ಸ್ವಚ್ಚ- ಸುಂದರ ಕೋಟೇಶ್ವರದ ಕನಸು ಹೊತ್ತಿರುವ ಜನಪರ ನಾಯಕ ರಾಜಶೇಖರ ಶೆಟ್ಟಿ.
ಸ್ವಚ್ಚ- ಸುಂದರ ಕೋಟೇಶ್ವರದ ಕನಸು ಹೊತ್ತಿರುವ ಜನಪರ ನಾಯಕ ರಾಜಶೇಖರ ಶೆಟ್ಟಿ.
Advertisement
ಕುಂದಾಪುರ ತಾಲೂಕಿನ ಕೆಲವೇ ಕೆಲವು ಪ್ರತಿಷ್ಠಿತ ಗ್ರಾಮ ಪಂಚಾಯತ್ ಗಳಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ಪ್ರಮುಖವಾದುದು. ಇಲ್ಲಿ ಈ ಹಿಂದೆ ಮೂರು ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದು, ಒಂದು ಬಾರಿ ಉಪಾಧ್ಯಕ್ಷರಾಗಿ, ಮತ್ತೊಂದು ಬಾರಿ ಅಧ್ಯಕ್ಷರಾಗಿ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿರುವ ರಾಜ್‌ಶೇಖರ್ ಶೆಟ್ಟಿ ಇದೀಗ ಮತ್ತೊಮ್ಮೆ ಸ್ಪರ್ಧೆಯಲ್ಲಿ ಇರುವುದು ಕುತೂಹಲ ಕೆರಳಿಸಿದೆ. ಕಳೆದ 30ವರ್ಷಗಳಿಂದಲೂ ರಾಜಕೀಯದ ಮೂಲಕ ಅಶಕ್ತ ಜನರ ಸೇವೆಯಲ್ಲಿ ತೊಡಗಿರುವ ಶೆಟ್ಟರು ತನ್ನ ಅಧ್ಯಕ್ಷ ಅವಧಿಯಲ್ಲಿ ತನ್ನ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಟೇಶ್ವರದಲ್ಲಿ ಎರಡು ಸಿಲಿಕಾನ್ ಚೇಂಬರ್ ಅಳಡಿಸಿದ ಹಿಂದೂ ರುದ್ರಭೂಮಿ, ಸ್ವಚ್ಚಗ್ರಾಮ ಯೋಜನೆಯಡಿಯಲ್ಲಿ ಡ್ರೈನೇಜ್ ನಿರ್ಮಾಣ, ಬುಕ್ಕನಬೈಲು ಸಂಪರ್ಕ ರಸ್ತೆ, ಭಾಗವತರ ಓಣಿ ರಸ್ತೆ, ಹಳೆಅಳಿವೆ ಚೆನ್ನಯ್ಯ ರಸ್ತೆ, ಸ್ವಾಗತ್ ರಸ್ತೆ ಮುಂತಾದ ರಸ್ತೆ ಗಳಿಗೆ ಡಾಂಬರೀಕರಣ ಮುಂತಾದ ಜನೋಪಯೋಗಿ ಕಾಮಗಾರಿಗಳನ್ನು ಮಾಡುವ ಮೂಲಕ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ.
