ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಟ್ರ್ಯಾಕ್ಟರ್ ರ‌್ಯಾಲಿಯ ಹಳಿ ತಪ್ಪಿಸಿದವರು ಯಾರು? ಆ ಕುರಿತಾದ ಪ್ರತ್ಯಕ್ಷದರ್ಶಿ ಬರಹ!
ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಟ್ರ್ಯಾಕ್ಟರ್ ರ‌್ಯಾಲಿಯ ಹಳಿ ತಪ್ಪಿಸಿದವರು ಯಾರು? ಆ ಕುರಿತಾದ ಪ್ರತ್ಯಕ್ಷದರ್ಶಿ ಬರಹ!
Advertisement
ರಾಷ್ಟ್ರಧ್ವಜದ ಪಕ್ಕ ಸಿಖ್ ಧ್ವಜ ಹಾರಾಟ, ಕೆಂಪು ಕೋಟೆಗೆ ನುಗ್ಗಿದ್ದು, ಬ್ಯಾರಿಕೇಟ್ ದ್ವಂಸ ಮಾಡಿದ್ದು... ನಿಜಕ್ಕೂ ಶಾಂತಿಯುತವಾಗಿ ನಡೆಸಲುದ್ದೇಶಿಸಿದ್ದ ರೈತರ ಟ್ರ್ಯಾಕ್ಟರ್ ಪೆರೇಡ್ ನಲ್ಲಿ ಏನಾಯಿತು ? ಪ್ರತ್ಯಕ್ಷದರ್ಶಿ ಮತ್ತು ಪಂಜಾಬ್ ರೈತ ಸಂಘಟನೆಯ ನಿಕಟವರ್ತಿ ಜಾಸ್ ಸಿಂಗ್ ವಾಲಿಯಾ ಬರೆಯುತ್ತಾರೆ. ಇದು ಬೇಕು ಬೇಕಾದಲ್ಲಿ ಕೇಸರಿ ಧ್ವಜ ಮತ್ತು ಓಂ ಚಿನ್ಹೆ ಬಳಸುವ ಹಿಂದುತ್ವವಾದಿಗಳ ಬಗ್ಗೆಯೂ ಹಿಂದೂ ಧರ್ಮಗುರುಗಳು ಚಿಂತಿಸುವಂತಿದೆ.
ಕನ್ನಡಕ್ಕೆ ಅನುವಾದ : ನವೀನ್ ಸೂರಿಂಜೆ (ಅನುವಾದಕರು ಜನಪರ ಚಿಂತಕರು ಹಾಗೂ ಜನಪ್ರಿಯ ಪತ್ರಕರ್ತರು)
1. ಜನವರಿ 25 ರಂದು ಯುವಕರ ಗುಂಪು ಸಿಂಘು ಬಾರ್ಡರ್ ನಲ್ಲೇ ರೈತರ ವೇದಿಕೆಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿತು. ಇದನ್ನು ರೈತ ಸಂಘಟನೆಯ ನಾಯಕರು ತಡೆದರು.
2. ಇದೇ ಗುಂಪು ಜನವರಿ 26 ರಂದು ಬೆಳಿಗ್ಗೆ 8 ಗಂಟೆಗೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಸರಿಸಿ ನುಗ್ಗಿದರು. ವಾಸ್ತವವಾಗಿ ರೈತ ನಾಯಕರು ಪೆರೇಡ್ ಹೊರಡಲು ನೀಡಿದ್ದ ಸಮಯ ಬೆಳಿಗ್ಗೆ 10.30 ಕ್ಕೆ. ಆದರೆ ರೈತ ನಾಯಕರು ನೀಡಿದ ಸಮಯಕ್ಕೂ ಮೊದಲೇ ಈ ಅನಧಿಕೃತ ಗುಂಪು ಪೆರೇಡ್ ಹೊರಡುತ್ತದೆ.
3. ದೀಪ್ ಸಿಧು ಮತ್ತು ಲಖಾ ಸಿದ್ ನೇತೃತ್ವದ ಈ ಗುಂಪು ಟ್ರ್ಯಾಕ್ಟರ್ ಮಾರ್ಚ್ ಅನ್ನು ನಿಗದಿತ ಮಾರ್ಗದ ಬದಲು ಕೆಂಪು ಕೋಟೆಯ ಕಡೆಗೆ ತಿರುಗಿಸಲು ಯಶಸ್ವಿಯಾದರು. ನಿಜವಾದ ರೈತ ನಾಯಕ ಟ್ರ್ಯಾಕ್ಟರ್ ಪೇರೇಡ್ ಅನ್ನು ಮುನ್ನಡೆಸುತ್ತಿದ್ದ ಸರ್ದಾರ್ ಲಖೋವಾಲ್ ಮತ್ತು ರಾಜಜೀವಲ್ ಜಿ ಅವರು ಈ ಅನಧಿಕೃತ ಗುಂಪನ್ನು ತಡೆಯಲು ಮತ್ತು ಕೆಂಪುಕೋಟೆಯತ್ತಾ ಹೋಗದಂತೆ ವಿನಂತಿಸಿದರೂ ಫಲ ನೀಡಲಿಲ್ಲ.
4. ರೈತರ ಹೆಸರಿನ ಅನಧಿಕೃತ ಗುಂಪು ಹೆಚ್ಚಿನ ಸಂಖ್ಯೆಯ ಟ್ರಾಕ್ಟರುಗಳನ್ನು ಕೆಂಪು ಕೋಟೆಯ ಕಡೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು, ಏಕೆಂದರೆ ಯಾವುದೇ ಚಾಲಕರು ಮಾರ್ಗವನ್ನು ತಿಳಿದಿರಲಿಲ್ಲ. ಅವರು ಕೇವಲ ಮುಂದಿದ್ದ ಟ್ರಾಕ್ಟರ್ ಅನ್ನು ಅನುಸರಿಸುತ್ತಿದ್ದರು.
5. ಮುಂದೆ ಕೆಂಪು ಕೋಟೆಯಲ್ಲಿ ಮತ್ತು ಐಟಿಒ ಚೌಕ್‌ನಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ.
ನಮ್ಮ ಮುಂದಿರುವ ಅನುಮಾನಗಳು :
ರೈತರ ಪ್ರತಿಭಟನೆ ಜನವರಿ 26 ರಂದು ತನ್ನ ಪರಾಕಾಷ್ಠೆಯನ್ನು ತಲುಪಿತು. ನವದೆಹಲಿಯಲ್ಲಿ ಮಾತ್ರವಲ್ಲ, ಮುಂಬೈ, ಬೆಂಗಳೂರು, ಉತ್ತರ ಪ್ರದೇಶ ಸೇರಿದಂತೆ ಹಲವು ನಗರಗಳಲ್ಲೂ ಸಹ ಜೋರಾದ ಪ್ರತಿಭಟನೆಗಳು ನಡೆದವು. ಈ ಪ್ರತಿಭಟನೆಯು ಒಂದು ದೊಡ್ಡ ಮಟ್ಟದಲ್ಲಿ ಅಂತರರಾಷ್ಟ್ರೀಯ ಮಾಧ್ಯಮ ಪ್ರಸಾರವನ್ನು ಪಡೆಯುತ್ತದೆ ಎಂದು ಮೊದಲೇ ಗೊತ್ತಿದ್ದರಿಂದ ಶಾಂತಿಯುವಾಗಿ ನಡೆಸಲು ನಿರ್ಧರಿಸಲಾಗಿತ್ತು.
ಆದರೆ ಹೋರಾಟವು ಶಾಂತಿಯುವಾಗಿ ಯಶಸ್ವಿಯಾಗುವುದು ಅಧಿಕಾರಿಶಾಹಿಗಳಿಗೆ ಇಷ್ಟವಿರಲಿಲ್ಲ. ಆದ್ದರಿಂದ ಸಂಪೂರ್ಣ ಟ್ರ್ಯಾಕ್ಟರ್ ಪೆರೇಡ್ ಅನ್ನು ಅಪಖ್ಯಾತಿ ಮಾಡುವುದು ಒಂದೇ ಮಾರ್ಗ ಆಡಳಿತದ ಮುಂದಿತ್ತು. ಈ ಎಲ್ಲಾ ಘಟನೆಯನ್ನು ನೋಡಿದಾಗ ಇದೆಲ್ಲವೂ ಪೂರ್ವನಿಯೋಜಿತ ಎಂದು ಸ್ಪಷ್ಟವಾಗುತ್ತದೆ.
ಕೆಂಪು ಕೋಟೆಗೆ ರೈತರನ್ನು ದಾರಿ ತಪ್ಪಿಸಿ ಕರೆದೊಯ್ದ ದೀಪ್ ಸಿಧು ಎಂಬಾತ ಬಿಜೆಪಿ ಸಂಸದ ಸನ್ನಿ ಡಿಯೋಲ್ ಬೆಂಬಲಿಗರಾಗಿದ್ದಾರೆ. ಶಂಭು ಬಾರ್ಡರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೂ ದೀಪ್ ಸಿದ್ ಬಂದಿದ್ದ. ಈತನ ಜೊತೆ ಇದ್ದ ಲಖಾ ಸಿದ್ ಗೆ ರಕ್ತಸಿಕ್ತ ಇತಿಹಾಸವಿದೆ.
