Advertisement

2021: ಕೆಪಿಸಿಸಿಗೆ ಸಂಘರ್ಷ ಹಾಗೂ ಸಂಘಟನೆಯ ವರ್ಷ- ಡಿ.ಕೆ ಶಿವಕುಮಾರ್ ಘೋಷಣೆ.

Advertisement

2021ನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಘಟನೆ ಹಾಗೂ ಸಂಘರ್ಷದ ವರ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ. ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳಲಾದ ಮೈಸೂರು ವಿಭಾಗ ಮಟ್ಟದ 'ಸಂಕಲ್ಪ ಸಮಾವೇಶ' ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೂತ್ ಮಟ್ಟದಲ್ಲಿ ಎಲ್ಲಾ ವರ್ಗದ ಕಾರ್ಯಕರ್ತರನ್ನು, ಮಹಿಳೆಯರನ್ನು, ಯುವಕರನ್ನು ಹಾಗೂ ಸಾಮಾಜಿಕ ಜಾಲತಾಣದ ಸಕ್ರೀಯರನ್ನು ಒಳಗೂಡಿಸಿಕೊಂಡು ಪಕ್ಷದ ಎಲ್ಲಾ ಘಟಕಗಳನ್ನು ಪುನರ್ರಚಿಸುವುದರ ಮೂಲಕ ಪಕ್ಷವನ್ನು ಕೇಡರ್ ಬೇಸ್ ಪಕ್ಷವಾಗಿ ರೂಪಿಸುವುದು ಕೆಪಿಸಿಸಿಯ ಗುರಿಯಾಗಿದೆ. ಪಕ್ಷದ ಪದಾದಿಕಾರಿಯಾದವರು ಪಕ್ಷದ ಸಿದ್ದಾಂತದ ಕುರಿತು ಗೌರವದ ಭಾವನೆ ಹೊಂದಿರಬೇಕು, ಆ ಕುರಿತು ಬದ್ಧತೆಯನ್ನು ಹೊಂದಿರಬೇಕು, ಪಕ್ಷ ಸಂಘಟನೆಗೆ ಸಮಯ ನೀಡಲು ಸಿದ್ದರಿರಬೇಕು. ಕೇವಲ ಲೆಟರ್‌ಹೆಡ್- ವಿಸಿಟಿಂಗ್ ಕಾರ್ಡ್‌ಗಾಗಿ, ತಮ್ಮ ವ್ಯಾಪಾರ ವೃದ್ದಿಸಿಕೊಳ್ಳಲು ಅಥವಾ ಪ್ರತಿಷ್ಠೆಗಾಗಿ ಪಕ್ಷದ ಪದವಿಯನ್ನು ದುರುಪಯೋಗ ಪಡಿಸಿಕೊಳ್ಳುವವರು ದಯವಿಟ್ಟು ಆ ಸ್ಥಾನವನ್ನು ಪಕ್ಷ ಕಟ್ಟುವ ಮನಸ್ಸು ಹಾಗೂ ಸಮಯ ನೀಡುವ ಬದ್ಧತೆಯುಳ್ಳವರಿಗೆ ಬಿಟ್ಟುಕೊಡಬೇಕು. ರಾಜಕೀಯ ಎಂದರೆ ವ್ಯವಸಾಯ ಇದ್ದ ಹಾಗೆ. ಕಾಲಕಾಲಕ್ಕೆ ಗಿಡಮರಗಳಿಗೆ ನೀರು, ಗೊಬ್ಬರ ಕೊಟ್ಟಂತೆ ಪಕ್ಷದ ಸಂಘಟನೆಯನ್ನು ಕಾಲಕಾಲಕ್ಕೆ ಬಲಿಷ್ಠಗೊಳಿಸಬೇಕು. ಇಲ್ಲವಾದರೆ ಪದಾದಿಕಾರಿಗಳ ಉದಾಶೀನದಿಂದ ಪಕ್ಷ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಅದನ್ನು ಕೆಪಿಸಿಸಿ ಅಧ್ಯಕ್ಷನಾಗಿ ನಾನು ಸಹಿಸುವ ಪ್ರಶ್ನೆಯೇ ಇಲ್ಲ. ಚುನಾವಣೆ ಸಮಯದಲ್ಲಷ್ಟೇ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವವರು ನಾಯಕರಲ್ಲ. ಜನರ ಮದ್ಯೆ ಸದಾ ಇದ್ದು ಪಕ್ಷ ಸಂಘಟನೆಗೆ ಆದ್ಯತೆ ನೀಡುವವರಿಗೆ ಪಕ್ಷ ಹುದ್ದೆಗಳನ್ನು ನೀಡಲಿದೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಪ್ರತಿ ಬ್ಲಾಕ್ ಮಟ್ಟದಲ್ಲಿ ಹೋರಾಟ ಮಾಡುವ ಮೂಲಕ ಪಕ್ಷವನ್ನು ಪುನರ್ ಸಂಘಟಿಸುವುದು ಕೆಪಿಸಿಸಿಯ ಗುರಿಯಾಗಿದೆ. ಎಐಸಿಸಿಯ ನಿರ್ದೇಶನದಂತೆ ಚುನಾವಣೆಗಳಲ್ಲಿ ಕಳಪೆ ಫಲಿತಾಂಶ ನೀಡಿದ ಪದಾದಿಕಾರಿಗಳನ್ನು ಬದಲಿಸಿ ಪಕ್ಷ ನಿಷ್ಠೆ ಹಾಗೂ ಬದ್ದತೆ ಹೊಂದಿರುವ ಹೊಸ ಮತ್ತು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಕಾರ್ಯಕರ್ತರಿಗೆ ನೀಡಲಾಗುವುದು ಎಂದವರು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದಿಯಾಗಿ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿದಾನಪರಿಷತ್‌ನ ವಿರೋಧ ಪಕ್ಷ ನಾಯಕ ಎಸ್.ಆರ್. ಪಾಟೀಲ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ಯು.ಟಿ ಖಾದರ್, ಮಾಜಿ ಸಚಿವ ರಮಾನಾಥ್ ರೈ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಸುಂದರೇಶ್ ಮುಂತಾದವರು ವೇದಿಕೆಯಲ್ಲಿ ಕುಳಿತುಕೊಳ್ಳದೇ ಕಾರ್ಯಕರ್ತರ ಜೊತೆಯಲ್ಲೆ ಕುಳಿತಿದ್ದರು. ಪದಾದಿಕಾರಿಗಳು ತಮ್ಮ ಸರದಿ ಬಂದಾಗಲಷ್ಟೆ ವೇದಿಕೆಗೆ ತೆರಳಿ ತಮ್ಮ ಸೀಮಿತ ಅವಧಿಯಲ್ಲಿ ಸಭೆಯಲ್ಲಿ ಭಾಗವಹಿಸಿರುವ ಯಾವುದೇ ನಾಯಕರ ಹೆಸರು ಹೇಳದೆ ಕೇವಲ ತಮ್ಮ ಘಟಕದ ಸಾಧಕ, ಬಾದಕಗಳನ್ನಷ್ಟೆ ಹೇಳಿ ಕೆಳಕ್ಕಿಳಿಯುವ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು. ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಶಿಸ್ತಿಗೆ ಹೇಗೆ ಆದ್ಯತೆ ನೀಡಲಾಗುತ್ತದೆ ಎಂಬುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement