ಬರಹ: ದಿನೇಶ್ ಕುಮಾರ್ ದಿನೂ ( ಲೇಖಕರು ಸಾಮಾಜಿಕ ಚಿಂತಕರು)
ಸಿಂಘು ಗಡಿಯಲ್ಲಿ ಇವತ್ತು ನಡೆದ ಘಟನೆಗಳೆಲ್ಲವೂ ಸರ್ಕಾರಿ ಪ್ರಾಯೋಜಿತ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ಸುಮಾರು ನೂರು ಮಂದಿಯ ಗೂಂಡಾಗಳ ಗುಂಪು, ಪೊಲೀಸರು ನಿರ್ಮಿಸಿರುವ ಮೂರು ಹಂತದ ತಡೆಗೋಡೆಗಳನ್ನು ಪೊಲೀಸರ ಸಮ್ಮುಖದಲ್ಲೇ ಆರಾಮಾಗಿ ದಾಟಿಕೊಂಡು ಬಂದು, ರೈತರ ಮೇಲೆ ಕಲ್ಲುಗಳನ್ನು ಎಸೆಯತೊಡಗುತ್ತಾರೆ. ಕೈಗೆ ಸಿಕ್ಕ ರೈತರ ಬಿಡಾರಗಳನ್ನು ನಾಶಪಡಿಸುತ್ತಾರೆ. ಪೊಲೀಸರು ನಿಂತ ಜಾಗದಿಂದ ಒಂದಿಂಚೂ ಅಲುಗದೆ ಇದನ್ನೆಲ್ಲ ನೋಡುತ್ತ ನಿಲ್ಲುತ್ತಾರೆ. ಪರಿಸ್ಥಿತಿ ಕೈ ಮೀರಿದ ಮೇಲೆ ರೈತರು ಆತ್ಮರಕ್ಷಣೆಗೆ ಪ್ರತಿದಾಳಿ ನಡೆಸುತ್ತಾರೆ. ಈ ಸಂದರ್ಭದಲ್ಲಿ ಗೂಂಡಾ ಒಬ್ಬನನ್ನು ರೈತನೊಬ್ಬ ಓಡಿಸಿಕೊಂಡು ಹೋಗುವಾಗ ಗೂಂಡಾ ರಕ್ಷಣೆಗೆ ಬಂದ ಪೊಲೀಸನೊಬ್ಬನ ಬೆರಳಿಗೆ ಏಟಾಗುತ್ತದೆ. ಕತ್ತಿ ಹಿಡಿದಿದ್ದ ಪಂಜಾಬಿ ರೈತನ ಫೊಟೋವನ್ನೇ ತೋರಿಸಿಕೊಂಡು ಗೋದಿ ಮೀಡಿಯಾ ಮಿಕ್ಕೆಲ್ಲ ವಿಷಯ ಮುಚ್ಚಿಡುತ್ತಿದೆ. ಇದು ಮತ್ತೊಂದು ಗೋದಿ ಮೀಡಿಯಾವೇ ಆಗಿರುವ ಆಜ್ ತಕ್ ನಲ್ಲಿ ಬಂದ ಲೈವ್ ವರದಿ. ಲೈವ್ ಆಗಿದ್ದರಿಂದ ಇಲ್ಲಿ ಸತ್ಯವನ್ನು ಮುಚ್ಚಿಡಲು ಸಾಧ್ಯವಾಗಿಲ್ಲ. ವರದಿಗಾರ್ತಿ ಕೂಡ ಧೈರ್ಯವಾಗಿ ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ದಾಳೆ. ( ನಾಳೆ ಆಕೆ ಕೆಲಸ ಕಳೆದುಕೊಳ್ಳದೇ ಇರಲಿ... ಪಾಪ!)
(Kannadamedia ಯೂಟ್ಯೂಬ್ ಚಾನಲ್ subscribe ಮಾಡಿ)
__________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com