ನಾವು ಈಗ ಎಲ್ಲಿ ನಿಲ್ಲುತ್ತೇವೆ ...
ಇದ್ದಕ್ಕಿದ್ದಂತೆ, ವಿವಾದಾಸ್ಪದ ಕೃಷಿ ಕಾನೂನುಗಳು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿ ಬದಲಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡಿಸುವಂತಹ ವಿಷಯಗಳಿಂದ ರೈತ ನಾಯಕರು ದೂರ ನಿಲ್ಲುತ್ತಾರೆ. ಇದು ಪಂಜಾಬ್ ರೈತ ನಾಯಕರ ನಿಲುವು. ಕಳೆದುಹೋದ ಹಿಡಿತವನ್ನು ಮರಳಿ ಪಡೆಯುವುದು ಇಲ್ಲಿಂದ ಮುಂದೆ ಕಠಿಣ ಕಾರ್ಯವಾಗಿದೆ.
ಸಿಖ್ ಸಮುದಾಯ ಮತ್ತು ಸಿಖ್ ಧರ್ಮಗುರುಗಳು ಗಮನ ಹರಿಸಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ, ಸಿಖ್ ಸಮುದಾಯದ ಚಿನ್ಹೆ ಮತ್ತು ದ್ವಜವನ್ನು ಬಹಿರಂಗ ಸಾಗಾಟ ಮತ್ತು ಬಳಕೆ ಮಾಡಲು ನಿಯಮಗಳನ್ನು ರೂಪಿಸಬೇಕಿದೆ. ನಿಶಾನ್ ಸಾಹಿಬ್ ಅನ್ನು ಬೇರೆ ಯಾವುದೇ ರಾಜಕೀಯ ಪಕ್ಷದ ಧ್ವಜದಂತೆ ಬೇಕಾಬಿಟ್ಟಿ ಸಾಗಿಸಬಾರದು. ನಿಶಾನ್ ಸಾಹಿಬ್ ಮತ್ತು ಶ್ರೀ ಗುರುಗ್ರಂಥ ಸಾಹಿಬ್ ಅನ್ನು ಸಾಗಾಟ ಮತ್ತು ಬಳಕೆಗೆ ನಿಯಮ ರೂಪಿಸಬೇಕು.
ನಿಶಾನ್ ಸಾಹಿಬ್ ಅನ್ನು ಕೋಟೆ ಮೇಲೆ ಮೇಲೆ ಹಾರಿಸಿದ ದುಷ್ಕರ್ಮಿಗಳನ್ನು ಕ್ಷಮಿಸಲಾಗದು. ಸಿಖ್ ಪರಮೊಚ್ಚ ಧರ್ಮಗುರುಗಳಾದ ಜತೇದರ್ ಆಫ್ ದ ಅಕಾಲ್ ತಖ್ತ್ ಈ ಬಗ್ಗೆ ಗಮನಹರಿಸಿ ನಿಶಾನ್ ಸಾಹಿಬ್ ದ್ವಜವನ್ನು ಮತ್ತು ಚಿನ್ನೆಯನ್ನು ದುರುಪಯೋಗ ಪಡಿಸಿದ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ಮುಂದೆ ಈ ರೀತಿ ಧರ್ಮದ ಚಿನ್ಹೆಯನ್ನು ಬೇಕಾಬಿಟ್ಟಿ ಬಳಸದಂತೆ ಸೂಕ್ತ ನಿಯಮಾವಳಿ ರೂಪಿಸಬೇಕು.
.....................................
ಸರ್ವಾಧಿಕಾರಿ ಆಡಳಿತಗಾರರು ಹೋರಾಟವನ್ನು ಅದು ಹೇಗೆ ಧಮನಿಸುತ್ತಾರೆ, ಹೋರಾಟಗಾರರನ್ನು ಅದು ಹೇಗೆ ನಿಗ್ರಹಿಸುತ್ತಾರೆ ಎಂಬ ಕುರಿತು ಚಕ್ರವರ್ತಿ ಚಂದ್ರಚೂಡ್ ರವರು ಡಾ. ರಾಜ್ ಅಭಿನಯದ ಹಳೆಯ ಚಲನಚಿತ್ರವೊಂದರ ತುಣುಕನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ತುಣುಕಿನ ದೃಶ್ಯಗಳಿಗೂ ರೈತಹೋರಾಟದಲ್ಲಿ ನಡೆದ ದುಷ್ಕೃತ್ಯದ ಘಟನೆಗಳಿಗೂ ಸಾಮ್ಯತೆ ಇರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.
- ಸಂಪಾದಕ
__________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com