ಕೆಂಪುಕೋಟೆಯ ಮೇಲೆ ಸಿಖ್ ಧ್ವಜ ವಿವಾದ: ಧ್ವಜ ಹಾರಿಸಿದ ದುಷ್ಕರ್ಮಿ ಮೋದಿ, ಷಾ ರ ಆಪ್ತ?
ಕೆಂಪುಕೋಟೆಯ ಮೇಲೆ ಸಿಖ್ ಧ್ವಜ ವಿವಾದ: ಧ್ವಜ ಹಾರಿಸಿದ ದುಷ್ಕರ್ಮಿ ಮೋದಿ, ಷಾ ರ ಆಪ್ತ?
Advertisement
ಕೇಂದ್ರದ ಮೋದಿ ಸರ್ಕಾರ ಜಾರಿಗೊಳಿಸಿರುವ ರೈತವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ನಡೆಸಿದ ನಿನ್ನೆಯ ರೈತಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ‌್ಯಾಲಿಯ ವೇಳೆ 'ಕೆಂಪುಕೋಟೆಯ ಮೇಲಿನ ರಾಷ್ಟ್ರಧ್ವಜ ಕಿತ್ತು ಸಿಖ್ ಧ್ವಜ ಸ್ಥಾಪಿಸಲಾಗಿತ್ತು' ಎಂಬ ವಿವಾದ ಇದೀಗ ಮಹತ್ತರವಾದ ತಿರುವು ಪಡೆದುಕೊಂಡಿದ್ದು ಇದರಲ್ಲಿ ರಾಷ್ಟ್ರಧ್ವಜ ಕಿತ್ತು, ಸಿಖ್ ಧ್ವಜ ಕಟ್ಟಿದ ದೀಪ್ ಸಿಧು ಎಂಬ ವ್ಯಕ್ತಿಯ ಜೊತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗ್ರಹಸಚಿವ ಅಮಿತ್ ಷಾ ನಿಕಟ ಸಂಪರ್ಕ ಹೊಂದಿರುವ ಅಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಸುಪ್ರೀಂಕೋರ್ಟ್‌ನ ಜನಪ್ರಿಯ ಹಾಗೂ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ನಿನ್ನೆ ಟ್ವೀಟ್ ಮಾಡಿದ್ದು ಆ ದುಷ್ಕರ್ಮಿ ಸಿಧು, ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಜೊತೆ ಆತ್ಮೀಯತೆಯಿಂದ ಜೊತೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿರುವ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಆ ಪೋಸ್ಟ್ ಅನ್ನು ಕೇವಲ 10 ಗಂಟೆಯಲ್ಲಿ ಬರೋಬ್ಬರಿ 25,400 ಜನ ಮೆಚ್ಚಿಕೊಂಡಿದ್ದರೆ, 8,682 ರೀಟ್ವೀಟ್ ಮಾಡಲಾಗಿದ್ದರೆ ಹಾಗೂ 2,165 ಪರ ವಿರೋಧಗಳ ಕಾಮೆಂಟ್ ಮಾಡಲಾಗಿದೆ.
ಹಿರಿಯ ಹಾಗೂ ಶಾಂತಿವಾದಿ ರೈತ ಹೋರಾಟಗಾರರ ಪ್ರಬಲ ವಿರೋಧದ ನಡುವೆಯೂ ಕೆಂಪುಕೋಟೆಯಲ್ಲಿ ಸಿಖ್ ಧ್ವಜವನ್ನು ಧ್ವಜಸ್ತಂಭಕ್ಕೆ ಏರಿಸಿದ ಪ್ರಕರಣದಲ್ಲಿ ಖಚಿತವಾಗಿಯೂ ರೈತಹೋರಾಟಗಾರರನ್ನು ಪ್ರತ್ಯೇಕತವಾದಿ ಖಲಿಸ್ಥಾನಿ ಹೋರಾಟಗಾರರು ಎಂದು ಬಿಂಬಿಸುವ ಮೂಲಕ ಕೃಷಿ ಕಾಯ್ದೆಯ ವಿರುದ್ಧದ ಹೋರಾಟದ ದಿಕ್ಕು ತಪ್ಪಿಸುವ ಷಡ್ಯಂತ್ರವನ್ನು ಬಿಜೆಪಿ ಹೊಂದಿದೆ ಅದರ ಭಾಗವಾಗಿಯೇ ಪ್ರಧಾನಿ ಮತ್ತು ಗೃಹಸಚಿವರ ಜೊತೆ ನಿಕಟ ಸಂಬಂಧ ಹೊಂದಿರುವ ದೀಪ್ ಸಿಧು ಸ್ವತಃ ಪೀಲ್ಡಿಗಿಳಿದು ಈ ಕುಕೃತ್ಯ ಎಸಗಿದ್ದಾನೆಯೇ ಎಂಬ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ದಟ್ಟವಾಗತೊಡಗಿದೆ.
