಟೂನು ಹಬ್ಬವನ್ನು ಡಿಸೆಂಬರ್ 12ರಂದು ಬೆಳಿಗ್ಗೆ 10ಗಂಟೆಗೆ, ದೇಶದ ಖ್ಯಾತ ಕಾರ್ಟೂನಿಷ್ಟ್ ಸತೀಶ್ ಆಚಾರ್ಯ ರವರು ಕೊರೊನಾ ಲಾಕ್‌ಡೌನ್ ಮತ್ತು ಆ ನಂತರ ರಚಿಸಿದ 'ಪ್ರಕಟಿತ ವ್ಯಂಗ್ಯಚಿತ್ರಗಳ ಸಂಗ್ರಹ'ದ ಪುಸ್ತಕ 'ಗೋ ಕೊರೋನಾ ಗೋ' ವನ್ನು ಖ್ಯಾತ ನಟ ಹಾಗೂ ಕೊರೊನಾ ಯೋಧ ಸೋನು ಸೂದ್ ರವರು ಆನ್‌ಲೈನ್ ಮೂಲಕ ಮುಂಬೈಯಿಂದ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ. ಆ ಸಮಯದಲ್ಲಿ ಕಲಾಮಂದಿರದ ವೇದಿಕೆಯಲ್ಲಿ ಕೊರೊನಾದ ವಿರುದ್ಧದ ಸಮರದಲ್ಲಿ ಜನಸಾಮಾನ್ಯರ ರಕ್ಷಣೆಗೆ ಜೀವವನ್ನು ಪಣತೊಟ್ಟು ಹೋರಾಡಿದ ಕುಂದಾಪುರದ ಉಪವಿಭಾಗಾಧಿಕಾರಿ ಕೆ.ರಾಜು (ಕೆ.ಎ.ಯೆಸ್), ಕುಂದಾಪುರ ತಾಲೂಕು ವೈಧ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ನೋಡಲ್ ವೈಧ್ಯಾಧಿಕಾರಿ ಡಾ. ನಾಗೇಶ್, ಉಧ್ಯಮಿಗಳಾದ ಗಣೇಶ್ ಭಟ್, ನಾಗರಾಜ್ ದಫೇದಾರ್ ಮುಂತಾದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಖ್ಯಾತ ನಿರೂಪಕ ಅವಿನಾಶ್ ಕಾಮತ್ ಅವರು ನಿರೂಪಣೆ ಮಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯರವರಿಂದ 'ಸಂಪಾದಕೀಯ ವ್ಯಂಗ್ಯಚಿತ್ರ' ಕಾರ್ಟೂನು ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರ ಕಾರ್ಯಕ್ರಮವು ಕಲಾಮಂದಿರ ಸಭಾಂಗಣದಲ್ಲಿ ಮತ್ತು ಝೂಮ್ ಮುಖೇನ ಈಗಾಗಲೇ ನೋಂದಣಿ ಮಾಡಿಕೊಂಡವರಿಗೆ ಮಾತ್ರವೇ ನಡೆಯಲಿದೆ. ಇದೇ ಸಮಯದಲ್ಲಿ ಬೆಳಿಗ್ಗೆಯಿಂದಲೇ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ, ಕೇಶವ ಸಸಿಹಿತ್ಲು, ಪಂಜು ಗಂಗೊಳ್ಳಿ, ಚಂದ್ರಶೇಖರ ಶೆಟ್ಟಿ, ರಾಮಕೃಷ್ಣ ಹೇರ್ಲೆ, ಸಂತೋಷ್ ಸಸಿಹಿತ್ಲು, ಚಂದ್ರ ಗಂಗೊಳ್ಳಿ, ರವಿಕುಮಾರ್ ಗಂಗೊಳ್ಳಿ, ದಿನೇಶ್ ಹೊಳ್ಳ ಮುಂತಾದವರ ಕಾರ್ಟೂನು ಪ್ರದರ್ಶನ ನಡೆಯಲಿದೆ.
ಡಿಸೆಂಬರ್ 13ರಂದು ಬೆಳಿಗ್ಗೆ 10ಗಂಟೆಗೆ 'ಮಾಸ್ಟರ್ ಸ್ಟ್ರೋಕ್' ಕಾರ್ಯಕ್ರಮ ನಡೆಯಲಿದೆ. ಝೂಮ್ ಮೂಲಕ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ವ್ಯಂಗ್ಯಚಿತ್ರಕಾರ ಇ.ಪಿ ಉನ್ನಿ, ದಿ ಹಿಂದೂ ವ್ಯಂಗ್ಯಚಿತ್ರಕಾರರಾದ ಸುರೇಂದ್ರ, ಮುಂಬೈ ಮಿರರ್ ವ್ಯಂಗ್ಯಚಿತ್ರಕಾರರಾದ ಹೇಮಂತ್ ಮಾರ್ಫಾರಿಯಾ, ಟೈಮ್ಸ್ ಆಪ್ ಇಂಡಿಯಾ ದ ವ್ಯಂಗ್ಯಚಿತ್ರಕಾರರಾದ ಸಂದೀಪ್ ಅದ್ವರ್ಯ ಹಾಗೂ ವೃತ್ತಿಪರ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ ಭಾಗವಹಿಸಲಿದ್ದಾರೆ. ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರರಾದ ಗುಜ್ಜಾರಪ್ಪ, ಜೇಮ್ಸ್ ವಾಝ್, ನಂಜುಂಡಸ್ವಾಮಿ, ಜೀವನ್ ಶೆಟ್ಟಿ, ದತ್ತಾತ್ರಿ, ಚಂದ್ರ ಗಂಗೊಳ್ಳಿ, ವಿಶ್ವನಾಥ್ ಶಿವರಾಂ, ಸಂತೋಷ್ ಸಸಿಹಿತ್ಲು ಮತ್ತಿತರ ವ್ಯಂಗ್ಯಚಿತ್ರಕಾರರು ಭಾಗವಹಿಸಲಿದ್ದಾರೆ.