11ಬೂತ್‌ಗಳು, 26ಸದಸ್ಯರನ್ನು ಹೊಂದಿರುವ ಕೋಟೇಶ್ವರ ಗ್ರಾಮ ಪಂಚಾಯತ್ ನಲ್ಲಿ ಹಿರಿಯ ಅನುಭವಿಗಳಾದ ಜಾನಕಿ ಬಿಲ್ಲವ , ಬಾಗೀರಥಿ, ಚಂದ್ರ ದೇವಾಡಿಗ, ಶೇಖರ ಕುಮಾರ್, ಮಹಾಬಲ ಮೋಗವೀರ ಮುಂತಾದವರ ಜೊತೆ ವಿದ್ಯಾವಂತ ಯುವ ಅಭ್ಯರ್ಥಿಗಳಾದ ರಾಜೀವ ಗುರಿಕಾರ, ರಾಘವೇಂದ್ರ ಪೂಜಾರಿ, ಮಹೇಶ ಪೂಜಾರಿ, ಜಯಂತಿ, ಜ್ಯೋತಿ, ಸುಧಾಕರ ದೇವಾಡಿಗ, ಬಿ. ಸೂರ್ಯಕಾಂತಿ, ನೇತ್ರಾವತಿ, ಮಿಥುನ್ ಕುಮಾರ್, ಆಶಾ, ವಸಂತಿ ಪೂಜಾರಿ, ಹಸನ್ ಸಾಹೇಬ್, ಸಂತೋಷ್ ಬಂಗೇರ, ಮಾಲತಿ ಗಾಣಿಗ, ರತ್ನಾಕರ ದೇವಾಡಿಗ, ಸೀತಾ, ಗಿರಿಜಾ ಕಾಳ ಪೂಜಾರಿ, ನಾಗರತ್ನ, ರೋಯ್ಸನ್ ಡಿ'ಮೆಲ್ಲೋ ಮುಂತಾದವರ ತಂಡ ರಚಿಸಿಕೊಂಡಿರುವ ರಾಜಶೇಖರ ಶೆಟ್ಟಿಯವರು ಸ್ವಚ್ಚ- ಸುಂದರ ಕೋಟೇಶ್ವರದ ಕನಸು ಹೊತ್ತು ಸ್ಪರ್ಧೆಗಿಳಿದು ಜನರ ಬೆಂಬಲ ಯಾಚಿಸುತ್ತಿದ್ದಾರೆ.
ಏನದು ನಿಮ್ಮ ಸ್ವಚ್ಚ- ಸುಂದರ ಕೋಟೇಶ್ವರದ ಕನಸು ಎಂದು ಪ್ರಶ್ನಿಸಿದರೆ 'ಸ್ವಚ್ಚ ಸುಂದರ ಕೋಟೇಶ್ವರ ಯೋಜನೆಯ ಭಾಗವಾಗಿ ಕೋಟೇಶ್ವರ ಪೇಟೆಯ ಮದ್ಯದಲ್ಲಿರುವ ಗ್ರಾಮ ಪಂಚಾಯತ್ ಕಟ್ಟಡದ ಮೇಲಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಮ್ಮ ತಂಡ ಈಗಾಗಲೇ ಗುರುತಿಸಿರುವ ಒಂದು ಎಕ್ರೆ ವಿಸ್ತೀರ್ಣದ ಸರ್ಕಾರಿ ಜಾಗಕ್ಕೆ ವರ್ಗಾಯಿಸುವುದಕ್ಕೆ ನಾವು ಪ್ರಥಮ ಆದ್ಯತೆ ನೀಡಲಿದ್ದೇವೆ ಮತ್ತು ಆ ಮೂಲಕ ಕಸ ವಿಲೇವಾರಿಯನ್ನು ಸಮರ್ಪಕ ಗೊಳಿಸಲಿದ್ದೇವೆ. ಕೋಟೇಶ್ವರದ ಹೆಚ್ಚಿನ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು ಅಂತರ್ಜಲ ಹೆಚ್ಚಿಸುವಿಕೆಯ ಭಾಗವಾಗಿ ನಮ್ಮ ತಂಡ ಈಗಾಗಲೇ ಗುರುತಿಸಿರುವ ಎರಡು ಎಕ್ರೆ ಸರ್ಕಾರಿ ಜಾಗದಲ್ಲಿ ಕೆರೆ ನಿರ್ಮಾಣದ ಗುರಿ ಹೊಂದಿದ್ದೇವೆ. ಇಡೀ ಕೋಟೇಶ್ವರ ಪೇಟೆಯ ರಸ್ತೆಗಳ ಇಕ್ಕೆಲಗಳಲ್ಲಿ ಇಂಟರ್ ಲಾಕ್ ಅಳವಡಿಕೆ ಮಾಡಿ ಪಾರ್ಕಿಂಗ್ ಸಮಸ್ಯೆಯನ್ನು ಸಮರ್ಪಕಗೊಳಿಸುವ ಯೋಜನೆ ಹೊಂದಿದ್ದೇವೆ ಎನ್ನುತ್ತಾರೆ ರಾಜಶೇಖರ ಶೆಟ್ಟಿಯವರು.
_________________________________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com