ಬರೋಬ್ಬರಿ ಎರಡು ತಿಂಗಳುಗಳಿಂದ ದೆಹಲಿಯಲ್ಲಿ ಹಗಲು ರಾತ್ರಿಯೆನ್ನದೇ ನಡೆಯುತ್ತಿರುವ ರೈತಚಳವಳಿಯಲ್ಲಿ ಈ ತನಕ 120ಕ್ಕೂ ಹೆಚ್ಚು ರೈತರು ವಿಪರೀತ ಚಳಿ ಹಾಗೂ ಇನ್ನಿತರ ಕಾರಣಗಳಿಂದ ಮೃತಪಟ್ಟ ಸಮಯದಲ್ಲಿ ಯಾವುದೇ ಮುಂಚೂಣಿ ಹೋರಾಟದಲ್ಲಿ ಭಾಗಿಯಾಗದ ಈ ದೀಪ್ ಸಿಧು ನಿನ್ನೆಯ ಟ್ರ್ಯಾಕ್ಟರ್ ರ‌್ಯಾಲಿಯ ಸಂಧರ್ಭದಲ್ಲಿ ಯುವಕರ ದಂಡು ಕಟ್ಟಿಕೊಂಡು ಕೆಂಪುಕೋಟೆಯ ಆವರಣ ಪ್ರವೇಶಿಸಿ ಅಲ್ಲಿ ಸಿಖ್ ದಾರ್ಮಿಕ ಧ್ವಜ ಹಾರಿಸಿದ್ದ. ರೈತರ ಪ್ರತಿಭಟನೆಯ ಕುರಿತು ಕೆಟ್ಟ ಹೆಸರು ತರಲು ಬಿಜೆಪಿಗರು ಮತ್ತವರ ಎಂಜಲುಕಾಸಿ ದೃಶ್ಯ, ಜಾಲತಾಣ ಹಾಗೂ ಮುದ್ರಣ ಮಾಧ್ಯಮಗಳು ಪ್ರತಿಭಟನೆ ಆರಂಭಗೊಂಡ ದಿನದಿಂದಲೇ ದೇಶದಾದ್ಯಂತ ರೈತರ ವಿರುದ್ಧವಾಗಿ ಅಪಪ್ರಚಾರ ಆರಂಬಿಸಿದ್ದು ಅದರ ಮುಂದುವರಿದ ಭಾಗವಾಗಿಯೇ ಇದೀಗ ದೀಪ್ ಸಿಧು ಎಂಬಾತ ಈ ಕುಕೃತ್ಯ ಎಸಗಿದ್ದಾನೆ ಎಂಬ ವಿಚಾರದಲ್ಲಿ ಎರಡು ಮಾತಿಲ್ಲ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಹಾಗೂ ಹತ್ತು ಲಕ್ಷಕ್ಕೂ ಹೆಚ್ಚು ಮಹಿಳಾ ಹಾಗೂ ಪುರುಷ ರೈತರು ಭಾಗವಹಿಸಿದ್ದ ರ‌್ಯಾಲಿ ಪೋಲಿಸ್ ಇಲಾಖೆಯ ಎಲ್ಲಾ ನಿರ್ದೇಶನಗಳನ್ನು ಕರಾರುವಕ್ಕಾಗಿ ಪಾಲಿಸಿತ್ತು ಆದರೆ ಈ ಧ್ವಜ ಪ್ರಕರಣ ಹೋರಾಟಗಾರರು ಮತ್ತು ಪೋಲಿಸ್ ಸಿಬ್ಬಂದಿಯ ಕೈಯನ್ನು ಮೀರಿ ನಡೆದ ಪ್ರಕರಣವಾಗಿದ್ದು ಖಂಡಿತವಾಗಿಯೂ ಈ ಕುರಿತು ನಿಷ್ಪಕ್ಷಪಾತವಾದ ಉನ್ನತ ಮಟ್ಟದ ತನಿಖೆಯಾಗುವ ಅಗತ್ಯವಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ರೈತರ ಹೋರಾಟಕ್ಕೆ ಜಯವಾಗಲಿ ಎಂದು www.kannadamedia.com ಹಾರೈಸುತ್ತದೆ.
__________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com