ದೇಶದ 72 ನೇ ಸೇನಾದಿನಾಚರಣೆ; ಭಾರತದ ಹುತಾತ್ಮ ಯೋಧರಿಗೆ ನಮನ
ದೇಶದ 72 ನೇ ಸೇನಾದಿನಾಚರಣೆ; ಭಾರತದ ಹುತಾತ್ಮ ಯೋಧರಿಗೆ ನಮನ
Advertisement
72 ನೇ ಸೇನಾದಿನಾಚರಣೆ- ಭಾರತದ ಹುತಾತ್ಮ ಯೋಧರಿಗೆ ದೇಶದ ನಮನ ;ನವಶಕ್ತಿ ಮಹಿಳಾ ವೇದಿಕೆ ರಿ.ಕೊಲ್ಲೂರು ಇವರ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸದಸ್ಯರಾದ ಶ್ರೀಮತಿ ಶಾರದಾ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನವಶಕ್ತಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಗ್ರೀಷ್ಮಾ ಗಿರಿಧರ್ ಭಿಡೆ ಅವರು ಮಾತನಾಡಿ, ಭಾರತ ದೇಶದ ಕಾವಲುಗಾರರಾಗಿ ತನ್ನ ಕುಟುಂಬ ಮಡದಿ ಮಕ್ಕಳನ್ನು ಬಿಟ್ಟು ತಮ್ಮ ಜೀವದ ಹಂಗು ತೊರೆದು ಹಗಲು ಇರುಳೆನ್ನದೆ ನಮ್ಮೆಲ್ಲರ, ನಮ್ಮ ದೇಶದ ರಕ್ಷಣೆಯನ್ನು ಮಾಡುತ್ತಿರುವ ಸರ್ವ ವೀರ ಯೋಧರಿಗೆ ತಮ್ಮ ದಿನವಾದ ಸೈನಿಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು. ಈ ಯುಗದಲ್ಲಿ ಎಲ್ಲರೂ ಡಾಕ್ಟರ್, ಇಂಜಿನಿಯರ್ ಮೊದಲಾದ ವಿದ್ಯಾಭ್ಯಾಸ ವೃತ್ತಿಜೀವನವನ್ನು ಮುಗಿಸಿ ಒಂದು ಒಳ್ಳೆಯ ಕೆಲಸವನ್ನು ಪಡೆದು ತನ್ನ ಕುಟುಂಬ, ಮಡದಿ ಮಕ್ಕಳ ಜೊತೆ ಸಂತೋಷದಿಂದ ಇದ್ದಾರೆ, ಎಂದಾದರೆ ಒಂದು ದೂರದ ಗಡಿ ಪ್ರದೇಶದಲ್ಲಿ ನಮ್ಮೆಲ್ಲರನ್ನು ರಕ್ಷಣೆ ಮಾಡಿ ತನ್ನ ಎದುರಾಳಿಗಳನ್ನು ಸದೆಬಡೆದು ಒಡೆದೆಬ್ಬಿಸಿ ತನ್ನ ಪ್ರಾಮಾಣಿಕ ಸೇವೆಯನ್ನು ಮಾಡಿ ಇಂದು ನಿಜವಾದ ಹೀರೋಗಳಾಗಿದ್ದಾರೆ ಇವರೇ ನಮ್ಮ ದೇಶದ ವೀರ ಯೋಧರು. ಈ ಸಮಾಜದಲ್ಲಿ ಎಲ್ಲರೂ ತನ್ನ ಆಸೆಯ ಮೇರೆಗೆ ಒಳ್ಳೆಯ ವೃತ್ತಿಜೀವನಕ್ಕೆ ಅನುಗುಣವಾಗಿ ಒಂದು ಕೆಲಸದಲ್ಲಿ ಇರುವಾಗ ನಾನೊಬ್ಬ ಸೈನಿಕ ನಾಗುವೆ ಎಂದು ಆಸೆ ಪಡುವವರು ಕಡಿಮೆ. ಇದರಲ್ಲಿ ಕಷ್ಟ ನೋವು ಇದ್ದೇ ಇದೆ.ಆದರೆ ತನ್ನ ದೇಶದ ರಕ್ಷಣೆ ಮಾಡುತ್ತೇನೆ, ನನ್ನ ಜೀವ ಈ ದೇಶದ ಮಣ್ಣಿಗಾಗಿ ಎನ್ನುವ ಯೋಧರ ಅಭಿಮಾನ ನಿಜಕ್ಕೂ ಶ್ಲಾಘನೀಯ ಎಂದರು. ಸಮಿತಿಯ ಕಾರ್ಯದರ್ಶಿ ಸುಜಾತ ಆಚಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸದಸ್ಯೆ ಶಕುಂತಲಾ ಸ್ವಾಗತಿಸಿದರು. ಸುಷ್ಮಾ ವಂದಿಸಿದರು.
__________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com