ಅದೇ ದಿನ ಮದ್ಯಾಹ್ನ 'ಮಾಯಾ ಕಾಮತ್ ಕಾರ್ಟೂನು ಸ್ಪರ್ಧೆ' ನಡೆಯಲಿದೆ. ಈ ಸ್ಪರ್ದೆಯು ಉಡುಪಿ ಹಾಗೂ ದ.ಕ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕೊರೊನಾ ಕಾರ್ಟೂನು ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ ಸುಮಾರು ಏಳುನೂರು ವಿಧ್ಯಾರ್ಥಿಗಳು ರಚಿಸಿದ ಚಿತ್ರಗಳಲ್ಲಿ ಫೈನಲ್ ಸ್ಪರ್ಧೆಗೆ ಆಯ್ಕೆಯಾದ ಇಪ್ಪತ್ತು ವಿಧ್ಯಾರ್ಥಿಗಳಿಗಾಗಿ ಸ್ಯಾನಿಟೈಸ್ ಮಾಡಿದ ನಾಲ್ಕು ಕ್ಲಾಸ್ ರೂಂ ಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಫೈನಲ್ ಸ್ಪರ್ದೆ ನಡೆಯಲಿದೆ.
ಸಂಜೆ ಐದು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಕೋರೊನಾ ಲಾಕ್‌ಡೌನ್ ಕಾಲದಲ್ಲಿ ಜನಸಾಮಾನ್ಯರು ಭಯಭೀತರಾಗಿ ಮನೆಯಲ್ಲಿ ಕುಳಿತಿದ್ದಾಗ ಕುಂದಾಪುರ ಆಸುಪಾಸಿನ ಕೊರೋನಾ ರೋಗಿಗಳಿಗೆ ವಿವಿಧ ರೀತಿಯಲ್ಲಿ ಸೇವೆ ಒದಗಿಸಿದ ನಾಗರಾಜ್ ಕೋಟ, ವಿಠ್ಠಲ ಕುಂದರ್, ರಾಜೇಶ್ ಒಡೇರಹೋಬಳಿ, ಮೊಮಿನ್ ಸಮೀರ್, ಕು. ಮನಿಷಾ ಕರ್ವಾಲೋ, ಸಾಯಿನಾಥ್ ಶೇಟ್, ಇಮ್ತಿಯಾಝ್, ವಿಶ್ವನಾಥ್ ಹಾಗೂ ಕುಂದಾಪುರ ಕೋವಿಡ್ ಕೇರ್ ಆಸ್ಪತ್ರೆಯ ಕೋರೋನಾ ಯೋಧರುಗಳಾದ ಮಂಜುಳಾ ಟಿ, ಆಶಾ ಸುವರ್ಣ, ನಯನಾ, ತಾರಾ, ಕುಮಾರಿ ಜ್ಯೋತಿ ಆರ್,ಮಮತಾ ನಾಯ್ಕ್, ಮಮತಾ ಕರ್ಕೆರಾ, ಲವಿಟಾ, ಅಶ್ಮೀತಾ, ಸುಶ್ಮೀತಾ, ದೀಪಿಕಾ, ಜ್ಯೋತಿ ಡಿ. ನಾಯ್ಕ್, ಶಾಂಭವಿ, ಲೊಲಿಟಾ, ಮಂಜುಳಾ, ಸವಿತಾ, ಶಾಂತಾ, ದೀಪಕ್, ಮಹಂತೇಶ್, ರಾಜೇಶ್ ಕುಮಾರ್ ಮುಂತಾದವರಿಗೆ ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಈ ಸಮಯದಲ್ಲಿ ನಮ್ಮ ಜೊತೆ ವೇದಿಕೆಯಲ್ಲಿ ಮಂಗಳೂರು ವಿಭಾಗದ ಡಿಸಿಪಿ ಹರಿರಾಂ ಶಂಕರ್, ಉಡುಪಿಯ ಖ್ಯಾತ ಮನೋರೋಗ ತಜ್ಞ ಡಾ. ಪಿ.ವಿ ಭಂಡಾರಿ, ಮಂಗಳೂರಿನ ಖ್ಯಾತ ವೈಧ್ಯರೂ, ಚಿಂತಕರೂ ಆದ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಉಧ್ಯಮಿ ಕುಮಾರಿ ದಿವ್ಯಾ ಹೆಗ್ಡೆ ಮುಂತಾದವರು ಇರಲಿದ್ದಾರೆ ಎಂದು ಕಾರ್ಟೂನು ಹಬ್ಬ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಟೂನು ಹಬ್ಬಕ್ಕೆ ಶುಭ ಹಾರೈಸಿದ ಕಾಂಗ್ರೆಸ್ ನಾಯಕ, ಜನಪರ ಚಿಂತಕ ಶಶಿ ತರೂರ್ ಹಾಗೂ ಖ್ಯಾತ ನಟ, ಜನಪರ ಹೋರಾಟಗಾರ ಪ್ರಕಾಶ್ ರೈ.
____________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com